2021ನೇ ಸಾಲಿನ ಮಿಸ್ ಯೂನಿವರ್ಸ್ ಪಟ್ಟ ಪಂಜಾಬ್ ಮೂಲದ ಹರ್ನಾಜ್ ಸಂಧು ‘ಮಿಸ್ ಯೂನಿವರ್ಸ್’ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ…
2000ನೇ ಇಸವಿಯಲ್ಲಿ ಲಾರಾ ದತ್ತಾ ‘ಭುವನ ಸುಂದರಿ’ ಕಿರೀಟ ಪಡೆದಿದ್ದರು.
ಈಗ 21 ವರ್ಷಗಳ ನಂತರ ಹರ್ನಾಜ್ ಕೌರ್ ಸಂಧು ಅವರು ಗೌರವ ತಂದಿದ್ದಾರೆ.
ಇಸ್ರೇಲ್‌ನ ಈಲಿಯಟ್‌ನಲ್ಲಿ ನಡೆದ 70ನೇ ಭುವನ ಸುಂದರಿ ಸ್ಪರ್ಧೆಯಲ್ಲಿ ಹರ್ನಾಜ್ ಅವರು ಅಂತಿಮ ಸುತ್ತಿನಲ್ಲಿ ತಮ್ಮ ಪ್ರತಿಸ್ಪರ್ಧಿಗಳಾಗಿದ್ದ ಪರಗ್ವೆ ಮತ್ತು ದಕ್ಷಿಣ ಆಫ್ರಿಕಾದ ಸುಂದರಿಯರನ್ನು ಹಿಂದಿಕ್ಕಿ ವಿಜಯಶಾಲಿಯಾಗಿದ್ದಾರೆ..
2020ರ ಮಾಜಿ ಭುವನ ಸುಂದರಿ, ಮೆಕ್ಸಿಕೋದ ಆಂಡ್ರಿಯಾ ಮೆಜಾ ಅವರು ಹಾಲಿ ವಿಜೇತೆ ಹರ್ನಾಜ್ ಅವರಿಗೆ ಕಿರೀಟ ತೊಡಿಸಿದರು.
ಪರಗ್ವೆ ಮತ್ತು ದಕ್ಷಿಣ ಆಫ್ರಿಕಾದ ಸುಂದರಿಯರು ಕ್ರಮವಾಗಿ ಎರಡನೇ ಹಾಗೂ ಮೂರನೇ ಸ್ಥಾನ ಗಳಿಸಿದ್ದಾರೆ.
ಪೋರ್ಟರಿಕೋ, ಅಮೆರಿಕ, ಬಹಾಮಸ್, ಪರಗ್ವೆ, ದಕ್ಷಿಣ ಆಫ್ರಿಕಾ, ಪಿಲಿಪ್ಪೀನ್ಸ್, ಫ್ರಾನ್ಸ್, ಕೊಲಂಬಿಯಾ ಮತ್ತು ಅರುಬಾದ ಸ್ಪರ್ಧಿಗಳು ಟಾಪ್ 10ಕ್ಕೆ ಆಯ್ಕೆಯಾಗಿದ್ದರು.
80 ಸ್ಪರ್ಧಿಗಳ ನಡುವೆ ಹರ್ನಾಜ್ ಅವರು ಟಾಪ್ 16ಕ್ಕೆ ಆಯ್ಕೆಯಾಗಿದ್ದರು. ಬಳಿಕ ಟಾಪ್ ಟೆನ್, ಟಾಪ್ ಫೈವ್ ಹಾಗೂ ಟಾಪ್ 3 ಹಂತಕ್ಕೆ ಆಯ್ಕೆಯಾಗಿದ್ದರು…
ರೂಪದರ್ಶಿ ಹಾಗೂ ನಟಿಯಾಗಿರುವ ಹರ್ನಾಜ್ ಅವರು 2021ರ ಅಕ್ಟೋಬರ್‌ನಲ್ಲಿ ನಡೆದ ಮಿಸ್ ಯೂನಿವರ್ಸ್ ಇಂಡಿಯಾ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆಯುವ ಮೂಲಕ ಮಿಸ್ ಯೂನಿವರ್ಸ್ ಸ್ಪರ್ಧೆಗೆ ಆಯ್ಕೆಯಾಗಿದ್ದರು.
21 ವರ್ಷದ ಹರ್ನಾಜ್, ಪ್ರಸ್ತುತ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನೂ ವ್ಯಾಸಾಂಗ ಮಾಡುತ್ತಿದ್ದಾರೆ .
ಪಂಜಾಬ್‌ನ ಚಂಡೀಗಡದಲ್ಲಿನ ಸಿಖ್ ಕುಟುಂಬದಲ್ಲಿ 2000ದ ಮಾರ್ಚ್ 3ರಂದು ಜನಿಸಿದ ಅವರು, ಅಲ್ಲಿನ ಶಿವಾಲಿಕ್ ಪಬ್ಲಿಕ್ ಸ್ಕೂಲ್ ಮತ್ತು ಮಹಿಳೆಯರ ಸ್ನಾತಕೋತ್ತರ ಸರ್ಕಾರಿ ಕಾಲೇಜಿನಲ್ಲಿ ಓದಿದ್ದಾರೆ.
2017ರಲ್ಲಿ ಮಿಸ್ ಚಂಡೀಗಡ, 2018ರಲ್ಲಿ ಮಿಸ್ ಮ್ಯಾಕ್ಸ್ ಎಮರ್ಜಿಂಗ್ ಸ್ಟಾರ್ ಇಂಡಿಯಾಗಳಲ್ಲಿ ಗೆದ್ದಿದ್ದರು. ಫೆಮಿನಾ ಮಿಸ್ ಪಂಜಾಬ್ 2019ರಲ್ಲಿ ಜಯ ಗಳಿಸುವ ಮೂಲಕ ಫೆಮಿನಾ ಮಿಸ್ ಇಂಡಿಯಾ ಸುತ್ತನ್ನು ಪೂರ್ಣಗೊಳಿಸಿದ್ದರು. ಇದರಲ್ಲಿ ಅವರು ಟಾಪ್ 12ರಲ್ಲಿ ಸ್ಥಾನ ಪಡೆದಿದ್ದರು.
ಒಟ್ಟಾರೆ ಭಾರತಕ್ಕೆ 21 ವರ್ಷಗಳ ಬಳಿಕ ಒಲಿದ
2021ನೇ ಸಾಲಿನ ಮಿಸ್ ಯೂನಿವರ್ಸ್ ಪಟ್ಟವನ್ನು ಪಂಜಾಬ್ ನ ಹರ್ನಾಜ್ ಸಂಧು ತನ್ನದಾಗಿಸಿಕೊಂಡಿದ್ದಾರೆ.