ಮೈಸೂರು: ಮೈಸೂರು ನಗರ ಶ್ವಾನ ದಳದಲ್ಲಿ ಮಾದಕ ದ್ರವ್ಯ ಪತ್ತೆ ಕರ್ತವ್ಯ ನಿರ್ವಹಿಸುತ್ತಿದ್ದ ಹೀರೋ ಶ್ವಾನ ನಿಧನ ಹೊಂದಿದೆ.
ಮೈಸೂರುನಗರ ಪೊಲೀಸ್ ಘಟಕದ ಶ್ವಾನದಳದಲ್ಲಿ ಮಾದಕ ದ್ರವ್ಯ ಪತ್ತೆ ಕರ್ತವ್ಯ ನಿರ್ವಹಿಸುತ್ತಿದ್ದ “ಹೀರೋ” ಎಂಬ ಹೆಸರಿನ ಲ್ಯಾಬ್ರಡಾರ್ ಶ್ವಾನವು ದಿನಾಂಕ 04.04.2011 ರಿಂದ ಸೂಕ್ತ ತರಬೇತಿಯೊಂದಿಗೆ ಇಲಾಖೆಗೆ ಸೇರಿದ್ದು, ಈ ಶ್ವಾನವು ಹಲವು ಡಾಗ್ ಶೋ, ಮಾಕ್ ಡ್ರಿಲ್ (ಅಣುಕು ಕಾರ್ಯಚರಣೆ)ಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವುದರೊಂದಿಗೆ ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಿರುತ್ತದೆ.
ಸುನಿಲ್ ಕುಮಾರ್ ಬಿ ಎಸ್, ಎ.ಹೆಚ್.ಸಿ-06 ರವರು ಇದರ ತರಬೇತುದಾರರಾಗಿದ್ದರು. ಈ ಶ್ವಾನವು ಇಲಾಖೆಯಲ್ಲಿ ಸುಮಾರು 10 ವರ್ಷ 12 ದಿನಗಳು ಯಶಸ್ವಿಯಾಗಿ ಸೇವೆ ಸಲ್ಲಿಸಿ ವಯೋ ಸಹಜ ಖಾಯಿಲೆಯಿಂದ ಈ ದಿನ ದಿನಾಂಕ 16.04.2021 ರಂದು ಮರಣ ಹೊಂದಿದ್ದು, ಡಿಸಿಪಿ ಸಿಎಆರ್, ಕೇಂದ್ರಸ್ಥಾನ ಅವರಾದ ಶಿವರಾಜುರವರ ನೇತೃತ್ವದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.
ಈ ಸಮಯದಲ್ಲಿ ಶ್ವಾನದಳದ ಉಸ್ತುವಾರಿ ಅಧಿಕಾರಿಗಳಾದ ಆರ್‍ಪಿಐ ಮೂರ್ತಿ ಕೆ.ಎಂ, ಸೋಮಣ್ಣ, ಆರ್‍ಎಸ್‍ಐ ಸುರೇಶ್ ಹಾಗೂ ಶ್ವಾನ ದಳದ ಇತರೆ ಅಧಿಕಾರಿ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು. “ಹೀರೋ” ಶ್ವಾನದ ಸಾವಿಗೆ ಶ್ವಾನದಳದ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಯವರುಗಳು ಕಂಬನಿ ಮಿಡಿದಿದ್ದಾರೆ.