lohith hanumanthappa.
ಈ ಚಿತ್ರದ ನಿರ್ದೇಶನವನ್ನು ಸಂಗೀತ್ ಸಾಗರ್ ಮಾಡಿದ್ದಾರೆ, ಸ್ನೇಹಿತ ಚಿತ್ರ ಸ್ನೇಹದ ಮಹತ್ವ ಸಾರುವ ಚಿತ್ರವಾಗಿದ್ದು ಮನೆಮಂದಿಯಲ್ಲಾ ಒಟ್ಟಾಗಿ ಕುಳಿತು ನೋಡುವಂತ ಪರಿಶುದ್ಧ ಮನೋರಂಜನಾತ್ಮಕ ಚಿತ್ರವಾಗಿದೆ..
ಮೈಸೂರಿನ ಉಮಾ ಥಿಯೇಟರ್ ನಲ್ಲಿ ಬಿಡುಗಡೆಗೊಂಡಿದ್ದು ವೀಕ್ಷಕರೊಂದಿಗೆ ಚಿತ್ರ ನೋಡಲು ಚಿತ್ರತಂಡ ಆಗಮಿಸಿತ್ತು..
ನೆಹರು ಬ್ಯಾಂಡ್ ಸೆಟ್ ನಡೆಸುತ್ತಿದ್ದ ಅಶೋಕ್ ಆರ್ ಭರವಸೆ ಇಟ್ಟುಕೊಂಡು ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಈ ಹಿಂದೆ “ಪ್ಯಾರ್ ಕಾ ಗೋಲ್ ಗುಂಬಜ್” ಚಿತ್ರದಲ್ಲಿ ನಟಿಸಿ ಮನೆಮಾತಾಗಿರುವ ಧನುಷ್ ಈ “ಸ್ನೇಹಿತ” ಚಿತ್ರದಲ್ಲಿ ನಾಯಕರಾಗಿ ಅಭಿನಯಿಸಿದ್ದಾರೆ .
ಅವರು ಮಾತನಾಡುತ್ತಾ ನನ್ನ “ಪ್ಯಾರ ಕಾ ಗೋಲ್ ಗುಂಬಜ್” ಚಿತ್ರಕ್ಕೆ ಎಲ್ಲರು ತೋರಿದ ಪ್ರೀತಿಗೆ ನಾನು ಚಿರಋಣಿ.ಈ ಚಿತ್ರಕ್ಕೂ ಅದೇ ರೀತಿಯ ಪ್ರೋತ್ಸಾಹ ಬಯಸುತ್ತೇನೆ.
ನಮ್ಮ ಚಿತ್ರ ಯಾವುದೇ ಒಂದು ರೀತಿಯ ಸಿನಿಮಾ ಅಲ್ಲ. ಇದರಲ್ಲಿ ಸ್ನೇಹ, ಪ್ರೀತಿ, ಆಕ್ಷನ್ , ಉತ್ತಮ ಕಥೆ ಹಾಗೂ ಹಾಡುಗಳು ಎಲ್ಲಾ ಇದೆ. ನೋಡುಗರಿಗೆ ಉತ್ತಮ ಮನೋರಂಜನೆ ನೀಡುವ ಚಿತ್ರ ಅಂತ ಹೇಳಬಹುದು ಎಂದರು.
ನಾಯಕಿ ಸುಲಕ್ಷಾ ಕೈರಾ ಮಾತನಾಡಿ
ನಾನು ಈ ಚಿತ್ರದಲ್ಲಿ ಪ್ರಿಯ ಎಂಬ ಪಾತ್ರದಲ್ಲಿ ಕಾಣಿಸಿಕೊಂದ್ದೇನೆ.
ಈ ಚಿತ್ರದಲ್ಲಿ ಮುಗ್ಧ ಹಳ್ಳಿ ಹುಡುಗಿ ನಾನು, ಎಲ್ಲರೂ ಚಿತ್ರನೋಡಿ ಪ್ರೋತ್ಸಾಹಿಸಬೇಕು ಎಂದರು.
ಬಾಬು ಭಾಗವತರ್ ಈ ಚಿತ್ರದ ಕೋ ಡೈರೆಕ್ಟರ್.
ಕಮಲ್ ಸಿಂಗ್ ಛಾಯಾಗ್ರಹಣ, ಹರೀಶ್ ಕೃಷ್ಣ ಹಾಗೂ ರಾಜಶೇಖರ ರೆಡ್ಡಿ ಸಂಕಲನ, ವಿನಯ್, ಹರೀಶ್ ಟೋನಿ ನೃತ್ಯ ನಿರ್ದೇಶನ ಹಾಗೂ ಅಲ್ಟಿಮೆಟ್ ಶಿವು ಸಾಹಸ ನಿರ್ದೇಶನ “ಸ್ನೇಹಿತ” ಚಿತ್ರಕ್ಕಿದೆ.
ತಾರಾಗಣದಲ್ಲಿ
ಧನುಶ್, ಸುಲಕ್ಷ ಕೈರಾ, ಶಿವರಾಮಣ್ಣ, ಎಂ.ಎಸ್.ಉಮೇಶ್, ಮನದೀಪ್ ರಾಯ್, ಆರ್ ಟಿ ರಮ, ಕಿಲ್ಲರ್ ವೆಂಕಟೇಶ್, ಪ್ರಣಯ ಮೂರ್ತಿ ಸೇರಿದಂತೆ ಮುಂತಾದವರು ಅಭಿನಯಿಸಿದ್ದಾರೆ…
ಒಟ್ಟಾರೆ ಸಿನಿಮಾಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎನ್ನುವುದು ಚಿತ್ರತಂಡದ ಮಾತಾಗಿದೆ.