ಪಂಜಾಬ್. ಹರಿಯಾಣ ರೈತರ ಹೋರಾಟ ಎಂದು ಸಮಸ್ಯೆಗಳ ಪರಿಹಾರಕ್ಕೆ ಸರ್ವೋಚ್ಚ ನ್ಯಾಯಾಲಯ ನ್ಯಾಯಾಲಯ ಉಚ್ಚ ನ್ಯಾಯಾಲಯದ ನಿವೃತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಐದು ಜನ ಪರಿಣಿತರ ಸೇರಿಸಿ ಸಮಿತಿ ರಚಿಸಿದೆ. ದೇಶದ ರೈತರಿಗೆ ಎಂ ಎಸ್ ಪಿ ಗ್ಯಾರಂಟಿ ಕಾನೂನು ಆಗಬೇಕು ಎಂದು ಹೋರಾಟ ನಡೆಸಲಾಗುತ್ತಿದೆ ಈ ಹೋರಾಟವನ್ನು ಇಡೀ ದೇಶದ ರೈತರು ಬೆಂಬಲಿಸಿ ಮುಂದುವರಿಸಿದ್ದಾರೆ. ಈಗ ರಚಿಸಿರುವ ಸಮಿತಿಯನ್ನ ಇಡೀ ದೇಶಕ್ಕೆ ಅನ್ವಯವಾಗುವಂತೆ ದಕ್ಷಿಣ ಭಾರತ ರಾಜ್ಯಗಳ ಪರಿಣಿತರನ್ನು ಸೇರಿಸಿ ಸಮಿತಿ ರಚಿಸಿ. ಈಗ ಹೂರಡಿಸಿರುವ ಆದೇಶ ಪುನರ್ ಪರಿಶೀಲಿಸಲಿ. ಎಂದು ಒತ್ತಾಯಿಸುತ್ತೇವೆ ಎಂದು ಕುರುಬೂರು ಶಾಂತಕುಮಾರ್ ತಿಳಿಸಿದರು.
ಮೈಸೂರಿನ ಜಲದರ್ಶಿನಿ ಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು
ಕುಲಾಂತರಿ ಬೀಜ ರೈತರ ಹಿತದೃಷ್ಟಿಯಿಂದ ರಾಜ್ಯ ಕೇಂದ್ರ ಸರ್ಕಾರಗಳು ಬಹಿಷ್ಕಾರ ಮಾಡಲಿ.
ಖಾಸಗಿ ಫೈನಾನ್ಸ್ ಗಳು ಖಾಸಗಿ ಬ್ಯಾಂಕುಗಳು ಹಾವಳಿ. ಕಾನೂನುಬಾಹಿರ ಕಿರುಕುಳ ತಪ್ಪಿಸಲು. ಕೂಡಲೇ ರಿಸರ್ವ್ ಬ್ಯಾಂಕ್ ಕಠಿಣ ನೀತಿ ರೂಪಿಸಲಿ.
ರೈತರ ಕೃಷಿ ಸಾಲ ವಸೂಲಾತಿಗಾಗಿ ರೂಪಿಸಿರುವ ಸರ್ಪ್ರೈಸಿ ಕಾಯ್ದೆಯನ್ನು ರದ್ದುಗೊಳಿಸಲಿ. ಈ ಬಗ್ಗೆ ರಾಜ್ಯದ ಸಂಸದರು ಒತ್ತಾಯಿಸಲಿ.
ಪ್ರಸಕ್ತ ಸಾಲಿನ ಹೆಚ್ಚುವರಿ ಕಬ್ಬುದರ ನಿಗದಿ. ಕಳೆದ ವರ್ಷದ 150 ಬಾಕಿ ಕೊಡಿಸಲು ಜಿಲ್ಲಾಡಳಿತ ಕೂಡಲೇ ಕ್ರಮ ಕೈಗೊಳ್ಳಲಿ. ಬತ್ತ ಉತ್ಪಾದನಾ ವೆಚ್ಚ ಏರಿಕೆಯಾಗಿದೆ ರಾಜ್ಯ ಸರ್ಕಾರ ಕನಿಷ್ಠ ಬೆಂಬಲ ಬೆಲೆಗೆ ಹೆಚ್ಚುವರಿ 500 ಪ್ರೋತ್ಸಾಹ ಧನ ನೀಡಬೇಕು ಕೇರಳ ಹಾಗು ಒರಿಸ್ಸಾ ಮಾದರಿಯಲ್ಲಿ ರಾಜ್ಯದ ರೈತರ ಸಮಸ್ಯೆಗಳ ಕುರಿತು ಅಕ್ಟೂಬರ್ ನಲ್ಲಿ ರಾಜ್ಯರೈತ ಸಮಾವೇಶ ನಡೆಸಲಾಗುತ್ತದೆ ಎಂದು ತಿಳಿಸಿದರು,
ಸುದ್ದಿಗೋಷ್ಠಿಯಲ್ಲಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ರೈತ ಸಂಘದ ಬಲ್ಲೂರ್ ರವಿಕುಮಾರ್ , ನೆಲಮಂಗಲ ಜಗದೀಶ, ರವೀಶ, ಕೂಟ್ರೆಶಚೌದರಿ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಹತ್ತಳ್ಳಿ ದೇವರಾಜ್ಬ,
ಬರಡನಪುರ ನಾಗರಾಜ್.
ಉಡಿಗಾಲ ರೇವಣ್ಣ.
ಸುಂದ್ರಪ್ಪ .ನೀಲಕಂಠಪ್ಪ ಮುಂತಾದವರು ಇದ್ದರು