ಮೈಸೂರು ಪತ್ರಕರ್ತರ ಭವನದಲ್ಲಿ 2013 ರಿಂದ 2018 ರ ವರೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ನಡೆದ ಅಭಿವೃದ್ಧಿ ಕಾರ್ಯಕ್ರಮಗಳ ಪಟ್ಟಿಯನ್ನು ಮೈಸೂರಿನ ಪತ್ರಕರ್ತರ ಭವನದಲ್ಲಿ ಇಂದು ಕೃಷ್ಣರಾಜ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಎನ್.ಎಂ. ನವೀನ್ ಕುಮಾರ್ ಬಿಡುಗಡೆ ಮಾಡಿದರು .
ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಕರ್ನಾಟಕದಲ್ಲಿ ನಡೆದಂತಹ ಅಭಿವೃದ್ದಿ ಪರ್ವ ನಭೂತೋ ನಭವಿಷ್ಯತಿ ಎಂದು ಬಣ್ಣಿಸಿದರು .
ಬಿಜೆಪಿ ಸರ್ಕಾರದವರು ಈ ಹಿಂದೆಯೂ ಕೂಡ ಎಂದಿಗೂ ಮಾಡಿಲ್ಲ ,ಇನ್ಮುಂದೆ ಕೂಡ ಅವರು ಮಾಡಲಾರರು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು .
ಬಿಜೆಪಿ ಸರ್ಕಾರ ಕರ್ನಾಟಕದಲ್ಲಿ ಬಂದಾಗೆಲ್ಲಾ ರೆಸಾರ್ಟ್ ರಾಜಕೀಯ , ಮಂತ್ರಿಗಿರಿಗಾಗಿ ಲಾಬಿ , ಮುಖ್ಯಮಂತ್ರಿ ಹುದ್ದೆಗಾಗಿ ಪೈಪೋಟಿ ಇದರಲ್ಲಿ ಕಾಲಹರಣ ಮಾಡುತ್ತಿದೆ ಎಂದು ಆರೋಪಿಸಿದರು .
ಸಿದ್ದರಾಮಯ್ಯನವರು 5 ವರ್ಷ ನಿರಂತರವಾಗಿ ತಮ್ಮ ಸಂಪೂರ್ಣ ಅಧಿಕಾರಾವಧಿಯನ್ನು ಕರ್ನಾಟಕದ ಅಭಿವೃದ್ಧಿಗಾಗಿ ಮತ್ತು ಬಡಬಗ್ಗರ ಸೇವೆಗಾಗಿ ಮೀಸಲಿಟ್ಟಿದ್ದರು ಎಂದರು .
ಸುದ್ದಿಗೋಷ್ಠಿಯಲ್ಲಿ ರಾಜ್ಯ ಮಹಿಳಾ ಕಾಂಗ್ರೆಸ್ ನ ಕಾರ್ಯದರ್ಶಿಗಳಾದ ರೇಖಾ ಶ್ರೀನಿವಾಸ್ , ಕಾಂಗ್ರೆಸ್ ಮುಖಂಡರಾದ ಎಂ ರಾಜೇಶ್ , ದೇವರಾಜ್ ಅರಸು ಬ್ಲಾಕ್ ನ ಅಧ್ಯಕ್ಷರಾದ ಪೈಲ್ವಾನ್ ಸುನಿಲ್ , ಬಿಂದು ಗೌಡ , ತಗಡೂರು ಬ್ಲಾಕ್ ನ ಯುವ ಕಾಂಗ್ರೆಸ್ ಅಧ್ಯಕ್ಷರಾದ ಗಿರೀಶ್ , ಅಶೋಕಪುರಂನ ಪೈಲ್ವಾನ್ ಸುರೇಶ್ ಮತ್ತಿತರರು ಹಾಜರಿದ್ದರು..