ಕೊರೊನಾ ದಿಂದ ಜನರು ಪರದಾಡುತ್ತಿದ್ದಾರೆ ಅನೇಕ ಜನರ ಬದುಕನ್ನ ಕಸಿದುಕೊಂಡಿದೆ,
ಹಲವು ಮಕ್ಕಳು ಅನಾಥರಾಗಿದ್ದಾರೆ, ಅನೇಕ
ಕರುಣಾಜನಕ ಪ್ರಕರಣಗಳಿಗೆ ಕೊರೊನಾ ಸಾಕ್ಷಿಯಾಗಿದೆ,
ನಂಜನಗೂಡು ತಾಲೂಕಿನ ಹರದನಹಳ್ಳಿ ಗ್ರಾಮದಲ್ಲಿ ಇದೆ ರೀತಿ ಒಂದು ಕರುಣಜಕನ ಘಟನೆ ನಡೆದಿದೆ,
ಕೊರೊನಾ ಮಹಾಮಾರಿಗೆ ತಾಯಿ ಬಲಿಯಾದ
ಹಿನ್ನಲೆ ಬುದ್ದಿಮಾಂದ್ಯ ಪುತ್ರ ಇದೀಗ ಅನಾಥವಾಗಿದ್ದಾನೆ,
೨೦ ವರ್ಷದ ಕಲೀಂ ಉಲ್ಲಾ ಪರಿಸ್ಥಿತಿ ಶೋಚನೀಯವಾಗಿದೆ,
ಕಲೀಂ ಉಲ್ಲಾ ನ ದುಂಃಸ್ಥಿತಿಗೆ ಇಡೀ ಗ್ರಾಮವೇ ಮರುಗಿದೆ,
ಎರಡು ಕಾಲುಗಳಿಗೆ ಸ್ವಾಧೀನವಿಲ್ಲ,ಎರಡು ಕೈಗಳಲ್ಲಿ ಶಕ್ತಿ ಇಲ್ಲ, ಮಿಸುಕಾಡಲೂ ಸಾಧ್ಯವಾಗದಂತಹ ಸ್ಥಿತಿ 20 ವರ್ಷದ ಕಲೀಂ ಉಲ್ಲಾ ಮತ್ತೊಬ್ಬರ ಆಸರೆ ಇಲ್ಲದೆ,ಸಹಕಾರವಿಲ್ಲದೆ ಒಂದು ಅಡಿ ದಾಟಲಾಗದಂತಹ ಸ್ಥಿತಿ ಈ ವಿಕಲಚೇತನನದ್ದು…
ಹುಟ್ಟಿನಿಂದಲೇ ಇಂತಹ ಸ್ಥಿತಿ ತಲುಪಿದ ಕಲೀಂಉಲ್ಲಾ ತಾಯಿ ಅಶೆಯಾ ಕಾತೂನ್ ಮಸ್ತಿ ಮಗನಿಗಾಗಿ ತನ್ನ ಜೀವನವನ್ನೇ ಮುಡುಪಾಗಿ ಇಟ್ಟಿದ್ದರು,
ನಂಜನಗೂಡಿನ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದ ಆಶೆಯಾ ಕಾತೂನ್ ತಮ್ಮ ಬುದ್ದಿಮಾಂದ್ಯ ಮಗನಿಗಾಗಿ ಕೆಲಸ ತ್ಯಜಿಸಿದ್ದರು, ಮಗನ ನಿರ್ವಹಣೆಗಾಗಿ ಕೆಲಸ ಬಿಡುವಂತಹ ಪರಿಸ್ಥಿತಿ ಎದುರಾದರೂ ಎದೆಗುಂದದೆ ಮನೆಯಲ್ಲೇ ಬೀಡಿ ಕಟ್ಟುವ ಕಾಯಕ ಮಾಡಿ ಬುದ್ದಿಮಾಂದ್ಯ ಮಗನ ಪಾಲನೆ ಮಾಡುತ್ತಾ ಬಂದಿದ್ದರು,
ತಾನೊಂದು ಬಗೆದರೆ ದೈವವೊಂದು ಬಗೆದಂತೆ ಎನ್ನುವ ಹಾಗೆ 10 ವರ್ಷಗಳ ಹಿಂದೆ ಆಶೆಯಾ ಪತಿ ಸಹ ತೀರಿಕೊಂಡರು.
ಸಂಸಾರ ನಿರ್ವಹಣೆ ಜಟಿಲವಾದರೂ ಮಗನಿಗಾಗಿ ಎಲ್ಲವನ್ನೂ ತ್ಯಾಗ ಮಾಡಿದ್ದ ಆಶಯಾ ಕಾತೂನ್ ಮಸ್ತಿ ಕೊರೊನಾ ಮಹಾಮಾರಿಗೆ ಬಲಿಯಾದರು.
ಹೆತ್ತ ಒಡಲಿನಲ್ಲೇ ಬೆಳೆದ ಕಲೀಂ ಉಲ್ಲಾ ಇನ್ನೂ ತಾಯಿಯನ್ನ ಸ್ಮರಿಸುತ್ತಾ ಅಮ್ಮ ಅಮ್ಮ ಅಮ್ಮ ಎಂದು ಕನವರಿಸುತ್ತಲೇ ಇದ್ದಾನೆ
ಈ ಹುಡುಗನ ಸ್ಥಿತಿ ಕಲ್ಲುಹೃದಯದವರನ್ನೂ ಸಹ ಕರಗಿಸುವಂತೆ ಮಾಡುತ್ತಿದೆ,
ತಂದೆ ತಾಯಿ ಇಬ್ಬರನ್ನೂ ಕಳೆದುಕೊಂಡ ಕಲೀಂಉಲ್ಲಾ ಇದೀಗ ಅಕ್ಷರಶಃ ಅನಾಥವಾಗಿದ್ದಾನೆ ,
ಒಡಹುಟ್ಟಿದ ಅಣ್ಣ ಸಲ್ಮಾನ್ ಸಹ ವಿಕಲಚೇತನಾಗಿದ್ದು, ಅವನನ್ನ ಸಹೃದಯಿ ಹೆಣ್ಣುಮಗಳು ಮದುವೆ ಆಗಿ ಜೀವನ ಕೊಟ್ಟಿದ್ದಾಳೆ.
ಅಣ್ಣನ ಜೀವನಕ್ಕೆ ದಾರಿಯಾದರೂ ತಮ್ಮನನ್ನ ಪೋಷಿಸುವ ಸ್ಥಿತಿಯಲ್ಲಿ ಇಲ್ಲ,
ಕೊರೊನಾ ತಂದ ಎಡವಟ್ಟಿನಿಂದ ಕಲೀಂಉಲ್ಲಾ ಬದುಕನ್ನ ಬರಡು ಮಾಡಿದೆ.
ಸಧ್ಯ ಈ ಬುದ್ದಿಮಾಂದ್ಯನಿಗೆ ಆಸರೆ ಬೇಕಾಗಿದೆ,
ಈ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರವನ್ನೂ ಸಹ ಕೋರಿದ್ದಾರೆ….
ಜನ ಪ್ರತಿನಿಧಿಗಳಿಗಂತು ಈ ರೀತಿಯ ವಿಚಾರಗಳು ಕಿವಿಗೆ ಬೀಳುವುದಿಲ್ಲ ಬಿಡಿ , ಬಿದ್ದರು ಪ್ರಯೋಜನವಿಲ್ಲ ಅನಿಸುತ್ತದೆ,
ಹೃದಯವಂತ ಮನಸ್ಸುಳ್ಳವರು ಈ ಬುದ್ದಿಮಾಂದ್ಯ ಯುವಕನಿಗೆ ಸಹಾಯ ಹಸ್ತ ಚಾಚಬೇಕಾಗಿದೆ…