ಪವರ್ ಸ್ಟಾರ್ ನಮ್ಮನ್ನು ಅಗಲಿ ಬಹಳಷ್ಟು ದಿನಗಳು ಕಳೆದಿದ್ದರು ಅವರ ನೆನಪು ಯಾವತ್ತು ಕರಗುವುದಿಲ್ಲ ಎನ್ನುವುದಕ್ಕೆ ಅವರ ಅಭಿಮಾನಿಗಳು ಕೈಗೊಂಡಿರುವ ಈ ಕಾರ್ಯ ಸಾಕ್ಷಿ..

ಪುನೀತ್ ರಾಜ್‌ಕುಮಾರ್ ಅವರ ಅಪ್ಪಟ್ಟ ಮೈಸೂರಿನ ಅಭಿಮಾನಿಗಳು ಬೆಂಗಳೂರಿನಲ್ಲಿರುವ ಅವರ ಸಮಾಧಿಗೆ ಮೈಸೂರಿನಿಂದ ಪಾದಯಾತ್ರೆ ಕೈಗೊಂಡಿದ್ದಾರೆ.

ಪುನೀತ್ ರಾಜ್‌ಕುಮಾರ್ ಸಮಾಜ ಸೇವಾ ಸಮಿತಿ ವತಿಯಿಂದ ಡಿಸೆಂಬರ್ 25 ರಂದು ಮೈಸೂರಿನ ಡಾ || ರಾಜ್‌ಕುಮಾರ್ ಉದ್ಯಾನವನದಿಂದ ಪಾದಯಾತ್ರೆ ಹೊರಟು ಡಿಸೆಂಬರ್ 29 ರಂದು ಪುನೀತ್‌ರಾಜ್‌ಕುಮಾರ್ ರವರ ಸಮಾಧಿ ದರ್ಶನ ಪಡೆಯಲಿದ್ದಾರೆ..

https://youtu.be/_cZlUvi8Shc

ಶ್ರೀರಂಗಪಟ್ಟಣದ ಮಾರ್ಗವಾಗಿ , ಮಂಡ್ಯ , ಮದ್ದೂರು , ಚೆನ್ನಪಟ್ಟಣ , ರಾಮನಗರ , ಬಿಡದಿ ಕೆಂಗೇರಿ ಮಾರ್ಗವಾಗಿ ಕಂಠೀರವ ಸ್ಟುಡಿಯೋ ತಲುಪುವುದು.

ರಾಜು ಎನ್ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದೆ, ಸೂರಿ ಕ್ಯಾಟ್ , ಮೋಹನ್ – ಸಿಂಧುವಳ್ಳಿ , ರಾಜು ಜಿ . , ಸಂತೋಷ್ ಸೇರಿದಂತೆ ಹಲವರು ಈ ತಂಡದಲ್ಲಿದ್ದಾರೆ.
ಇಚ್ಚೆ ಯುಳ್ಳ ಅಭಿಮಾನಿಗಳು ಪಾದಯಾತ್ರೆಗೆ ಬಂದು ಸೇರಿಕೊಳ್ಳಬಹುದು ಎನ್ನುತ್ತಾರೆ
ಪುನೀತ್ ರಾಜ್‌ಕುಮಾರ್ ಸಮಾಜ ಸೇವಾ ಸಮಿತಿ ಸದಸ್ಯರು.

Leave a Reply

Your email address will not be published. Required fields are marked *

You cannot copy content of this page