ಮೈಸೂರು ಅರಮನೆ ಮತ್ತು ಮೈಸೂರಿನ ಇತರೆ ಐತಿಹಾಸಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಧಾನ್ಯ ಚೆಲ್ಲುವುದನ್ನು ನಿಷೇಧಿಸುವ ಬಗ್ಗೆ ಹಲವು ಸಂಘ ಸಂಸ್ಥೆಗಳ ಜೊತೆ ಸಭೆ ನಡೆಸಿದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಹಲವು ಸಂಘ ಸಂಸ್ಥೆಗಳಾದ ಕ್ಲೀನ್ ಮೈಸೂರು ಫೌಂಡೇಶನ್, ಮೈಸೂರು ಗ್ರಾಹಕರ ಪರಿಷತ್ತು, ಸುರಕ್ಷಾ ಫೌಂಡೇಶನ್, ಮೈಸೂರು ಟ್ರಾವೆಲ್ ಅಸೋಸಿಯೇಷನ್, ಮೈಸೂರು ಸಂಘ ಸಂಸ್ಥೆಗಳ ಒಕ್ಕೂಟ, ಗಂಧದಗುಡಿ ಫೌಂಡೇಶನ್, ಅರಣ್ಯ ಔಟ್ರೇಚ್, ವಿಶ್ವ ಹಿಂದೂ ಪರಿಷತ್ ಸಂಘ ಸಂಸ್ಥೆಗಳ ವತಿಯಿಂದ ಮೈಸೂರು ಅರಮನೆ ಮತ್ತು ಮೈಸೂರಿನ ಇತರೆ ಐತಿಹಾಸಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಧಾನ್ಯ ಚೆಲ್ಲುವುದನ್ನು ನಿಷೇಧಿಸುವ ಬಗ್ಗೆ ಸಂಸದರಿಗೆ ಮನವಿ ಸಲ್ಲಿಸಿದ್ದರು,
ಹಿನ್ನೆಲೆಯಲ್ಲಿ ಇಷ್ಟು ಸಂಘ-ಸಂಸ್ಥೆಗಳನ್ನು ಒಗ್ಗೂಡಿಸಿಕೊಂಡು ಸಭೆ ನಡೆಸಿದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮೈಸೂರಿನ ಇತಿಹಾಸ ಮತ್ತು ಸಂಸ್ಕೃತಿಯನ್ನು ಉಳಿಸುವ ಸಲುವಾಗಿ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಪಾರಿವಾಳಗಳಿಗೆ ಅರಮನೆಯ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಪ್ರತಿ ದಿನ ಹೆಲ್ಪಿಂಗ್ ಹ್ಯಾಂಡ್ ಸಂಸ್ಥೆಯವರು ಧಾನ್ಯಗಳನ್ನು ಹಾಕುತಿದ್ದರು ಧಾನ್ಯ ಹಾಕುವುದು ಸಹನಭೂತಿಯ ಕ್ರಿಯೆ ಎಂದು ಅರಮನೆ ಮತ್ತು ಇತರೆ ಐತಿಹಾಸಿಕ ಸ್ಥಳಗಳನ್ನು ಬಳಸಿಕೊಂಡಿದ್ದರು ಆದರೆ ಇದರಿಂದ ಪಾರಂಪರಿಕ ಕಟ್ಟಡಗಳಿಗೆ ಹಾನಿ ಉಂಟಾಗುತ್ತಿದ್ದು ಇದನ್ನು ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಹಲವು ಸಂಘ ಸಂಸ್ಥೆಗಳು ಮನವಿ ಸಲ್ಲಿಸಿದೆ ಅದನ್ನು ಪರಿಶೀಲಿಸಿದ ನಂತರ ಕಾನೂನಾತ್ಮಕವಾಗಿ ಪಾರಿವಾಳಗಳಿಗೆ ಆಹಾರ ಪದಾರ್ಥಗಳನ್ನು ಹಾಕುವುದನ್ನು ನಿಷೇಧಿಸಬೇಕಾಗಿ ಕ್ರಮ ಕೈಗೊಳ್ಳಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸಂಸದರು ಸೂಚನೆ ನೀಡಿದ್ದಾರೆ