ಲಯನ್ಸ್ ಕ್ಲಬ್ ಆಫ್ ಇಂಟರ್ ನ್ಯಾಷನಲ್ ಮತ್ತು ಲಯನ್ಸ್ ಕ್ಲಬ್ ಆಫ್ ಗೋಲ್ಡನ್ ಸಿಟಿ ಮೈಸೂರು ಹಾಗೂ ಲಯನ್ಸ್ ಕ್ಲಬ್ ನ 15 ಸಂಸ್ಥೆಗಳ ಸಹಯೋಗದಲ್ಲಿ ಇಂದು ಮೈಸೂರಿನ ಇರ್ವಿನ್ ರಸ್ತೆಯ ಮೇಸ್ತ್ರಿ ತಿಮ್ಮಯಾಚಾರ್ ಛತ್ರದ ಆವರಣದಲ್ಲಿ ಎಂಜಿನಿಯರ್ ದಿನಾಚರಣೆ ಪ್ರಯುಕ್ತ ಉಚಿತ ಮೆಗಾ ಹೆಲ್ತ್ ಕ್ಯಾಂಪ್ ಶಿಬಿರವನ್ನು ಹಮ್ಮಿಕೊಳ್ಳಲಾಯಿತ್ತು.
ಇನ್ನು ಈ ಶಿಬಿರಕ್ಕೆ ಚಾಮರಾಜ ವಿಧಾನಸಭಾಕ್ಷೇತ್ರದ ಶಾಸಕರಾದ ಎಲ್.ನಾಗೇಂದ್ರ ಮತ್ತು ಲಯನ್ಸ್ ಕ್ಲಬ್ ನ ಮಲ್ಟಿಪಾಲ್ ಕೌನ್ಸಿಲ್ ಚೇರಿಮೆನ್ ಆದ ಲಯನ್ ಡಾ. ನಾಗರಾಜ್.ವಿ.ಬೈರಿ ರವರು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದ್ದರು.
ಇನ್ನು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಲಯನ್ ಗೋಲ್ಡನ್ ಸಿಟಿಕ್ಲಬ್ ನ ಪ್ರೆಸಿಡೆಂಟ್ ಲಯನ್ ಸುರೇಶ್ ಗೋಲ್ಡ್,ಬನ್ನೂರಿನ ಸಮಾಜ ಸೇವಕರು,ಬನ್ನೂರು ರೋಟರಿಸಂಸ್ಥೆಯ ಮಾಜಿ ಅಧ್ಯಕ್ಷರಾದ MPHF ಡಾ.ಕೆ.ಮಹೇಂದ್ರ ಸಿಂಗ್ ಕಾಳಪ್ಪ, ಲಯನ್ ದೇವಿಪ್ರಸಾದ್,ನಗರ ಪಾಲಿಕೆ ಸದಸ್ಯರಾದ ರಮೇಶ್ ರಮಣಿ,ಲಯನ್ ಪ್ರತಿಮಾ ರಮೇಶ್,ಲಯನ್ ರಾಮಕೃಷ್ಣ, ಶ್ರೀನಿವಾಸ್,ಕೆ.ಆರ್.ಆಸ್ಪತ್ರೆಯ ವೈದ್ಯರಾದ ಮಂಜುನಾಥ್,ಪೃಥ್ವಿಸಿಂಗ್ ಚಾಂದವತ್ ರವರು ಸೇರಿದಂತೆ ಮತೀತರರು ಉಪಸ್ಥಿತರಿದ್ದರು.
ಇನ್ನು ಇದೆ ಸಂದರ್ಭದಲ್ಲಿ ಮೆಗಾ ಹೆಲ್ತ್ ಕ್ಯಾಂಪ್ ನಲ್ಲಿ ಲಯನ್ಸ್ ಕ್ಲಬ್ ಆಫ್ ಇಂಟರ್ ನ್ಯಾಷನಲ್ ವತಿಯಿಂದ ಶಾಸಕರಾದ ನಾಗೇಂದ್ರ ರವರನ್ನು ಮತ್ತು ಪ್ರಕಾಶ್ ರವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು
ಇನ್ನು ಈ ಮೆಗಾ ಹೆಲ್ತ್ ಕ್ಯಾಂಪ್ ನಲ್ಲಿ ಕೊರೊನಾ ವ್ಯಾಕ್ಸಿನೇಷನ್,RTPCR ಟೆಸ್ಟಿಂಗ್,ರಕ್ತದಾನ,ಶಸ್ತ್ರ ಚಿಕಿತ್ಸೆ, ಬಿ ಪಿ,ಶುಗರ್,ಕಣ್ಣಿನ ತಪಾಸಣೆ ಚಿಕಿತ್ಸೆಯನ್ನು ನಡೆಸಲಾಯಿತು.
ಬಳಿಕ ಈ ಮೆಗಾ ಹೆಲ್ತ್
ಕ್ಯಾಂಪ್ ನ ಕುರಿತು ಶಾಸಕರಾದ ಎಲ್.ನಾಗೇಂದ್ರ,ಮತ್ತು ಲಯನ್ ಕ್ಲಬ್ ಗೋಲ್ಡನ್
ಸಿಟಿಯ ಕಾರ್ಯದರ್ಶಿ ಪ್ರಮೀಳಾ ರವರು ಮಾತನಾಡಿದರು.