ಇತ್ತೀಚೆಗೆ ಸರ್ಕಾರಿ ನೌಕರರಿಗೆ
ಕಾರ್ಯಭಾರ ಹೆಚ್ಚಾಗಿದೆ.
ಎರಡುವರೆ ಲಕ್ಷ ಉದ್ಯೋಗ ಖಾಲಿ ಇರುವುದರಿಂದ ಒತ್ತಡ ಹೆಚ್ಚಾಗಿದೆ.
ಇದರಿಂದ ಸಾಕಷ್ಟು ನೌಕರರು ಖಿನ್ನತೆಗೂ ಒಳಗಾಗಿದ್ದಾರೆ.
ಸರ್ಕಾರದ ಮುಂದೆ ಈಗಾಗಲೆ ಸಂಘ ಕೂಡ ಬೇಡಿಕೆ ಇಟ್ಟಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ತಿಳಿಸಿದರು,
ಮೈಸೂರಿನ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು
ಮುಖ್ಯ ಮಂತ್ರಿ ಕೂಡ ಭರವಸೆ ನೀಡಿದ್ದಾರೆ.
ಸಂಘವೂ ಸಹ ಇದನ್ನು ಗಂಭೀರವಾಗಿ ಪರಿಗಣಿಸಿದೆ.
ಸರ್ಕಾರ ನಮ್ಮ ಬೇಡಿಕೆ ಈಡೇರಿಸುವ ಭರವಸೆ ಇದೆ.
ಬಜೆಟ್ ಮಂಡನೆಯಲ್ಲೂ ಸರ್ಕಾರಿ ನೌಕರರ ಪಾತ್ರ ಅತಿ ಹೆಚ್ಚು ಇದೆ.
ಎನ್ ಪಿ ಎಸ್ ವಿಚಾರದಲ್ಲಿ ಸರ್ಕಾರ ಉತ್ತಮ ನಿರ್ಧಾರ ತೆಗೆದುಕೊಳ್ಳುವ ವಿಶ್ವಾಸ ಇದೆ.
ಸರ್ಕಾರಿ ನೌಕರರು ಬೀದಿಗಿಳಿದರೆ ಸರ್ಕಾರಕ್ಕೆ ಆಗುವ ಸಮಸ್ಯೆ ಏನು ಎಂಬ ಅರಿವು ಸರ್ಕಾರಕ್ಕೆ ಇದೆ.
ಸರ್ಕಾರ
ನಮ್ಮ ನೌಕರರ ಸಮಸ್ಯೆ ಬಗೆಹರಿಸಿ ಚೆನ್ನಾಗಿ ನೋಡಿಕೊಂಡರೆ
ಕರ್ನಾಟಕ ಅಭಿವೃದ್ಧಿಯಲ್ಲಿ ನಂ ಒನ್ ಸ್ಥಾನಕೇರುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದರು..
ಇನ್ನೂಸರ್ಕಾರಿ ನೌಕರರ ಮೇಲೆ ಹಲ್ಲೆ ವಿಚಾರವಾಗಿ ಮಾತನಾಡಿದ ಅವರು
ಸಂಘ ಯಾವಾಗಲು ನೌಕರರ ಹಿತ ಕಾಯಲು ಬದ್ದವಾಗಿದೆ.
ಮೈಸೂರು ಸೇರಿದಂತೆ ಹಲವು ಕಡೆ ಹಲ್ಲೆ ಆಗಿದ ಪ್ರಕರಣಗಳನ್ನ ಸಂಘ ಖಂಡಿಸುತ್ತದೆ.
ಈ ಬಗ್ಗೆ ನಾವು ಪ್ರತಿಭಟನೆ ಹೋರಾಟಗಳನ್ನು ಮಾಡುತ್ತಿದ್ದೆವೆ.
ಸರ್ಕಾರ ನೌಕರರ ಕಿರುಕುಳ ತಪ್ಪಿಸಿಲು ಹೊಸ ಕಾನೂನು ರೂಪಿಸುವ ವಿಶ್ವಾಸ ಇದೆ.
ಯಾವದೇ ಸಂದರ್ಭದಲ್ಲಿ ಸರ್ಕಾರಿ ನೌಕರಿರಿಗೆ ಸಮಸ್ಯೆ ಆದ್ರೆ ಸಂಘ ಜೊತೆಗಿರಲಿದೆ.
ಮೂಡಾ ಆಯುಕ್ತರ ಮೇಲೆ ನಡೆದಿದೆ.
ಅವರ ಜೊತೆ ನಾನು ನಿರಂತರ ಸಂಪರ್ಕದಲ್ಲಿ ಇದ್ದೇನೆ ಎಂದು ತಿಳಿಸಿದರು..
ಇದೆ ಸಂಧರ್ಭದಲ್ಲಿ ಕರ್ನಾಟಕ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಾಕ್ಷ ಗೋವಿಂದರಾಜು , ಪ್ರಧಾನ ಕಾರ್ಯದರ್ಶಿ ರೇವಣ್ಣ ಸೇರಿದಂತೆ ಸಂಘದ ಎಲ್ಲಾ ಪದಾಧಿಕಾರಿಗಳು ಗಳು ಉಪಸ್ಥಿತರಿದ್ದರು.