ಮುಂಬೈ: ಎಂ.ಎಸ್.ಧೋನಿ ಶುಕ್ರವಾರ ಪಂಜಾಬ್ ಕಿಂಗ್ಸ್ ವಿರುದ್ಧ ಕಣಕ್ಕಿಳಿದ ಎಂ.ಎಸ್.ಧೋನಿ, ಚೆನ್ನೈ ಸೂಪರ್ ಕಿಂಗ್ಸ್ ಪರ 200ನೇ ಪಂದ್ಯವನ್ನಾಡಿದರು. ಸಿಎಸ್ಕೆ ಪರ 200 ಪಂದ್ಯಗಳನ್ನಾಡಿ ಮೊದಲ ಆಟಗಾರ ಎನ್ನುವ ಹಿರಿಮೆಗೆ ಪಾತ್ರರಾದರು.
ಐಪಿಎಲ್ನಲ್ಲಿ ಚೆನ್ನೈ ಪರ 174 ಪಂದ್ಯಗಳನ್ನಾಡಿರುವ ಧೋನಿ, ಚಾಂಪಿಯನ್ಸ್ ಲೀಗ್ನಲ್ಲಿ 24 ಪಂದ್ಯಗಳನ್ನು ಆಡಿದ್ದಾರೆ. 2008ರಿಂದ ಚೆನ್ನೈ ತಂಡದಲ್ಲಿ ಆಡಿದ್ದ ಧೋನಿ, 2016, 2017ರಲ್ಲಿ ಚೆನ್ನೈ 2 ವರ್ಷ ನಿಷೇಧ ಅನುಭವಿಸಿದ್ದಾಗ ಪುಣೆ ಸೂಪರ್ಜೈಂಟ್ಸ್ ಪರ ಆಡಿದ್ದರು. ಒಂದು ಫ್ರಾಂಚೈಸಿ ಪರ ಅತಿಹೆಚ್ಚು ಪಂದ್ಯಗಳನ್ನಾಡಿದ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ಆರ್ಸಿಬಿ ಪರ ವಿರಾಟ್ ಕೊಹ್ಲಿ ಕೊಹ್ಲಿ 209 ಪಂದ್ಯಗಳನ್ನು ಆಡಿದ್ದಾರೆ.