ಕೋವಿಡ್ ಲಾಕ್ ಡೌನ್ ಕೊಂಚ ಸಡಿಲಿಕೆ ಹಿನ್ನೆಲೆಯಲ್ಲಿ , ಕನ್ನಡ ಚಿತ್ರರಂಗದ ಚಟುವಟಿಕೆಗಳು ನಿಧನಗತಿಯಲ್ಲಿ ಗರಿಗೆದರಿವೆ ..
ಇಂದು ಮೈಸೂರಿನ ಬಲಮುರಿ ಗಣೇಶನ ದೇವಸ್ಥಾನದಲ್ಲಿ ಗೊಗ್ಗಯ್ಯ ಎಂಬ ಚಿತ್ರದ ಮುಹೂರ್ತ ಕಾರ್ಯ ನೆರವೇರಿದ್ದು ನಿರ್ಮಾಪಕ ಹರ್ಷವರ್ಧನ್ ಗೌಡ ಅವರು ಕ್ಲಾಪ್ ಮಾಡುವ ಮೂಲಕ ಚಾಲನೆ ನೀಡಿದರು.
ಭರತ್ ಕುಮಾರ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಗೊಗ್ಗಯ್ಯ ಚಿತ್ರವು, ಆರ್ ಆರ್ ಕಥೆಯಾಗಿದ್ದು ನೈಜ ಘಟನೆಗಳನ್ನು ಹೊಂದಿದೆ ಎಂದು ನಿರ್ದೇಶಕ ಭರತ್ ಕುಮಾರ್ ಚಿತ್ರದ ಕುರಿತು ಮಾತನಾಡಿದರು ..
ಯುವ ನಟ ,ನಟಿಯರು ಚಿತ್ರದಲ್ಲಿ ಅಭಿನಹಿಸುತ್ತಿದ್ದು ಮಂಜುನಾಥ್ ಅವರ ಛಾಯಾಗ್ರಹಣವು ಚಿತ್ರಕ್ಕಿದೆ ..
ಒಟ್ಟಾರೆ ಕನ್ನಡ ಚಲನಚಿತ್ರಗಳು ಒಂದ್ ಒಂದಾಗಿ ತೆರೆಗೆ ಬರಲು ಅಣಿಯಾಗುತ್ತಿದ್ದು ಬಹುತೇಕ ಕಲಾವಿದರು , ತಂತ್ರಜ್ಞರು ಕೊಂಚ ಉಸಿರಾಡುವಂತಾಗಿದೆ..