ವಿಶ್ವ ಆಲ್ಝೈಮರ್ಸ್ ದಿನದ ಮುನ್ನಾದಿನದಂದು ನೆನಪಿನ ನಡಿಗೆಯನ್ನು ಇಂದು ಮೈಸೂರಿನ ಶಾರದಾ ವಿಲಾಸ ಫಾರ್ಮಸಿ ಕಾಲೇಜು ಮತ್ತು ಮೈಸೂರು ವತಿಯಿಂದ ಆಯೋಜಿಸಲಾಗಿತ್ತು.
ಮೈಸೂರು ಶಾಸಕರಾದ ಶ್ರೀ ಶ್ರೀವತ್ಸ ಅವರು ವಾಕಥಾನ್ ಉದ್ಘಾಟಿಸಿದರು ಶ್ರೀಮತಿ ದೇವಿಕಾ ಆರ್ಟಿಒ ಮೈಸೂರು ಅವರು ಕಾರ್ಯಕ್ರಮದಲ್ಲಿ ಮೈಸೂರಿನ ಸುಮಾರು 850 ವಿದ್ಯಾರ್ಥಿಗಳು ಸಿಬ್ಬಂದಿ ನಾಗರಿಕರು ಭಾಗವಹಿಸಿದ್ದರು.
ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ, ಮೈಸೂರು ಅರಮನೆ ಆವರಣದಿಂದ ಆರಂಭವಾದ ಪಾದಯಾತ್ರೆ ಕುಕ್ಕರಳ್ಳಿ ಕೆರೆಯಲ್ಲಿ ಸಮಾರೋಪಗೊಂಡಿತು. ಅರಿವು ಮೂಡಿಸಲು ನಾಗರಿಕರಿಗೆ ಕರಪತ್ರಗಳನ್ನು ಹಂಚಲಾಯಿತು.
ಎಸ್ವಿಸಿಪಿ, ಎಟಿಎಂಇ ಎಂಜಿನಿಯರಿಂಗ್ ಕಾಲೇಜು ಮತ್ತು ಇತರ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು, ಆಸ್ಪತ್ರೆಗಳ ಸಿಬ್ಬಂದಿ ಭಾಗವಹಿಸಿದ್ದರು.