ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಟ್ರಸ್ಟ್ ನ ವತಿಯಿಂದ
ಮಹಿಳೆಯರ ಆರೋಗ್ಯದ ಬಗ್ಗೆ
ಜ್ಞಾನ ವಿಕಾಸ ಕಾರ್ಯಕ್ರಮದಲ್ಲಿ ಮಹಿಳಾ ವಿಚಾರಗೋಷ್ಟಿಯನ್ನು ಹಮ್ಮಿಕೊಳ್ಳಲಾಗಿತ್ತು..
ಮೈಸೂರಿನ ರಾಘವೇಂದ್ರದಲ್ಲಿರುವ ವರಸಿದ್ದಿ ವಿನಾಯಕ ದೇವಸ್ಥಾನದ ಆವರಣದಲ್ಲಿ ನಡೆದ ಕಾರ್ಯಕ್ರಮವನ್ನು
ಮೈಸೂರು ಜಿಲ್ಲಾ ನಿರ್ದೇಶಕರಾದ ವಿಜಯ್ ಕುಮಾರ್ ನಾಗನಾಳ್ ಅವರು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು..
ಮುಖ್ಯ ಅತಿಥಿಗಳಾಗಿ ಮಾಜಿ ಉಪ ಮಹಾಪೌರರು, ಹಾಲಿ ನಗರ ಪಾಲಿಕೆ ಸದಸ್ಯ ಶ್ರೀಧರ್ ,
ಯೋಜನಾಧಿಕಾರಿ ನಂದಿನಿ, ಆಗಮಿಸಿದ್ದರು..
ಇದೆ ಸಂಧರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ನಿರ್ದೇಶಕ ವಿಜಯ್ ಕುಮಾರ್ ನಾಗನಾಳ್ ಮಾತನಾಡಿ
ಮೈಸೂರು ತಾಲೂಕು ಮಹಿಳಾ ಸಬಲೀಕರಣ ಉತ್ತಮ ಆರೋಗ್ಯ ಶಿಕ್ಷಣ ಕಾನೂನು ಅರಿವು ಹಾಗೂ ಸ್ವ-ಉದ್ಯೋಗಕ್ಕೆ ಹೆಚ್ಚು ಒತ್ತು ನೀಡಬೇಕು , ಗ್ರಾಮಾಭಿವೃದ್ಧಿ ಯೋಜನೆ ಜ್ಞಾನವಿಕಾಸ ಕಾರ್ಯಕ್ರಮದ ಮೂಲಕ ಮಹಿಳೆಯರ ಸಬಲೀಕರಣ ಮತ್ತು ಉತ್ತಮ ಆರೋಗ್ಯ ಶಿಕ್ಷಣ ಕಾನೂನಿನ ಅರಿವು ಸ್ವ-ಉದ್ಯೋಗಕ್ಕೆ ಒತ್ತು ಕೊಡುವ ಮೂಲಕ ಯೋಜನೆ ಮಹಿಳೆಯರಿಗೆ ಬೆಂಬಲವಾಗಿದೆ ಎಂದು ತಿಳಿಸಿದರು.
ಇನ್ನೂ ಮಾಜಿ ಉಪ ಮೇಯರ್ ಶ್ರೀಧರ್ ಅವರು ಮಾತಾನಾಡಿ
ಪರಮಪೂಜ್ಯ ಡಾಕ್ಟರ್ ಡಿ ವೀರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಹೇಮಾವತಿ ಅಮ್ಮನವರ ಆಶೀರ್ವಾದಿಂದ ನಡೆಯುತ್ತಿರುವ ಅರ್ಥಪೂರ್ಣ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ
ಸಮನ್ವಯಾಧಿಕಾರಿ ಶಶಿಕಲಾ, ಮೇಲ್ವಿಚಾರಕ ಅಶ್ವಥ್, ಸೇವಾ ಪ್ರತಿನಿಧಿ ಸುನಿತಾ ಸೇರಿದಂತೆ ಹಲವರು ಉಪಸ್ಥಿತರಿದ್ದರು