Lohith hanumanthappa : ವಿಶ್ವ ವಿಖ್ಯಾತ ಮೈಸೂರು ಅರಮನೆ ಎದುರು ಪಾರಿವಾಳಗಳಿಗೆ ಧಾನ್ಯಗಳನ್ನು ಹಾಕುತ್ತಿರುವುದನ್ನು ತಡೆಯುವುದರ ಬಗ್ಗೆ ಮಾನ್ಯ ಸಂಸದರಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸರ್ ರವರಿಗೆ ಮನವಿ ನೀಡಲಾಯಿತು.
ಈಗಾಗಲೇ ಸುಮಾರು ವರ್ಷಗಳಿಂದ ಪಾರಿವಾಳಗಳಿಗೆ ಧಾನ್ಯಗಳ ಕಾಳುಗಳು ಹಾಕುವುದರ ಮೂಲಕ ಅರಮನೆ ಮುಂಭಾಗ ಅಂದರೆ ಕೋಟೆ ಅಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಪ್ರತಿ ದಿನ ಅಲ್ಲಿಗೆ ಬರುವ ಪ್ರವಾಸಿಗರು ಆಹಾರ ಧಾನ್ಯಗಳನ್ನು ತಂದು ಹಾಕುತ್ತಿರುತ್ತಾರೆ ಇದರಿಂದ ತೊಂದರೆಯಾಗುತ್ತಿದೆ ಏನೆಂದರೆ ಇಲ್ಲಿಗೆ ನೂರಾರು ಪಾರಿವಾಳ ಪಕ್ಷಿಗಳು ಬರುವುದರಿಂದ, ಧಾನ್ಯಗಳನ್ನು ಸೇವಿಸಿ ನಂತರ ಅರಮನೆ ಹಾಗೂ ಹತ್ತನೇ ಚಾಮರಾಜರಾಜೇಂದ್ರ ಒಡೆಯರ್ ಅವರ ಪ್ರತಿಮೆ ಮೇಲೆ ಕುಳಿತು ಕೊಳ್ಳುತ್ತಿವೆ. ಇದರಿಂದ ಪ್ರತಿಮೆ ಹಾಗೂ ಪಾರಂಪರಿಕ ಕಟ್ಟಡಗಳಿಗೆ ಹಾನಿ ಉಂಟಾಗುತ್ತಿದೆ ಇದರ ಸೂಕ್ಷ್ಮತೆಯನ್ನು ಗಮನಿಸಿ ದಯಮಾಡಿ ಇಲ್ಲಿ ಯಾರೂ ಆಹಾರಧಾನ್ಯಗಳನ್ನು ಚೆಲ್ಲದಿರುವಂತೆ ಆದೇಶಿಸಬೇಕೆಂದು ಈ ಮೂಲಕ ತಮಗೆ ಮನವಿ ಮಾಡಿಕೊಳ್ಳುತ್ತಿದ್ದೇವೆ ಮೈಸೂರು ಅರಮನೆ ಸುತ್ತ ಮುತ್ತ ಸೇರಿದಂತೆ ಹಲವು ಪಾರಂಪರಿಕ ಕಟ್ಟಡಗಳು ಇವೆ ಅವುಗಳ ಸಂರಕ್ಷಣೆ ಮುಖ್ಯ ಅವುಗಳು ನಮ್ಮ ಮುಂದಿನ ತಲೆ ಮಾರಿಗೂ ಉಳಿಯ ಬೇಕು ಹಾಗಾಗಿ ತಮ್ಮಲ್ಲಿ ಕಳಕಳಿಯ ಮನವಿಯನ್ನ ಮಾಡಿಕೊಳ್ಳುತ್ತಿದ್ದೇವೆ. ಇದರ ಬಗ್ಗೆ ಅತೀ ಶೀಘ್ರದಲ್ಲೇ ಕ್ರಮ ಕೈಗೊಂಡು ನಮ್ಮ ಐತಿಹಾಸಿಕ ಪ್ರಸಿದ್ಧ ಕಟ್ಟಡಗಳನ್ನು ಉಳಿಸ ಬೇಕೆಂದು ಮಾನ್ಯ ಸಂಸದರಾದ ಶ್ರೀ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ರವರಿಗೆ ಮನವಿ ನೀಡಲಾಯಿತು
ಈ ಸಂದರ್ಭದಲ್ಲಿ ಗಂಧದಗುಡಿ ಫೌಂಡೇಶನ್ ನ ರಾಜ್ಯಾಧ್ಯಕ್ಷರಾದ ಶ್ರೀ ಅರ್ಯನ್ ಗಂಧದ ಗುಡಿ .ಶ್ರೀಮತಿ ಯಶೋದ ಆರ್ ಹಾಗೂ ಶ್ರೀ ಭರತ್ ಉಪಸ್ಥಿತರಿದ್ದರು