ನಟ ದರ್ಶನ್ ತೂಗುದೀಪ್ ರಾಜ್ಯದ ಮೃಗಾಲಯಗಳ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ

ಚಾಲೆಂಜಿಂಗ್ ಸ್ಟಾರ್ ದರ್ಶನ್​ಗೆ ವನ್ಯಜೀವಿಗಳ ಮೇಲೆ ಅಪಾರ ಪ್ರೀತಿ ಇದೆ.

ಮೈಸೂರು ಝೂನಲ್ಲಿ ಅವರು ಪ್ರಾಣಿಗಳನ್ನು ದತ್ತು ಪಡೆಯುವ ಮೂಲಕ ಪ್ರೀತಿ ಮೆರೆದಿದ್ದಾರೆ. ಈಗ ದರ್ಶನ್​ ಜನರ ಬಳಿ ವಿಶೇಷ ಮನವಿ ಒಂದನ್ನು ಮಾಡಿದ್ದಾರೆ. ಝೂಗಳಲ್ಲಿನ ಪ್ರಾಣಿಗಳನ್ನ ದತ್ತು ಪಡೆಯುವಂತೆ ನಟ ದರ್ಶನ್ ಕೋರಿಕೊಂಡಿದ್ದಾರೆ.

ಎಲ್ಲಾ ಪ್ರಾಣಿ ಸಂಗ್ರಹಾಲಯದ ಪರಿಸ್ಥಿತಿಯೂ ಅತಂತ್ರವಾಗಿದ್ದು ನಿಮ್ಮ ಕೈಲಾದ ಪ್ರಾಣಿಗಳನ್ನ ದತ್ತು ಪಡೆಯಿರಿ ಎಂದು ದರ್ಶನ್ ಮನವಿ ಮಾಡಿದ್ದಾರೆ.

ನಮ್ಮ ರಾಜ್ಯದಲ್ಲಿ 9 ಝೂಗಳು ಇವೆ. ಹೀಗಾಗಿ, ಬೇರೆ ದೇಶದಿಂದ ಎಲ್ಲರೂ ಇಲ್ಲಿಗೆ ಬರ್ತಾರೆ. ಅವರು ನೀಡುವ ಟಿಕೆಟ್​ ಹಣದಿಂದ ಝೂ ನಿರ್ವಹಣೆ ಆಗುತ್ತಿತ್ತು. ಆದರೆ, ಈಗ ಈ ಪ್ರಕ್ರಿಯೆ ನಿಂತಿದೆ. ಹೀಗಾಗಿ, ಪ್ರಾಣಿಗಳ ನಿರ್ವಹಣೆ, ಕಷ್ಟವಾಗುತ್ತಿದೆ ,

ಎಲ್ಲರೂ ಮನೆಯಲ್ಲಿ ಪ್ರಾಣಿ ಸಾಕಲು ಆಗುವುದಿಲ್ಲ. ಆದರೆ, ಅದನ್ನು ನಿರ್ವಹಣೆ ಮಾಡಲು ಅವಕಾಶ ಇದೆ. ಲವ್​ಬರ್ಡ್​ಗೆ 1 ಸಾವಿರ, ಹುಲಿಗೆ 1 ಲಕ್ಷ, ಆನೆಗೆ 1.70 ಲಕ್ಷ ರೂಪಾಯಿ ನೀಡಿ ದತ್ತು ಪಡೆದರೆ ಒಂದು ವರ್ಷಗಳ ಕಾಲ ಅವುಗಳ ನಿರ್ವಹಣೆ ನಿಮ್ಮ ಹೆಸರಲ್ಲಾಗುತ್ತದೆ. ಝೂ ಆಫ್​​ ಕರ್ನಾಟಕ ಆ್ಯಪ್​ ಮೂಲಕ ಪ್ರಾಣಿಗಳನ್ನು ದತ್ತು ಪಡೆಯೋದು ಹೇಗೆ ಎಂದು ತಿಳಿದುಕೊಳ್ಳಬಹುದು ಎಂದು ತಿಳಿಸಿಕೊಡುವುದರ ಜೊತೆಗೆ ಮನವಿ ಮಾಡಿದ್ದಾರೆ ..

ದರ್ಶನ್ ಅವರ ಪ್ರಾಣಿ ಪ್ರೀತಿಗೆ ಒಂದು ಹ್ಯಾಟ್ಸ್ ಆಫ್ …

Leave a Reply

Your email address will not be published. Required fields are marked *

You cannot copy content of this page