ಪಾಂಡವ ಪುರದಲ್ಲಿರುವ ಶ್ರೀ ವಿಜಯಕಾಳಿ ಪವಾಡ ಬಸಪ್ಪನವರ  ಪುಣ್ಯಕ್ಷೇತ್ರ

ವಿಶೇಷ ವರದಿ : ಲೋಹಿತ್ ಹನುಮಂತಪ್ಪ,
ಈ ಕ್ಷೇತ್ರದಲ್ಲಿ ಜನರ ಪ್ರಶ್ನೆಗೆ ದೇವರಿಂದಲೆ ನೇರ ಉತ್ತರ ಸಿಗುತ್ತದೆ,
ಇಲ್ಲಿನ ಪವಾಡ ಬಸವ ಬಲಗಾಲು ಕೊಟ್ಟು ನಿಮಗೆ ಪಾಸಿಟಿವ್ ಎನರ್ಜಿ ನೀಡುತ್ತೆ,
ಅಂಜನಾ ಹಾಗೂ ಕವಡೆ ಶಾಸ್ತ್ರದಿಂದ ನಿಮ್ಮ ಸಕಲ ಸಂಕಷ್ಟಕ್ಕೆ  ಉತ್ತರ,
ಶ್ರೀ ಚಕ್ರ ಸ್ನಾನದಿಂದ ದೈವಿಕ ಅಂಶ ಭಕ್ತರಿಗೆ ಲಭಿಸಲಿದೆ

*ಇಷ್ಟೇಲ್ಲ ಇರೋ ಶ್ರೀ ವಿಜಯಕಾಳಿ ಪವಾಡ ಬಸಪ್ಪನ  ಪುಣ್ಯಕ್ಷೇತ್ರದ ಬಗ್ಗೆ  ತಿಳಿಯೋಣ*

ದೇವರ ಮೇಲೆ ನಂಬಿಕೆನೇ ಇರಲಿಲ್ಲದ ವ್ಯಕ್ತಿಗೆ ತಾಯಿ ವಿಜಯಕಾಳಿ ಪ್ರೇರಣೆಯಾಗಿ ,
ಇಂದು ನಿರಂತರ ಸೇವೆ ಮಾಡುವ ಮೂಲಕ ಶ್ರೀ ವಿಜಯಕಾಳಿ ಪವಾಡ ಬಸಪ್ಪನ  ಪುಣ್ಯಕ್ಷೇತ್ರ ಸ್ಥಾಪನೆ ಮಾಡಿ ರಾಜ್ಯದ ಮೂಲೆ ಮೂಲೆಗಳಿಂದಲೂ ಅಪಾರ ಭಕ್ತಗಣ ಹೊಂದಿರುವ ಡಾ.‌ಶ್ರೀ ರಾಜೇಶ್ ಗುರೂಜಿ ತಮ್ಮ ಮಠದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ,

ಹೌದು ನಾವು
ಹಲವು ಭಕ್ತರ ನಂಬಿಕೆಗೆ ಹೆಸರಾಗಿರುವ ಶ್ರೀ ವಿಜಯಕಾಳಿ ಮಠ, ಪವಾಡ ಬಸವಪ್ಪ ಸನ್ನಿಧಾನದ ಬಗ್ಗೆ ಒಂದು ವಿಶೇಷ ವರದಿಯನ್ನು ನಿಮಗೆ ಪ್ರಸ್ತುತ ಪಡಿಸುತ್ತಿದ್ದೇವೆ,

ಮಂಡ್ಯ ಜಿಲ್ಲೆಯ
ಪಾಂಡವಪುರ ತಾಲ್ಲೂಕಿನ
ಹುಲ್ಕೆರೆ ಕೊಪ್ಪಲಿನಲ್ಲಿರುವ
ಶ್ರೀ ವಿಜಯಕಾಳಿ ಪವಾಡ ಬಸವಪ್ಪ ಮಠವನ್ನು ನಿರ್ಮಾಣ ಮಾಡುವ ಮುನ್ನ ಸಂಸ್ಥಾಪಕರಾದ ಡಾ.ರಾಜೇಶ್ ಗುರುಜೀಗಳು ಸಾಕಷ್ಟು ಅವಮಾನಗಳನ್ನು  ಎದುರಿಸಿದ್ದರಂತೆ,  ಇಂತ ಸಂದರ್ಭದಲ್ಲಿ, ದೇವರ ಮೇಲೆ ನಂಬಿಕೆಯ ಇಲ್ಲದವನಿಗೆ ತಾಯಿ ವಿಜಯಕಾಳಿ ದೇವಿ ಕನಸಿನಲ್ಲಿ ಬಂದು ಕಾಡುತ್ತಿದ್ದಳಂತೆ , ಈ ಒಂದು ತಳಮಳಕ್ಕೆ ಕಾರಣ ಏನು ಎಂಬ ನಾನಾ ಪ್ರಶ್ನೆಗೆ ಸಾಧು ಸಂತರಿಂದ ಸಿಕ್ಕ ಉತ್ತರ ತಾಯಿಯನ್ನು ಭಕ್ತಿಯಿಂದ ಪೂಜಿಸಬೇಕೆಂದು ,

ಅದರಂತೆ ನಿರ್ಮಾಣವಾದ ಶ್ರೀ ಕ್ಷೇತ್ರವೇ  ಶ್ರೀ ವಿಜಯಕಾಳಿ ಮಠ , ಈ ಒಂದು ಪುಣ್ಯಕ್ಷೇತ್ರ ನಿರ್ಮಾಣಕ್ಕೆ ಹಲವರು ಕೈ ಜೋಡಿಸಿದರು, ಹಾಗೇಯೆ ಮಠಕ್ಕೆ ಏನೆ ಕಷ್ಟಗಳು ಬಂದರು ವಿಜಯಕಾಳಿ ತಾಯಿ ಆಶೀರ್ವಾದಿಂದ‌ ಮಂಜಿನಂತೆ ಕರಗಿ ಅಮೃತವಾಗಿ ಮಾರ್ಪಟ್ಟಿದೆ ಎಂದು ಸ್ವತಃ ಗುರುಗಳೇ ಮಾಹಿತಿ ಹಂಚಿಕೊಂಡಿದ್ದಾರೆ,

ಇಲ್ಲಿ ಪ್ರತಿ ಶುಕ್ರವಾರ, ಮಂಗಳವಾರ, ಭಾನುವಾರ, ಅಮಾವಾಸ್ಯೆ, ಹುಣ್ಣಿಮೆಯ ದಿನಗಳಲ್ಲಿ ವಿಶೇಷ ಕೈಂಕರ್ಯಗಳು ಶ್ರಧ್ದಾಭಕ್ತಿಯಿಂದ ನಡೆಯುತ್ತವೆ

ಅಂಗೈಯಲ್ಲಿ ಪ್ರಪಂಚ ನೋಡುವ ಕಾಲಘಟ್ಟದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಎಷ್ಟೇ ಎತ್ತರಕ್ಕೆ ಬೆಳೆದರು ಆಚಾರ ವಿಚಾರ ಸಂಸ್ಕೃತಿಯ ನೆಲಬೀಡಾಗಿರುವ ನಮ್ಮ ದೇಶದಲ್ಲಿ ಕೆಲವೊಮ್ಮೆ ವಿಜ್ಞಾನಕ್ಕೆ ಸಾವಲೆನಿಸುವ ಹಲವು ಪವಾಡಗಳು ಕೆಲ ಶ್ರೀ ಕ್ಷೇತ್ರದಲ್ಲಿ ನೆಡೆಯುವುದುಂಟು.
ಅಂತಹ ಪುಣ್ಯ ಕ್ಷೇತ್ರಗಳಲ್ಲಿ  ಕ್ಷೇತ್ರದಲ್ಲಿ ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕು ಹುಲ್ಕೆರೆ ಕೊಪ್ಪಲು ಹಾಗೂ ಕೆ.ಬೆಟ್ಟಹಳ್ಳಿ ಗ್ರಾಮದ ನಡುವೆ ಇರುವ ಶ್ರೀ ವಿಜಯ ಕಾಳಿ ಮಠ ಸಹ ಅಗ್ರಮಾನ್ಯವಾಗಿದೆ.

*ಚರ್ಮಕಾಯಿಲೆಗೆ ರಾಮಬಾಣ ಇಲ್ಲಿನ ಶ್ರೀ ಚಕ್ರ ಸ್ನಾನ.*

*ವೈದ್ಯಕೀಯಕ್ಕೆ ಸವಾಲಾಗಿದ್ದ ಖಾಯಿಲೆ ಪವಾಡವೆಂಬಂತೆ ಗುಣ.*

ಇದು ಅಚ್ಚರಿಯಾದ್ರು ಭಕ್ತರ ನಂಬಿಕೆಯಲ್ಲಿ ಇದು ಸತ್ಯ
ಮುಂಜಾನೆಯ ಪೂರ್ವಕಾಲದಲ್ಲೆ ಶ್ರೀ ವಿಜಯಕಾಳಿ ಅಮ್ಮನವರಿಗೆ ಆಭಿಷೇಕವಾದ ಪಂಚದ್ರವ್ಯಗಳನ್ನು ಒಳಗೊಂಡ ಹರಿಶಿಣ ನೀರನ್ನು ಶ್ರೀ ಚಕ್ರವನ್ನು ತಲೆಯ ಮೇಲಿಸಿ ಭಕ್ತರಿಗೆ ಹಾಕುವುದು ವಾಡಿಕೆ ಈ ಆಚರಣೆಯಿಂದ ವೈದ್ಯಕೀಯಕ್ಕೆ ಸವಾಲಾಗಿದ್ದ ಹಲವು ಸಮಸ್ಯೆಗಳು ಬಗೆಹರಿದಿವೆ ಎಂಬುದು ಇಲ್ಲಿನ ಭಕ್ತರ ಬಾಯಿಂದಲೆ ಬಂದ ಸತ್ಯದ ನುಡಿಗಳು.

*ಶ್ರೀ ವಿಜಯಕಾಳಿಯೇ ಬಸವನ ರೂಪದಿ ನೆಲೆಸಿರುವ ಪುಣ್ಯ ಭೂಮಿ*

*ಈ ಪವಾಡ ಬಸವ ಬಲಗಾಲು ಕೊಟ್ಟರೆ ನಿಮ್ಮ ಇಷ್ಠಾರ್ಥ ಸಿದ್ದಿ*

ಶ್ರೀ ವಿಜಯಕಾಳಿಯ ಅಮ್ಮನವರೆ ಇಲ್ಲಿ ಬಸವನ ರೂಪದಲ್ಲಿ ನೆಲೆಸಿದ್ದಾಳೆ ಎಂಬುದು ಇಲ್ಲಿನ ಭಕ್ತಗಣದ ಘನ ನಂಬಿಕೆಯಾಗಿದ್ದು ಈ ಬಸವ ಸೃಷ್ಠಿಸುವ ಹಲವು ಪಾವಡಗಳು ಇದಕ್ಕೆ ಪುಷ್ಠಿ ನೀಡುತ್ತಿವೆ. ದುಶ್ಚಟ ಬಿಡಿಸುವುದು ಹಾಗೂ ಹತ್ತಾರು ವರ್ಷಗಳಿಂದ ನಿಂತ ಗ್ರಾಮ ದೇವತೆಗಳ ಹಬ್ಬಕ್ಕೆ  ದೇವರ ನೈಜ ಗಡ್ಡನನ್ನು ಆಯ್ಕೆ ಮಾಡುವುದು ಇಂತಹ ಹಲವು ಪವಾಡಗಳಿಂದ ಈ ಬಸವಣ್ಣ ಕರ್ನಾಟಕದ ಮನೆ ಮಾತಾಗಿದ್ದು  ಶ್ರೀಮಠಕ್ಕೆ ಬರುವ ಭಕ್ತರ ಹಲವು ಸಮಸ್ಯೆಗಳು ಹಾಗೂ ಇಷ್ಠಾರ್ಥ ಸಿದ್ದಿಗೆ ಕಾರಾರುವಕ್ಕಾದ ಉತ್ತರವನ್ನು ಬಲಗಾಲು ನೀಡುವ ಮೂಲಕ ನೀಡಿ ಭಕ್ತರ ಇಷ್ಟ ದೈವವಾಗಿದ್ದಾನೆ.

*ಅಮವಾಸೆ ಹುಣ್ಣಿಮಯಲ್ಲಿ ವಿಶೇಷ ಪ್ರತ್ಯಂಗಿರಾ ಹೋಮ*

*ಪಂತ್ಯಂಗಿರಾ ಹೋಮದಿಂದ ಶತ್ರುಕಾಟ ನಿರ್ನಾಮ*

ಈ ಕ್ಷೇತ್ರದ ಇನ್ನೊಂದು ವಿಶೇಷ ಪೂಜೆ ಎಂದರೆ  ಪ್ರತ್ಯಂಗಿರಾ ಹೋಮ ಈ ಪುಣ್ಯಕ್ಷೇತ್ರದ ಧರ್ಮಧ್ಯಕ್ಷರು, ಶ್ರೀ ವಿಜಯಕಾಳಿ ಅಮ್ಮನವರ ಆರಾಧಕರಾದ ಡಾ.ರಾಜೇಶ್ ಸ್ವಾಮಿಜೀಯವರು ಭಕ್ತರ ಕೋರಿಕೆಯಂತೆ ಅತ್ಯಂತ ಶ್ರಧ್ದಾಭಕ್ತಿ ಯಿಂದ‌ ಈ ಪ್ರತ್ಯಾಂಗಿರ ಹೋಮವನ್ನು ಶಾಸ್ತ್ರೋಕ್ತವಾಗಿ ಪ್ರತಿ ಅಮವಾಸ್ಯೆ ಹಾಗೂ ಹುಣ್ಣಿಮೆ ದಿನದಂದು ನೆರವೇರಿಸುತ್ತಾ ಬಂದಿದ್ದು  ಈ ಪಂತ್ಯಂಗಿರಾ ಹೋಮದಲ್ಲಿ ಭಾಗವಹಿಸಿ ಗುರುಗಳ ಮಾರ್ಗದರ್ಶನದಂತೆ ಮೆಣಸಿನಕಾಯಿ ಹಾಗೂ ಉಪ್ಪನ್ನು ಹೋಮ ಕುಂಡದಲ್ಲಿ ಸುಡುವ ಮೂಲಕ ನಮಗಿದ್ದ ಆಶಾಂತಿ ನಿವಾರಣೆಯಾಗಿದ್ದು ಶತ್ರುಕಾಟ ನೀವಾರಣೆಯಾಗಿದೆ ನಾವೀಗ ನೆಮ್ಮದಿಯಿಂದ ಜೀವಿಸುತ್ತಿದ್ದೇವೆ ಎಂದು ಇಲ್ಲಿನ. ಭಕ್ತರೆ ಹರ್ಷ ವ್ಯಕ್ತಪಡಿಸುತ್ತಾರೆ.

*ಕಷ್ಟ ಕಾರ್ಪಣ್ಯ ನೀವಾರಣೆಗೆ ಭಕ್ತರಿಂದಲೆ ನೇರ ದೈವ ಪ್ರಶ್ನೆ.*

*ದೇವಿಯಿಂದಲೆ ಭಕ್ತರಿಗೆ ನೇರ ಉತ್ತರ.*

ಈ ಕ್ಷೇತ್ರದ ಮತ್ತೊಂದು ವಿಶೇಷತೆಯೆಂದರೆ ದೈವ ಪ್ರಶ್ನೆ ಅಮ್ಮನವರ ಉತ್ಸವ ಮೂರ್ತಿಗೆ ಸಕಲ ಪೂಜಾ ಕೈಂಕರ್ಯಗಳು ನೇರವೇರಿಸಿ ದೇಗುಲದ ಆವರಣಕ್ಕೆ ತಂದು ಭಕ್ತರೆ ತಮ್ಮ ಹೆಗಲ ಹೊತ್ತುಕೊಂಡು ಮೆರವಣಿಗೆ ಮಾಡುತ್ತಾರೆ ಈ ವೇಳೆ ಹಲವು ಭಕ್ತರು ತಮ್ಮ ತಮ್ಮ ಸಮಸ್ಯೆಗಳ ಕುರಿತು ದೇವಿಗೆ ಪ್ರಶ್ನಿಸಿ ಪರಿಹಾರ ಕೇಳುವುದಿದೆ ಸಮಸ್ಯೆ ನಿವಾರಣೆ ಯಾಗುವುದಾದರೆ ಉತ್ಸವ ಮೂರ್ತಿ ಬಲಕ್ಕೆ ತಿರುಗುವುದು ಇಲ್ಲವಾದರೆ ಎಡಕ್ಕೆ ತಿರುಗಿ ನೇರ ಉತ್ತರ ಕೊಡುವುದು ಸಹ ಇಲ್ಲಿನ ಒಂದು ಪವಾಡವೆಂದರೆ ತಪ್ಪಾಗಲಾರದು..

ಒಟ್ಟಾರೆಯಾಗಿ ನಿಮ್ಮ ಸಮಸ್ಯೆ ನಿವಾರಣೆಗಾಗಿ ಅಲೆದು ಅಲೆದು ಪರಿಹಾರ ಕಾಣದೆ ಸೊರಗಿದ್ದರೆ ಶ್ರೀ ಕ್ಷೇತ್ರ ವಿಜಯಕಾಳಿ ಮಠಕ್ಕೆ ಭೇಟಿ ನೀಡಿ ದೇವಿಯ ಕೃಪೆಗೆ ಪಾತ್ರರಾಗಿ.

*ವಿಳಾಸ*

*ಶ್ರೀ ವಿಜಯಕಾಳಿ ಮಹಾ ಸಂಸ್ಥಾನ ಮಠ*
ಕೆ. ಬೆಟ್ಟಹಳ್ಳಿ, ಹುಲಿಕೆರೆ ಕೊಪ್ಪಲು ಕಸಬಾ ಹೋಬಳಿ ಪಾಂಡವಪುರ,

ವಿಜಯ ಕಾಳಿ ಪವಾಡ ಬಸಪ್ಪನವರ ದೇವಸ್ಥಾನ :
ಸಂಪರ್ಕಿಸಬೇಕಾದ ಪೋನ್ ನಂಬರ್ 9632333433/9731652666

Leave a Reply

Your email address will not be published. Required fields are marked *

You cannot copy content of this page