ಡಿ . ಬನುಮಯ್ಯ ವಿದ್ಯಾಸಂಸ್ಥೆಯ ಮಾಲಿಕತ್ವಕ್ಕೆ ಒಳಪಟ್ಟ ಬಿಲ್ಡಿಂಗ್
ನಂ 19472 ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಪಾರಂಪರಿಕ ಕಟ್ಟಡವನ್ನು ದಿನಾಂಕ 12.10 . 2006 ರಂದು ಶ್ರೀ ಭಾರತೀ ತೀರ್ಥ ಎಂಟರ್ಪ್ರೈಸಸ್ರವರಿಗೆ ನೋಂದಾಯಿತ ಭೋಗ್ಯದ ಕರಾರಿನ ಮೂಲಕ 12 ವರ್ಷಗಳ ಅವಧಿಗೆ ನೀಡಿದ್ದು , ಅವಧಿ ಮುಗಿದು 3 ವರ್ಷಗಳು ಕಳೆದರೂ ಕಟ್ಟಡವನ್ನು ಸುಪರ್ದಿಗೆ ಪಡೆಯದೆ ಇರುವುದನ್ನು ಗಮನಿಸಿದರೆ ಶ್ರೀ ಭಾರತೀ ತೀರ್ಥ ಎಂಟರ್ಪ್ರೈಸಸ್ ಅವರ ಅಕ್ರಮಗಳಿಗೆ ವಿದ್ಯಾಸಂಸ್ಥೆಯ ಪ್ರಸ್ತುತ ಆಡಳಿತ ಮಂಡಳಿ ಪೂರಕವಾಗಿ ಸ್ಪಂಧಿಸುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿರುತ್ತದೆ..
ಡಿ . ಬನುಮಯ್ಯ ವಿದ್ಯಾಸಂಸ್ಥೆಯ ಕಟ್ಟಡವು ಪಾರಂಪರಿಕ ಕಟ್ಟಡವೆಂದು ಗುರುತಿಸಲ್ಪಟ್ಟಿದ್ದು , ಜಿಲ್ಲಾಧಿಕಾರಿಗಳು , ಉಪನಿರ್ದೇಶಕರು , ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಉಪನಿರ್ದೇಶಕರು , ಪುರಾತತ್ವ ಇಲಾಖೆ ಇವರುಗಳು ಸದರಿ ಕಟ್ಟಡದಲ್ಲಿ ಹೋಟೆಲ್ ಉದ್ದಿಮೆಗೆ ಪೂರ್ವಾನುಮತಿ ನೀಡದಂತೆ ಮೈಸೂರು ಮಹಾನಗರ ಪಾಲಿಕೆ ಆಯುಕ್ತರಿಗೆ ನಿರ್ದೇಶನ ನೀಡಿದ್ದು , ಶ್ರೀ ಭಾರತೀ ತೀರ್ಥ ಎಂಟರ್ಪ್ರೈಸಸ್ನವರು ಸಂಸ್ಥೆಯ ಕಟ್ಟಡವನ್ನು ಅಕ್ರಮವಾಗಿ ಉಪಭೋಗ್ಯಕ್ಕೆ ನೀಡುತ್ತಿದ್ದು , ಮೊದಲಿಗೆ ಮೈಸೂರು ಅರಮನೆ ಕೆಫೆ , ನಂತರ ಶ್ರೀ ಅನ್ನಪೂರ್ಣ ಹೋಟೆಲ್ ನಡೆಯುತ್ತಿದ್ದ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಕಾನೂನು ಸಲಹಾಧಿಕಾರಿಗಳ ನಿರ್ದೇಶನದ ಮೇರೆಗೆ ಉದ್ದಿಮೆ ರಹದಾರಿಯನ್ನು ರದ್ದುಪಡಿಸಲಾಗಿದ್ದು , ಪ್ರಸ್ತುತ ಡಾಲ್ಫಿನ್ ಬೇಕರಿಗಾಗಿ ಕಟ್ಟಡವನ್ನು ನೀಡಿದ್ದು ಸರ್ಕಾರಿ ನಿಯಮಗಳನ್ನು ಉಲ್ಲಂಘಿಸಿ , ಕಟ್ಟಡದ ಮುಂಭಾಗದ ಖಾಲಿ ನಿವೇಶನದಲ್ಲಿ ಕಟ್ಟಡದ ಮುನ್ನೋಟಕ್ಕೆ ಧಕ್ಕೆಯಾಗುವಂತೆ ಬಸ್ ಮಾದರಿಯಲ್ಲಿ ಹೋಟೆಲ್ ಉದ್ಯಮವನ್ನು ಅಕ್ರಮವಾಗಿ ನಡೆಸಲು ಯತ್ನಿಸುತ್ತಿರುವುದು ಖಂಡನೀಯ ಎಂದು ಡಿ.ಬನುಮಯ್ಯ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷರು , ಮೈಸೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ
ಡಾ . ಎಂ.ಕೆ. ಅಶೋಕ್ ತಿಳಿಸಿದ್ದಾರೆ,
ಇದರ ವಿಚಾರವಾಗಿ ಮಾತನಾಡಿದ ಅವರು
ಧರ್ಮಪ್ರಕಾಶ ಡಿ . ಬನುಮಯ್ಯ ಪಾರಂಪರಿಕ ಕಟ್ಟಡದಲ್ಲಿ ಸ್ಟೇಟ್ ಬ್ಯಾಂಕ್ ಇಂಡಿಯಾ , ಎಂ.ಬಿ.ಎ. ಕಾಲೇಜು , ಬಾಲಕಿಯರ ಪ್ರೌಢಶಾಲೆ , ಮರ್ಚೆಂಟ್ ಬ್ಯಾಂಕ್ , ಆಸ್ಪತ್ರೆ ಇತ್ಯಾದಿ ಸಾರ್ವಜನಿಕ ಕಛೇರಿಗಳು ಕಾರ್ಯ ನಿರ್ವಹಿಸುತ್ತಿದ್ದು , ಇದರಿಂದ ವಿದ್ಯಾರ್ಥಿಗಳಿಗೆ ತುಂಬಾ ಅಡಚಣೆಯುಂಟಾಗುವ ಸಾಧ್ಯತೆ ಇರುತ್ತದೆ . ಉದ್ದಿಮೆದಾರರು ತಮ್ಮ ಅನಧಿಕೃತ ಉದ್ದಿಮೆಗೆ ಅಧಿಕಾರಿ ವರ್ಗದಿಂದ ತೊಂದರೆಯಾಗದಿರಲಿ ಎಂಬ ದುರುದ್ದೇಶದಿಂದ ಕ್ಷೇತ್ರದ ಶಾಸಕರಾದ ಶ್ರೀ ಎಲ್ . ನಾಗೇಂದ್ರರವರು , ಸ್ಥಳೀಯ ಮಹಾನಗರ ಪಾಲಿಕೆ ಸದಸ್ಯೆ ಶ್ರೀಮತಿ ಪ್ರಮೀಳ ಭರತ್ ಇವರುಗಳನ್ನು ನಾಳೆ ಹೋಟೆಲ್ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನಿಸಿರುವುದು ದುರುದ್ದೇಶದಿಂದ ಕೂಡಿರುವುದರಿಂದ ಮಾನ್ಯರುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಾರದೆಂದು ಮನವಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ