ಸಮಾಜ ಸೇವಕ ಮಹಾನಗರ ಪಾಲಿಕೆ ಮಾಜಿ ಸದಸ್ಯರು , ಸಹಕಾರ ಕ್ಷೇತ್ರದ ಧುರೀಣರು ಮೈಸೂರು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರು ಹಾಗೂ ಜನನಿ ಸೇವಾ ಟ್ರಸ್ಟ್ ಅಧ್ಯಕ್ಷ ಡಾ. ಅಶೋಕ್ ಅವರು
ಕೋವಿಡ್ – 19 1 ನೇ ಹಾಗೂ 2 ನೇ ಅಲೆಯ ಸಂದಿಗ್ಧ ಪರಿಸ್ಥಿತಿಯಲ್ಲಿ ನಿರಂತರ ಸೇವೆ ಸಲ್ಲಿಸಿದ್ದಾರೆ..
ಹಾಗೇಯೇ ಅವರ ಹುಟ್ಟುಹಬ್ಬದ ಅಂಗವಾಗಿ ಸಾಕಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.
ಚಾಮುಂಡಿಬೆಟ್ಟದ ರಸ್ತೆ , ತಾವರೆಕಟ್ಟಿ , ಚಾಮುಂಡೇಶ್ವರಿ ದೈವಿ ವನ ಅರಣ್ಯ ಭವನ ಇಲ್ಲಿ ಶ್ರೀಗಂಧ ಗಿಡ ನೆಡುವ ಕಾರ್ಯಕ್ರಮ..
ಅನಾಥ ಶ್ರಮ , ವಿಶೇಷ ಮಕ್ಕಳಶಾಲೆ, ವೃದ್ದಾಶ್ರಮಗಳಿಗೆ ಪೌಷ್ಟಿಕ ಆಹಾರ, ಮತ್ತು
ಬಾಣಂತಿ ಮತ್ತು ನವಜಾತ ಶಿಶುಗಳಿಗೆ ಪೌಷ್ಠಿಕ ಕಿಟ್ ವಿತರಣೆ ಮತ್ತು ಸಿಹಿ, ಹಣ್ಣುಹಣಪಲು ವಿತರಿಸಿ ಸರಳವಾಗಿ ಹುಟ್ಟುಹಬ್ಬ ಆಚರಿಸಿ ಕೊಳ್ಳುವುದರ ಜೊತೆಗೆ ಆಟೋ ಚಾಲಕರಿಗೆ ಮತ್ತು ರಸ್ತೆ ಬದಿ ವ್ಯಾಪರಿಗಳಿಗೆ ರೂ.1-0೦ಲಕ್ಷ ಮೌಲ್ಯದ ಜೀವವಿಮೆ ಬಾಂಡ್ ವಿತರಸಿದ್ದಾರೆ..
ಅದೆ ರೀತಿ ಜನನಿ ಸೇವಾ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಅಶೋಕ್ ಅವರ ಪತ್ನಿ ಆರ್.ಸೌಮ್ಯ ಅಶೋಕ್ ರವರು ಕೂಡ ತಮ್ಮ ಹುಟ್ಟು ಹಬ್ಬವನ್ನು ವಿಜಯ ನಗರದಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸ್ತ್ರೀ ಸೇವಾನಿಕೇತನ ಹೆಣ್ಣು ಮಕ್ಕಳ ಮತ್ತು ಮಕ್ಕಳ ಹಾರೈಕೆ ಕೇಂದ್ರದಲ್ಲಿ ಪೌಷ್ಠಿಕ ಆಹಾರ ಮತ್ತು ಮಾಸ್ಕ್ ವಿತರಣೆ ಮಾಡುವ ಮೂಲಕ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡು ಸಾರ್ಥಕತೆ ಮೆರೆದಿದ್ದಾರೆ..
ಇದೆ ಸಂಧರ್ಭದಲ್ಲಿ ಜನನಿ ಸೇವಾ ಟ್ರಸ್ಟ್ ನ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು..