*ಕೊರೊನಾ ಎರಡನೇ ಅಲೆಯಲ್ಲಿ ತುಪ್ಪದ ಬೆಡಗಿಯ ಸಾಮಾಜಿಕ ಕಳಕಳಿಗೆ ಕರಗಿದ ಜನತೆ*
ಹೌದು ಕೋವಿಡ್ ಎರಡನೇ ಅಲೆಯಲ್ಲಿ
ನಿಜಕ್ಕೂ ನಲುಗಿ ಹೋಗಿರುವುದು ರಾಜಧಾನಿ ಬೆಂಗಳೂರು , ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೆ ಇದೆ ,
ಇತಂಹ ಸಂಧರ್ಭದಲ್ಲಿ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಸಂಕಷ್ಟದಲ್ಲಿರುವವರಿಗೆ ನೆರವಾಗಿದ್ದಾರೆ..
ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ನಿರಾಶ್ರಿತರು ನಿರ್ಗತಿಕರಿಗೆ ಆಹಾರ ಜೊತೆಗೆ ಮಾಸ್ಕ್ ವಿತರಿಸಿ ಸಾಮಾಜಿಕ ಕಳಕಳಿ ಮೆರೆದಿದ್ದಾರೆ,
ಮತ್ತು ಬೆಂಗಳೂರಿನ ಸರ್ವಜ್ಞ ನಗರದ ಕಲ್ಲಹಳ್ಳಿ ರುದ್ರ ಭೂಮಿಯಲ್ಲಿ ಕೆಲಸಗಾರರಿಗೆ,
ವಿದ್ಯುತ್ ಚಿತಾಗಾರ ಮತ್ತು ಗುಂಡಿ ತೋಡುವ ಸಿಬ್ಬಂದಿಗಳಿಗೆ ಒಂದು ತಿಂಗಳಿಗಾಗುವಷ್ಟು ದಿನಸಿ ನೀಡಿದ್ದಾರೆ.
ಒಟ್ಟಾರೆ ತುಪ್ಪದ ಬೆಡಗಿಯ ಸಾಮಾಜಿಕ ಕಳಕಳಿಗೆ ಜನರು ಫಿದಾ ಆಗಿದ್ದಾರೆ ..
ಈ ಬೆಡಗಿಯ ಸಾಮಾಜಿಕ ಕಾರ್ಯವನ್ನು ನೋಡಿಯಾದರೂ ಉಳ್ಳವರು ಬಡವರಿಗೆ , ನಿರ್ಗತಿಕರಿಗೆ ಸಹಾಯ ಹಸ್ತಚಾಚಲು ಮುಂದಾಗುವರ ಕಾದು ನೋಡಬೇಕು…