ಮೈಸೂರಿನ ಲಲಿತಾಮಹಲ್ ಪ್ಯಾಲೇಸ್ ರಸ್ತೆಯ
ದಿವಂಗತ ಶ್ರೀತೂಗುದೀಪ ಶ್ರೀನಿವಾಸ್ ರವರ ವೃತ್ತದ ಆವರಣದಲ್ಲಿ
ಚಾಲೆಜಿಂಗ್ ಸ್ಟಾರ್ ದರ್ಶನ್ ಅಭಿಮಾನಿ ಬಳಗದ ಮುಖ್ಯಸ್ಥರು,ಬನ್ನೂರಿನ ಸಮಾಜ ಸೇವಕರು ಮತ್ತು ಬನ್ನೂರು ಪರಿಸರ ಜಾಗೃತಿ ವೇದಿಕೆಯ ಅಧ್ಯಕ್ಷರು ಹಾಗೂ ಬನ್ನೂರು ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷರಾದ MPHF ಡಾ.ಕೆ.ಮಹೇಂದ್ರ ಸಿಂಗ್ ಕಾಳಪ್ಪ ನವರ ನೇತೃತ್ವದಲ್ಲಿಂದು ದಿ.ತೂಗುದೀಪ ಶ್ರೀನಿವಾಸ್ ರವರ ಭಾವಚಿತ್ರಕ್ಕೆ ಪುಷ್ಪರ್ಚನೆ ಮಾಡಿ ವಿವಿಧ ಜಾತಿಯ ಸಸಿಗಳನ್ನು ನೆಡುವ ಮೂಲಕ ದಿ.ಶ್ರೀತೂಗುದೀಪ ಶ್ರೀನಿವಾಸ್ ರವರ 26ನೇ ವರ್ಷದ
ಪುಣ್ಯಸ್ಮರಣೆಯನ್ನು ಬಹಳ ಸರಳವಾಗಿ ಅರ್ಥಪೂರ್ಣವಾಗಿ ಆಚರಿಸಲಾಯಿತ್ತು.
ದಿವಂಗತ ತೂಗುದೀಪ ಶ್ರೀನಿವಾಸ್ ರವರ ಪುಣ್ಯಸ್ಮರಣೆ ನಿಮಿತ್ತ ಬನ್ನೂರಿನ ಸಮಾಜಸೇವಕರು,ಕೊಡುಗೈ ಧಾನಿಗಳಾದ ಸದಾ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ
ಡಾ.ಕೆ.ಮಹೇಂದ್ರ ಸಿಂಗ್ ಕಾಳಪ್ಪ ನವರು ಇಂದು ಮಂಡ್ಯದ ಪ್ರೇರಣಾ ಟ್ರಸ್ಟ್ ನ ಕಿವುಡ ಮತ್ತು ಅಂಧ ಮಕ್ಕಳ ವಸತಿಯ ವಿದ್ಯಾರ್ಥಿಗಳಿಗೆ ಮತ್ತು ಅಲ್ಲಿನ ಸಿಬ್ಬಂದಿ ವರ್ಗದವರಿಗೆ ಹಾಗೂ ಮೈಸೂರಿನ NR ಮೋಹಲ್ಲದ ಆಶ್ರಯ ಚಾರಿಟೇಬಲ್ ಟ್ರಸ್ಟ್ ನ ವೃದ್ಧರಿಗೂ ಸಹ ಇಂದಿನ ಬೆಳಗಿನ ಉಪಹಾರ,ಮಧ್ಯಾಹ್ನದ ಊಟ,ಮತ್ತು ರಾತ್ರಿಯ ಊಟ ವ್ಯವಸ್ಥೆಯನ್ನು ಮಾಡಿದ್ದರು.
ಬಳಿಕ ಈ ಪುಣ್ಯಸ್ಮರಣೆ ಕಾರ್ಯಕ್ರಮ ಕುರಿತು ಬನ್ನೂರಿನ
ಸಮಾಜ ಸೇವಕರಾದ ಡಾ.ಕೆ. ಮಹೇಂದ್ರ ಸಿಂಗ್ ಕಾಳಪ್ಪ ನವರು ಮಾತನಾಡಿ ಇಂದು ಮೈಸೂರಿನ ತೂಗುದೀಪ ಶ್ರೀನಿವಾಸ್ ರವರ ವೃತ್ತದ ಆವರಣದಲ್ಲಿ ದರ್ಶನ್ ಅಭಿಮಾನಿ ಬಳಗದ ವತಿಯಿಂದ ದಿವಂಗತ ತೂಗುದೀಪ ಶ್ರೀನಿವಾಸ್ ರವರ ಪುಣ್ಯಸ್ಮರಣೆಯನ್ನು
ಪ್ರತಿವರ್ಷದಂತೆ ಈ ವರ್ಷವೂ ಸಹ ಕೋವಿಡ್ ಸಂದರ್ಭದಲ್ಲಿ ಬಹಳ ಸರಳವಾಗಿ ಅರ್ಥಪೂರ್ಣವಾಗಿ ಆಚಾರಿಸಲಾಗುತ್ತಿದ್ದೆ.ತಾಯಿ ಚಾಮುಂಡೇಶ್ವರಿಯ
ಸನ್ನಿಧಾನದಲ್ಲಿ ತೂಗುದೀಪ ಶ್ರೀನಿವಾಸ್ ರವರ ಪುಣ್ಯಸ್ಮರಣೆ ಆಚರಿಸುತ್ತಿರುವುದು ಒಳ್ಳೆಯದು.
ಭಗವಂತ ತೂಗುದೀಪ ಶ್ರೀನಿವಾಸ್ ರವರ ಕುಟುಂಬಕ್ಕೆ ಮೀನಾ ತೂಗುದೀಪ, ದರ್ಶನ್,ದಿನಕರ್,ದಿವ್ಯ,ರವರಿಗೆ ಆರೋಗ್ಯ,ಐಶ್ವರ್ಯ, ಅಂತ್ತಾಸು ಇನ್ನು ಹೆಚ್ಚಿನ ರೀತಿಯಲ್ಲಿ ಕರುಣಿಸಲಿ.ಹಾಗೆಯೇ ಮೀನಾ ತೂಗುದೀಪ ರವರು ಬಹಳ ಕಷ್ಟದ ಪರಿಸ್ಥಿತಿಯೂ ತಮ್ಮ ಪತಿಗೆ ಕಿಡ್ನಿಯನ್ನು ನೀಡಿ ಮಹಾನ್ ಪತಿವ್ರತೆಯಾಗಿದ್ದರೆ ಅವರೇಲ್ಲರಿಗೂ
ಒಳ್ಳೆಯದಾಗಲಿ ಎಂದರು.
ಅಂತೇಯೇ ಮಂಡ್ಯದ
ಪ್ರೇರಣಾ ಟ್ರಸ್ಟ್ ನ
ಮುಖ್ಯಸ್ಥರು,ಅಂಧರು ಆದ ರವಿಕುಮಾರ್ ರವರು ಸಹ ಕಾಳಪ್ಪ ನವರ ಸೇವೆಯ ಕುರಿತು ಮಾತನಾಡಿದ್ದರು.
ಇನ್ನು ಈ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಂಜುನಾಥ್,ಲಿಂಗರಾಜು,ಹರೀಶ್ ನಾಯ್ಡು, ಹೊಸಕೋಟೆ ದಚ್ಚುರಾಜು,ವಿನೋದ್,ಸಂತೋಷ್,ಗಜ,ಮುರುಗ, ಮುರುಳಿ,ಸುಚಿಂದ್ರ,ತೊಳಸಿದಾಸ್, ಬಸವರಾಜ ದಾಸ್,ರವರು ಸೇರಿದಂತೆ ಅನೇಕ ಅಭಿಮಾನಿಗಳು ಹಾಜರಿದ್ದರು.