ಮೈಸೂರು ವಿಶ್ವವಿದ್ಯಾನಿಲಯದ ಲಲಿತಾಕಲೆ ಕಲೇಜು ಆಡಿಟೋರಿಯಂ ನಲ್ಲಿ ನಡೆದ ಕಾರ್ಯಕ್ರಮವನ್ನು ತಿ ನರಸೀಪುರ ಶಾಸಕರಾದ ಅಶ್ವಿನ್ ಕುಮಾರ್ ಅವರು ಉದ್ಘಾಟಿಸಿ,
ಎರಡನೇ ಆಡಿಯೋ ಬಿಡುಗಡೆ ಮಾಡಿದರು..
ಇಂದು ಬಿಡುಗಡೆಯಾದ
ಫಿಕ್ಸ್ ಆದ್ರೆ ಲವ್ವಲ್ಲಿ ನವೀನ್ ಸಜ್ಜು ಹಾಡಿರೋ ಹಾಡನ್ನ ಅರ್ಜುನ್ ರಮೇಶ ಅವರೇ ಬರೆದಿರುವುದು ವಿಶೇಷ.
ಕೌಟಿಲ್ಯ ಚಿತ್ರದಲ್ಲಿ ಟಿವಿ ಧಾರಾವಾಹಿ ನಟರಾದ ಅರ್ಜುನ್ ರಮೇಶ್, ಪ್ರಿಯಾಂಕಾ ಚಿಂಚೋಳಿ ನಟಿಸಿದ್ದು, ಶನಿ ಧಾರಾವಾಹಿಯಲ್ಲಿ ಶಿವನ ಪಾತ್ರದ ಮೂಲಕ ಖ್ಯಾತಿ ಗಳಿಸಿದ್ದ ಅರ್ಜುನ್ ರಮೇಶ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ.
ಪ್ರಿಯಾಂಕಾ ಚಿಂಚೋಳಿ
ಅಂತೆಯೇ ಮನಸಾರೆ ಧಾರಾವಾಹಿ ಖ್ಯಾತಿಯ ಪ್ರಿಯಾಂಕಾ ಚಿಂಚೋಳಿ ಚಿತ್ರದ ನಾಯಕಿಯಾಗಿ ನಟಿಸುತ್ತಿದ್ದು, ಈ ಚಿತ್ರದ ಮೂಲಕ ಇಬ್ಬರೂ ನಟರು ಬೆಳ್ಳಿತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಇನ್ನು ಕೌಟಿಲ್ಯ ಚಿತ್ರಕ್ಕೆ ಸಂಬಂಧಿಸಿದಂತೆ ಅರ್ಥಶಾಸ್ತ್ರದಲ್ಲಿ ಕೌಟಿಲ್ಯನನ್ನು ಚಾಣಕ್ಯ ಎಂದು ಪರಿಗಣಿಸಲಾಗುತ್ತದೆ, ಈತ ಚಂದ್ರಗುಪ್ತ ಮೌರ್ಯನ ಸಾಮ್ರಾಜ್ಯವನ್ನು ನಿರ್ಮಿಸುವ ಹಿಂದಿನ ಪ್ರಮುಖ ಸ್ತಂಭವೆಂದು ಪರಿಗಣಿಸಲಾಗಿದೆ. ಕಾಲದ ಕಂಟೆಂಟ್ ಅನ್ನು ಸಮಕಾಲೀನ ಪೀಳಿಗೆಗೆ ನಿರ್ದೇಶಕರು ಅಳವಡಿಸಲಾಗಿದೆ ಎಂದು ಚಿತ್ರದ ನಿರ್ದೇಶಕ ಪ್ರಭಾಕರ ಶೇರಖಾನೆ ಹೇಳಿದ್ದಾರೆ.
ಕೌಟಿಲ್ಯ ಚಿತ್ರಕ್ಕೆ ಕಿರಣ್ ಕೃಷ್ಣಮೂರ್ತಿ ಸಂಗೀತ ಸಂಯೋಜಿಸಿದ್ದು, ನೌಶಾದ್ ಆಲಂ ಅವರ ಛಾಯಾಗ್ರಹಣವಿದೆ.
ಒಟ್ಟಾರೆ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿರುವ ಚಿತ್ರತಂಡ , ಚಿತ್ರ ಬಿಡುಗಡೆ ಯಾದ ಮೇಲೆ ಪ್ರೇಕ್ಷಕ ಮಹಾಪ್ರಭು ಚಿತ್ರವನ್ನ ಯಾವ ರೀತಿ ಸ್ವೀಕಾರ ಮಾಡುವರೋ ಕಾದು ನೋಡಬೇಕು.