ಕರ್ನಾಟಕ ರಾಜ್ಯ ಬೇಕರಿ ಪದಾರ್ಥ ತಯಾರಿಕ ಕಾರ್ಮಿಕರ ಸಂಘದ ವತಿಯಿಂದ ಅರ್ಥ ಪೂರ್ಣ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು..
ಕೆಲವು ದಿನಗಳ ಹಿಂದೆ ಬೇಕರಿ ಕೆಲಸ ಮಾಡುತ್ತಿದ್ದ ಪುನಿತ್ ಎಂಬಾತ ಅಪಘಾತವಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವುದನ್ನು ಮನಗಂಡು ಕರ್ನಾಟಕ ರಾಜ್ಯ ಬೇಕರಿ ಪದಾರ್ಥ ತಯಾರಿಕ ಕಾರ್ಮಿಕರ ಸಂಘದ ಸಂಸ್ಥಾಪಕ ಅಧ್ಯಕ್ಷ ಶಿವು ಅವರು ಸ್ನೇಹಿತರ ಜೊತೆ ಮಾತನಾಡಿ ಸಹಾಯ ಮಾಡಲು ನಿರ್ಧರಿಸಿ , ಇಂದು ಪುನಿತ್ ಗೆ ಆರ್ಥಿಕ ಸಹಾಯವನ್ನು ಕಲ್ಪಿಸಿಕೊಟ್ಟಿದ್ದಾರೆ.
ಮೈಸೂರಿನ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಲಾಯಿತು ,
ಒಬ್ಬ ಕಾರ್ಮಿಕನಿಗೆ ಸಂಕಷ್ಟವಾಗಿದೆ ಎಂದು ನಾನಾ ಜಿಲ್ಲೆಯ ಬೇಕರಿಯ ಕಾರ್ಮಿಕರು ಮೈಸೂರಿಗೆ ಆಗಮಿಸಿ ತಮ್ಮ ಕೈಲಾದಷ್ಟು ಸಹಾಯ ಮಾಡಿದ್ದಲ್ಲದೆ ಆತನಿಗೆ ಸನ್ಮಾನಿಸಿರುವುದು ನಿಜಕ್ಕೂ ಶ್ಲಾಘನೀಯ ,
ಕಾರ್ಯಕ್ರಮದಲ್ಲಿ ತೇಜಸ್ವಿ ಕುಮಾರ್,
ರವಿ , ಮಹೇಶ್ , ಪುಟ್ಟಣ್ಣ , ಆಕಾಶ್ , ಮಹೇಶ್ , ವಿನೋದ್ , ನಂದೀಶ್ , ನವೀನ್ , ವಿಮಲ್ ಕುಮಾರ್ , ಪುನಿತ್ ರಾಯಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು