ಮೈಸೂರು: ಇಂದು ವಿಶ್ವ ಕಾರ್ಮಿಕರ ದಿನಾಚರಣೆ ಹಿನ್ನೆಲೆಯಲ್ಲಿ ಸುಜೀವ್ ಫೌಂಡೇಶನ್ ವತಿಯಿಂದ ಪೌರ ಕಾರ್ಮಿಕರಿಗೆ ಸ್ಯಾನಿಟೈಸರ್ ಮಾಸ್ಕ್ ವಿತರಣೆ ಮಾಡಲಾಯಿತು.
ನಗರದ ರಾಜೀವನಗರ ಬಡಾವಣೆಯ ಅಲ್ಬದರ್ ವೃತ್ತದಲ್ಲಿ ವಾರ್ಡ್ ನಂಬರ್ 10ರ ಪೌರಕಾರ್ಮಿಕರಿಗೆ ಸುಜೀವ್ ಫೌಂಡೇಶನ್ ಅಧ್ಯಕ್ಷ ರಾಜಾರಾಂ ಅವರು ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಿಸುವ ಮೂಲಕ ಗೌರವ ಸಮರ್ಪಿಸಿದರು.
ನಂತರ ಮಾತನಾಡಿದ ಅವರು ಕೊವಿಡ್ ಸಂದರ್ಭದಲ್ಲೂ ಪ್ರತಿನಿತ್ಯ ನಗರವನ್ನ ಸ್ಪಚ್ಚ ಮಾಡುವ ಕೆಲಸ ಮಾಡುತ್ತಿದ್ದಾರೆ. ಅವರಿಗೂ ಆರೋಗ್ಯದ ರಕ್ಷಣೆ ಅವಶ್ಯಕತೆ ಇದೆ. ವಿಶ್ವ ಕಾರ್ಮಿಕ ದಿನದಂದು ಸಾಂಕೇತಿಕವಾಗಿ ಮಾಸ್ಕ್ ಮಾತ್ತು ಸ್ಯಾನಿಟೈಸರ್ ನೀಡುತ್ತಿದ್ದೇವೆ, ಪೌರ ಕಾರ್ಮಿಕರಿಗಾಗಿ ಕೊವಿಡ್ ನ ಜೀವ ವಿಮೆಯನ್ನು ಎಲ್ಲರಿಗೂ ಉಡುಗೊರೆಯಾಗಿ ನನ್ನ ವೈಯುಕ್ತಿವಾಗಿ ನೀಡುವ ಚಿಂತನೆ ಕೂಡ ಇದೆ ಎಂದು ತಿಳಿಸಿದರು.
ಇದೆ ಸಂಧರ್ಭದಲ್ಲಿ ರೋಹಿತ್, ಲೋಕೇಶ್ ಸೇರಿದಂತೆ , ಇತರೆ ಸದಸ್ಯರು ಉಪಸ್ಥಿತರಿದ್ದರು.
ವರದಿ: ಲೋಹಿತ್ ಹನುಮಂತಪ್ಪ ಮೈಸೂರು