ಮೈಸೂರಿನ ಟಿ.ಕೆ.ಬಡಾವಣೆಯ ಶ್ರೀ ಕೃಷ್ಣಧಾಮದಲ್ಲಿಂದು
ಕೆ.ಎಂ.ಪ್ರವೀಣ್ ಕುಮಾರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2021ರ ಮನೆ ಮನೆಗಳಲ್ಲಿ ದಸರಾ ಗೊಂಬೆ ಕೂರಿಸುವ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರದವರಿಗೆ ಬಹುಮಾನ ವಿತರಣೆ ಹಾಗೂ ಭಾಗವಹಿಸಿದ ಸ್ಪರ್ಧಾಳುಗಳಿಗೆ ಅಭಿನಂದನಾ ಪತ್ರವನ್ನು ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತ್ತು.
ಇದೆ ಸಂದರ್ಭದಲ್ಲಿ ಬನ್ನೂರಿನ ಸಮಾಜ ಸೇವಕರು ಮತ್ತು ಬನ್ನೂರು ಪರಿಸರ ಜಾಗೃತಿ ವೇದಿಕೆಯ ಅಧ್ಯಕ್ಷರು ಹಾಗೂ ಬನ್ನೂರು ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷರಾದ MPHF ಡಾ.ಕೆ.ಮಹೇಂದ್ರ ಸಿಂಗ್ ಕಾಳಪ್ಪ ನವರು ವಿಜೇತರಾದವರಿಗೆ ಅಭಿನಂದನಾ ಪತ್ರವನ್ನು ವೇದಿಕೆಯ ಗಣ್ಯರ ಸಮುಖದಲ್ಲಿ ವಿತರಿಸಿದ್ದರು.
ಇನ್ನು ಈ ಕಾರ್ಯಕ್ರಮದಲ್ಲಿ ಶಾಸಕರಾದ ಎಲ್.ನಾಗೇಂದ್ರ,ಮೈಸೂರಿನ ಮಹಾಪೌರರದ ಸುನಂದಾ ಪಾಲನೇತ್ರ,ಹಿರಿಯ ಸಮಾಜ ಸೇವಕರಾದ ಡಾ.ಕೆ.ರಘುರಾಮ್ ವಾಜಪೇಯಿ,ಡಾ. ಭಾನುಪ್ರಕಾಶ್ ಶರ್ಮಾ,ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ.ಟಿ.ಪ್ರಕಾಶ್,ಕೃಷ್ಣ ಧಾಮದ ಉಪಾಧ್ಯಕ್ಷರಾದ ಮೋಹನ್,VCC ಕೋಚಿಂಗ್ ಸೆಂಟರ್ ನ ಮುಖ್ಯಸ್ಥರದ ರವಿಶಂಕರ್,ಅಪೂರ್ವ ಹೋಟೆಲ್ ನ ಮುಖ್ಯಸ್ಥರದ ಅಪೂರ್ವ ಸುರೇಶ್,ಜೀವದಾರ ರಕ್ತನಿಧಿ ಕೇಂದ್ರದ
ನಿರ್ದೇಶಕರದ ಗಿರೀಶ್,ನಗರ ಪಾಲಿಕೆ ಸದಸ್ಯರಾದ ಎಂ.ಲಕ್ಷ್ಮೀ, ಮೃಗಾಲಯ ಪ್ರಾಧಿಕಾರದ ನಿರ್ದೇಶಕರದ ಶ್ರೀಮತಿ ಜ್ಯೋತಿ,ಕೆ.ಎಂ.ಪಿ.ಕೆ.ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ವಿಕ್ರಂ ಐಯ್ಯಂಗಾರ್,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ರೇಣುಕಾ ರಾಜ್,ರವರು ಸೇರಿದಂತೆ ಹಲವಾರು ಪಾಲ್ಗೊಂಡಿದ್ದರು.
ಇನ್ನು ಈ ಬೊಂಬೆ
ಪ್ರದರ್ಶನದಲ್ಲಿ ಮೊದಲನೇ ಬಹುಮಾನವನ್ನು ಕುವೆಂಪು ನಗರದ ನಿವಾಸಿ ಇಂದ್ರಾಣಿ ಶಂಕರ್,ಎರಡನೇ ಬಹುಮಾನ ಕನಕದಾಸ ನಗರದ ನಿವಾಸಿ ಶ್ರೀಮತಿ ವರ್ಷ,ಹಾಗೂ ಮೂರನೇ ಬಹುಮಾನವನ್ನು ರಾಣಿ ನಾಗಭೂಷಣ ರವರುಗಳಿಗೆ ನೀಡಿ ಸನ್ಮಾನಿಸಿ ಅಭಿನಂದಿಸಿದ್ದರು.
ಬಳಿಕ ಈ ಕಾರ್ಯಕ್ರಮವನ್ನು ಕುರಿತು ಶಾಸಕರಾದ
ಎಲ್.ನಾಗೇಂದ್ರ ಮತ್ತು ಹಿರಿಯ ಸಮಾಜ ಸೇವಕರಾದ ಡಾ.ಕೆ.ರಘುರಾಮ್ ವಾಜಪೇಯಿ ರವರು ಮಾತನಾಡಿದ್ದರು.