ಯಾಮಾರಿದ್ರೆ ನಿಮಗೆ ಚೆಟ್ಟ ಗ್ಯಾರಂಟಿ ಹುಷಾರ್
ಶತಾಯ ಗತಾಯ ಡೆಡ್ಲಿ ಕೊರೊನಾ ಕಟ್ಟಿ ಹಾಕಲು ಸರ್ಕಾರ ಮತ್ತೊಮ್ಮೆ ಮಹತ್ವದ ತೀರ್ಮಾನ ಮಾಡಿದೆ.
ಇಂದಿನಿಂದ 14 ದಿನ ಖಡಕ್ ರೂಲ್ಸ್ ಜಾರಿ ಮಾಡಿದೆ
ಹೌದು ೨೭ ಏಪ್ರಿಲ್ ನಿಂದ ಮೇ. 10 ರ ತನಕ ಸರ್ಕಾರ ಲಾಕ್ ಡೌನ್ ಜಾರಿ ಮಾಡಿದೆ. ಈ ಮೂಲಕ ಸರ್ಕಾರ ಹೊಸ ಮಾರ್ಗಸೂಚಿ ಜಾರಿಗೊಳಿಸಲಾಗಿದೆ.
ಇನ್ನೂ 14 ದಿನ ಬೆಳಿಗ್ಗೆ 6 ರಿಂದ 10 ಗಂಟೆ ತನಕ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಿದೆ.
ಪ್ರತಿದಿನ ಹಾಲು. ತರಕಾರಿ, ಅಗತ್ಯ ವಸ್ತು, ಖರೀದಿಗೆ ಸಮಯ ನಿಗದಿ ಮಾಡಿದೆ.
ಏನಿರುವುದಿಲ್ಲ ಎನ್ನುವುದಾದರೆ ಜಿಮ್, ಸಾರಿಗೆ ಬಸ್ ಗಳು, ವಾಣಿಜ್ಯ ಚಟುವಟಿಕೆ, ಶಾಲಾ- ಕಾಲೇಜು, ಧಾರ್ಮಿಕ ಕೇಂದ್ರ ಇರುವುದಿಲ್ಲ..
ಇಂದು ರಾತ್ರಿ 9 ಗಂಟೆಯಿಂದ ಕರುನಾಡು ಲಾಕ್ ಡೌನ್ ಆಗಲಿದೆ..
ಕೊರೊನಾ ಆರ್ಭಟದ ಕಾರಣ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಇನ್ನು ಆರು ತಿಂಗಳ ವರೆಗೆ ಮುಂದೂಡಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಿಳಿಸಿದ್ದಾರೆ.
ನೆನ್ನೆ ನಡೆದ ಸಂಪುಟ ಸಭೆಯ ಬಳಿಕ ಮಾತನಾಡಿದ ಅವರು, 14 ದಿನ ರಾಜ್ಯದಲ್ಲಿ ಕೋವಿಡ್ ಕರ್ಫ್ಯೂ ಮುಂದುವರೆಯಲಿದೆ. ಬಿಗಿ ಬಂದೋಬಸ್ತ್ ಕೈಗೊಳ್ಳಲಾಗುವುದು.
15 ದಿನ ನಂತರವೂ ಕೊರೊನಾ ನಿಯಂತ್ರಣಕ್ಕೆ ಬರದಿದ್ದರೆ ಮತ್ತೆ ಮುಂದುವರಿಸಲಾಗುವುದು,
ಬೆಳಗ್ಗೆ 6 ರಿಂದ 10 ಗಂಟೆ ವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶ.
ನಂತರ ಎಲ್ಲ ವ್ಯಾಪಾರಸ್ಥರು ಸ್ವತಃ ತಾವೇ ಬಾಗಿಲು ಹಾಕಬೇಕು.
ಉತ್ಪಾದನ ವಲಯ, ಕೃಷಿ, ಕಟ್ಟಡ ನಿರ್ಮಾಣ ವಲಯಕ್ಕೆ ಯಾವುದೇ ತೊಂದರೆ ಇಲ್ಲ.
ಪ್ರತಿ ತಾಲ್ಲೂಕು ತಹಶೀಲ್ದಾರ್ ಬಿಗಿ ಬಂದೋಬಸ್ತ್ ನೋಡಲ್ ಅಧಿಕಾರಿಯಾಗಿ ನಿರ್ವಹಿಸಲಿದ್ದಾರೆ ,
ಕೃಷಿ ಮತ್ತು ಕಟ್ಟಡ ನಿರ್ಮಾಣ, ಉತ್ಪಾದನ ವಲಯ ಹೊರತುಪಡಿಸಿ ಉಳಿದವರಿಗೆ ಸಂಚಾರಕ್ಕೆ ನಿರ್ಬಂಧ ಹೇರಲು ತೀರ್ಮಾನಿಸಲಾಗಿದೆ.
ಸಚಿವ ಸಂಪುಟ ಸದಸ್ಯರು, ತಜ್ಞರು ಜೊತೆ ಚರ್ಚಿಸಿ ನಿರ್ಧಾರಕ್ಕೆ ಬಿಗಿ ಕ್ರಮಕ್ಕೆ ತೀರ್ಮಾನ ಕೈಗೊಳ್ಳಲಾಗಿದೆ.
ಪ್ರಯಾಣಿಕರ ಸಂಚಾರ ವಾಹನ ಸಂಪೂರ್ಣವಾಗಿ ಬಂದ್ ಆಗಲಿದ್ದು, ಹೊರ ರಾಜ್ಯಗಳಿಂದ ಬರುವ ಮತ್ತು ರಾಜ್ಯದಿಂದ ಹೊರ ರಾಜ್ಯಕ್ಕೆ ಅಗತ್ಯ ವಸ್ತು ಸಾಗಣಿಕೆಗೆ ಯಾವುದೇ ನಿರ್ಭಂದ ವಿಧಿಸಿಲ್ಲ.
ಕೆಎಸ್ ಆರ್ ಟಿಸಿ, ಬಿಎಂಟಿಸಿ ಮೆಟ್ರೋ ಸಂಪೂರ್ಣ ಬಂದ್ ಆಗಲಿದೆ. ಹೋಟೆಲ್ ಬಂದ್ ಆಗಲಿದ್ದು, ಪಾರ್ಸಲ್ ತರಿಸಿಕೊಳ್ಳಲು ಅವಕಾಶ ಕಲ್ಪಿಸಿದೆ. ಇನ್ನು ಮದ್ಯ ಪ್ರಿಯರಿಗೆ ಪಾರ್ಸಲ್ ವ್ಯವಸ್ಥೆಗೆ ಅವಕಾಶ ಕಲ್ಪಿಸಲಾಗಿದೆ ಎಂಬ ಮಾಹಿತಿ ನೀಡಿದ್ದಾರೆ...
ಖಡಕ್ ಕರ್ಫ್ಯೂ ಸಂಧರ್ಭದಲ್ಲಿ ಜನ ಎಚ್ಚೆತುಕೊಂಡರೆ ಒಳ್ಳೆಯದು ಯಾಮಾರಿದ್ರೆ ಚೆಟ್ಟ ಗ್ಯಾರಂಟಿ….!!
ಕೊರೊನಾ ಎರಡನೇ ಆಲೆಗೆ ಸಾಕಷ್ಟು ಸಂಖ್ಯೆಯಲ್ಲಿ ಸಾವು ನೋವುಗಳಾಗ್ತಿವೆ.
ರಾಜಧಾನಿ ಬೆಂಗಳೂರನ್ನ ಹೋಲಿಸಿದ್ರೆ ಸಾಂಸ್ಕೃತಿಕ ನಗರಿ ಮೈಸೂರು ಕೊರೊನಾ ಹಾಟ್ ಸ್ಪಾಟ್ ಆಗಿ ಬದಲಾಗಿದೆ.
ಇದರ ನಡುವೆ ಮೈಸೂರಿನ ನಂಜುಮಳಿಗೆ ಯಲ್ಲಿ ಕೊರೊನಾದಿಂದ ಮೃತಪಟ್ಟವ್ರಿಗೆ ರೆಡಿಮೆಡ್ ಬಿದಿರಿನ ಚೆಟ್ಟಗಳು ರೆಡಿಯಾಗ್ತಿವೆ.
ಹೌದು ಪ್ರತಿದಿನ ದಿನಕ್ಕೆ ಎರಡು ಮೂರು ಚೆಟ್ಟ ಗಳನ್ನು ರೆಡಿಮಾಡುತ್ತಿದ್ದ ಈ ಬಿದಿರು ಕೆಲಸಗಾರರು ಕೋವಿಡ್ ಹಾವಳಿಯಲ್ಲಿ ಪ್ರತಿ ದಿನ 100 ಕ್ಕೂ ಹೆಚ್ಚು ಚೆಟ್ಟಗಳನ್ನು ತಯಾರು ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ
ದಿನನಿತ್ಯ ನಗರಪಾಲಿಕೆ ೧೦೦ ರಿಂದ ೧೫೦ ಬಿದಿರಿನ ಚೆಟ್ಟಗಳನ್ನ ಕಟ್ಟಲು ಆರ್ಡರ್ ಕೊಡ್ತಿದೆ.
ದಿನ ನಿತ್ಯ ಏಣಿ, ಬುಟ್ಟಿಗಳನ್ನ ಎಣೆದು ಜೀವನ ಮಾಡುತ್ತಿದ್ದ ನಾವು ಇವತ್ತು ಹೀಗೆ ಚೆಟ್ಟಗಳನ್ನ ಕಟ್ಟಬೇಕಲ್ಲ ಅಂತಾ ನೋವಿನಲ್ಲಿಯೇ ಮಾತನಾಡ್ತಾರೆ ಈ ಕಾಯಕವನ್ನೆ ನಂಬಿ ಕೆಲಸಮಾಡುವವರು..
ಇನ್ನಾದರೂ ಜನರು ಸರ್ಕಾರ ಆದೇಶವನ್ನು ಚಾಚು ತಪ್ಪದೆ ಪಾಲಿಸಿ ತಮ್ಮ ತಮ್ಮ ಜೀವಗಳನ್ನು ಉಳಿಸಿಕೊಳ್ಳಲು ಮನೆಯಲ್ಲಿಯೇ ಸುರಕ್ಷತೆಯಿಂದ ಇರುವುದು ಒಳ್ಳೆಯದು ಇಲ್ಲ ಅಂದ್ರೆ ಚೆಟ್ಟ ಗ್ಯಾರಂಟಿ ಹುಷಾರ್…
ವರದಿ : ಲೋಹಿತ್ ಹನುಮಂತಪ್ಪ ಮೈಸೂರು