ಮೈಸೂರು ೦೧ ಮೇ ೨೧: ಲಾಕ್ ಡೌನ್ ವೇಳೆ ಅನಗತ್ಯವಾಗಿ ಓಡಾಡಿದ್ದು ರುಜುವಾತಾದರೆ ಕ್ರಿಮಿನಲ್ ಮೊಕದಮ್ಮೆ ದಾಖಲಿಸಲಾಗುವುದು ಎಂದು
ಮೈಸೂರು ನಗರ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಡಾ ಎ ಎನ್ ಪ್ರಕಾಶ್ ಗೌಡ ಅವರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ..
ಜಪ್ತಿಯಾದ ವಾಹನಗಳನ್ನು ನ್ಯಾಯಾಲಯದ ಮೂಲಕವೇ ವಾಪಸ್ಸು ಪಡೆಯಬೇಕು.
ಜಪ್ತಿ ಮಾಡಿದ ವಾಹನಗಳನ್ನು ಲಾಕ್ಡೌನ್ ಅವಧಿ ಮುಗಿಯುವವರೆಗೂ ವಾಪಸ್ಸು ಕೊಡುವುದಿಲ್ಲ.
ಈ ಬಗ್ಗೆ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು..