ತಮಿಳುನಾಡಿನ ಊಟಿ ಬಳಿ ಕುನೂರ್ ಬಳಿ ಸೇನಾ ಹೆಲಿಕ್ಯಾಪ್ಟರ್ ಪತನಗೊಂಡು ಸಿಡಿಎಸ್ ಬಿಪಿನ್ ರಾವತ್ ಸೇರಿದಂತೆ 11 ಮಂದಿ ಸಾವನ್ನಪ್ಪಿ ಇಡಿ ದೇಶ ಈ ಅಪಘಾತದಿಂದ ಆಘಾತಕ್ಕೆ ಒಳಪಟ್ಟಿದ್ದು ಇದರ ಹಿನ್ನಲೆಯಲ್ಲಿ ಮಂಡ್ಯದ ಚಾಮುಂಡೇಶ್ವರಿ ನಗರದ ಯುವಕರು ಮೊಂಬತ್ತಿ ಹಚ್ಚಿ 11 ಮಂದಿ ಸೇನಾ ಸಿಬ್ಬಂದಿಗಳಿಗೂ ಶ್ರದ್ಧಾಂಜಲಿ ಸಲ್ಲಿಸಿದರು.
ಇದೇ ವೇಳೆ ಸ್ಥಳೀಯರಾದ ಸುರೇಶ್, ಧನುಷ್, ಹರೀಶ್ ಶಿವು, ಪ್ರಶಾಂತ್, ವಿಶ್ವಾಸ್, ಸಂಜಯ್, ಸೇರಿದಂತೆ ಮತ್ತಿತರರು ಸಂತಾಪ ಸೂಚಿಸಿದರು.