ಜೆ ಎಸ್ ಎಸ್ ಮೈಸೂರು ಅರ್ಬನ್ ಹಾತ್ ನಲ್ಲಿ “ಸಿಲ್ಕ್ ಫ್ಯಾಬ್ ” ಮೇಳ

ಲೋಹಿತ್ ಹನುಮಂತಪ್ಪ.
ಮೊತ್ತ ಮೊದಲ ಬಾರಿಗೆ ಸಾಂಸ್ಕೃತಿಕ ನಗರಿ ಮೈಸೂರಿನ ನಾಗರಿಕರಿಗೊಂದು ಸುವರ್ಣ ಅವಕಾಶ ದಿನಾಂಕ 05-01-2025 ರಿಂದ 18-01-2025 ರವರೆಗೆ ಜವಳಿ ಅಭಿವೃದ್ಧಿ ಆಯುಕ್ತರು ಕೈಮಗ ಜವಳಿ ಮಂತ್ರಾಲಯ, ನವದೆಹಲಿ ಇವರ ಸಹಯೋಗದೊಂದಿಗೆ, ರಾಷ್ಟ್ರೀಯ ಕೈಮಗ್ರ ಅಭಿವೃದ್ಧಿ ನಿಗಮ ಮತ್ತು ಕೈಮಗ್ಗ ವಸ್ತು ಗಳ ಪ್ರದರ್ಶನ ಮತ್ತು ಮಾರಾಟ ಮೇಳ -* ಸಿಲ್ಕ್ ಫ್ಯಾಬ್ ” ಮೇಳವನ್ನು ಜಿ ಎಸ್ ಎಸ್ ಮೈಸೂರು ಅರ್ಬನ್ ಹಾತ್ ನಲ್ಲಿ ಏರ್ಪಡಿಸಲಾಗಿದೆ ಎಂದು ಸೋಮಶೇಖರ್ ಅವರು ಮಾಹಿತಿ ನೀಡಿದರು

ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು
ಕೈ ಮಗ್ಗ ನೇಕಾರರು ನೇಕಾರರು/ನೇಕಾರ ಸಹಕಾರ ಸಂಘಗಳು ತಯಾರು ಮಾಡುತ್ತಿರುವ ಕೈಮಗ ಉತ್ಪನ್ನಗಳಿಗೆ ಹೆಚ್ಚಿನ ಮಾರುಕಟ್ಟೆಯನ್ನು ಒದಗಿಸುವ ದೃಷ್ಟಿಯಿಂದ ಮತ್ತು ಕೈಮಗ್ಗ ಉತ್ಪನ್ನಗಳು ನಶಿಸಿ ಹೋಗದಂತೆ ಕಾಪಾಡಿಕೊಂಡು ಹೋಗಲು ಈ ಮೇಳವನ್ನು ಆಯೋಜನೆ ಮಾಡಿರುವುದು ಮೂಲ ಉದ್ದೇಶವಾಗಿದೆ.
ಈ ವೃತ್ತಿಯನ್ನು ಅವಲಂಬಿಸಿ ಜೀವನ ನಿರ್ವಹಣೆ ಮಾಡುತ್ತಿರುವ ನೇಕಾರರ ಕುಟುಂಬಗಳಿಗೆ ಒಂದೇ ಸೂರಿನಡಿಯಲ್ಲಿ ತಾವು ತಯಾರು ಮಾಡಿದ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶವನ್ನು ಕಲ್ಪಿಸಿಕೊಡಲಾಗುತ್ತಿದೆ.

“ಸಿಲ್ಕ್ ಪ್ಯಾಬ್” ಮೇಳದಲ್ಲಿ ದೇಶದ ಸುಮಾರು 60 ಕ್ಕೂ ಹೆಚ್ಚು ಕೈಮಗ್ಗ ನೇಕಾರರು ಮತ್ತು ಕುಶಲಕರ್ಮಿಗಳು ಉತ್ಪಾದಿಸಿರುವ ಉತ್ಪನ್ನಗಳು ಪ್ರದರ್ಶನ ಮತ್ತು ಮಾರಾಟ ಗೊಳ್ಳುತ್ತಿದೆ. ನಮ್ಮ ದೇಶದ ಸುಮಾರು 17 ಕ್ಕೂ ಹೆಚ್ಚು ರಾಜ್ಯಗಳ ರೇಷ್ಮೆ ಸೀರೆಗಳು ಮತ್ತು ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟವನ್ನು ಏರ್ಪಡಿಸಲಾಗಿದೆ ಎಂದರು

*ಮೇಳದಲ್ಲಿ ಪ್ರದರ್ಶನ ಗೊಳ್ಳುತ್ತಿರುವ ಉತ್ಪನ್ನಗಳು*

ನಮ್ಮ ರಾಜ್ಯದ ರೇಷ್ಮೆ ಸೀರೆ ಕಾಟನ್ ಸೀರೆಗಳು, ನೆಲ ಹೊದಿಕೆಗಳು ಬೆಡ್ ಶೀಟ್ ಗಳು, ಪರಿಶುದ್ಧ ಕಾಂಜಿವರಂ ಸೀರೆಗಳು, ಬಿಹಾರ್ ಮತ್ತು ಜಾರ್ಖಂಡ್ ರಾಜ್ಯದ ತಸ್ಸರ್ ಸೀರೆಗಳು ಪಶ್ಚಿಮ ಬಂಗಾಳದ ಕಾಂತಾ ಸೀರೆ ಬಲಚುರಿ ಸೀರೆ, ಭುಟಿಕ್ ಸೀರೆ ಕಾಟನ್ ಸೀರೆಗಳು ಉತ್ತರ ಪ್ರದೇಶ ರಾಜ್ಯದ ಬನಾರಸಿ ಸಿಲ್ಕ್ ಸೀರೆಗಳು ಚಿಕನ್ ಎಂಬ್ರಾಡರಿ ಸೀರೆಗಳು ಮಧ್ಯ ಪ್ರದೇಶದ ಚಂದೇರಿ ಮಹೇಶ್ವರಿ ಸಿಲ್ಕ್ ಸೀರೆಗಳು ಒರಿಸ್ಸಾ ರಾಜ್ಯದ ಸಂಬಲ್ಪುರಿ ಸೀರೆ ಇಕ್ಕತ್ ಸೀರೆಗಳು ಬೋಂಕಾಯಿ ಸೀರೆ ಕಾಶ್ಮೀರದ ಪದ್ಮನಾ ಶಾಲ್ ಗಳು, ಆಂಧ್ರ ಪ್ರದೇಶ ರಾಜ್ಯದ ಗೊದ್ದಲ್, ಕಲಮ್ಮಾರಿ ಸೀರೆಗಳು, ಪೋಚಂಪಲ್ಲಿ ಸೀರೆಗಳು, ಛತ್ತೀಸ್ಕಡ ರಾಜ್ಯದ ಸೀರೆಗಳು, ಹರಿಯಾಣದ ಫರ್ನಿಸಿಂಗ್ ಉತ್ಪನ್ನಗಳು, ಮಣಿಪುರ ರಾಜ್ಯದ ಸ್ಟೋಲ್ ಮತ್ತು ಬೆಡ್ ಶೀಟ್, ಮಹಾರಾಷ್ಟ್ರ ಮತ್ತು ರಾಜಸ್ಥಾನ್ ರಾಜ್ಯದ ಸೀರೆಗಳು ಮತ್ತು ಡ್ರೆಸ್ ಮೆಟೀರಿಯಲ್ ಗಳು, ಅಸ್ಸಾಂ ರಾಜ್ಯದ ರೇಷ್ಮೆ ಸೀರೆಗಳು ಮತ್ತು ಡ್ರೆಸ್ ಮೆಟೀರಿಯಲ್ ಗಳು ಹಾಗೂ ಕರಕುಶಲಕರ್ಮಿಗಳು ತಯಾರು ಮಾಡಿರುವ ಕರಕುಶಲ ವಸ್ತುಗಳು ಒಂದೇ ಸೂರಿನಡಿ ಮೈಸೂರಿನ ಜನತೆಗೆ ದೊರೆಯುತ್ತವೆ.

ಜೆ ಎಸ್ ಎಸ್ ಮೈಸೂರು ಅರ್ಬನ್ ಹಾತ್, ಹೆಬ್ಬಾಳು ಕೈಗಾರಿಕಾ ವಲಯ, ವರ್ತುಲ ರಸ್ತೆ ಮೈಸೂರು ಇಲ್ಲಿ ನಡೆಯಲಿರುವ ಮೇಳದ ಉದ್ಘಾಟನೆಯು ದಿನಾಂಕ 06-01-2025 – ಸೋಮವಾರದಂದು ಸಂಜೆ 4 .00 ನೆರವೇರಲಿದೆ.

ಮೈಸೂರಿನ ಹಾಗೂ ಸುತ್ತಮುತ್ತಲಿನ ಗ್ರಾಮಾಂತರ ಪ್ರದೇಶದ ಜನತೆ ಸಿಲ್ಕ್ ಪ್ಯಾಬ್ ಮೇಳಕ್ಕೆ ಭೇಟಿ ನೀಡಿ ರೇಷ್ಮೆ ಸೀರೆಗಳು, ಕೈಮಗ್ಗ ಉತ್ಪನ್ನಗಳನ್ನು ಮತ್ತು ಕರಕುಶಲ ವಸ್ತುಗಳನ್ನು ಖರೀದಿಸಿ ಕೈಮಗ್ಗ ಮತ್ತು ಕರಕುಶಲ ಉದ್ದಿಮೆಯನ್ನು ಉತ್ತೇಜಿಸಲು ಸಾರ್ವಜನಿಕರಲ್ಲಿ ವಿನಂತಿಸಿದೆ.

Leave a Reply

Your email address will not be published. Required fields are marked *

You cannot copy content of this page