ಕನ್ನಡಿಗರ ಪಾಲಿನ 8 ನೇ ಆವೃತ್ತಿಯ ಜನಪ್ರಿಯ ಕಾರ್ಯಕ್ರಮ ಬಿಗ್ ಬಾಸ್ ತನ್ನ 71 ದಿನಗಳ ಜರ್ನಿಯನ್ನು ಕೊನೆಗೊಳಿಸಲಿದೆ…
ಶನಿವಾರ ಭಾನುವಾರ ಬಂತ್ತೆಂದರೆ ಕಿಚ್ಚ ಸುದೀಪ್ ರನ್ನು ನೋಡಲು ಅವರ ಅಭಿಮಾನಿಗಳು ಕಾಯುತ್ತ ಕುಳಿತ್ತಿರುತ್ತಿದ್ದರು..
ಇತ್ತೀಚಿಗೆ ವಾರಾಂತ್ಯದ ಶೋ ನಡೆಸಲು ಕಿಚ್ಚ ಸುದೀಪ್ ಕೂಡ ಅನಾರೋಗ್ಯದ ಕಾರಣದಿಂದ ಕಾರ್ಯಕ್ರಮ ನಡೆಸಿ ಕೊಡಲು ಬಂದಿರಲಿಲ್ಲ.
ಇದೀಗ ಬಿಗ್ ಬಾಸ್ ಅಧಿಕೃತವಾಗಿ ತನ್ನ 8 ನೇ ಆವೃತ್ತಿಯನ್ನು ರದ್ದುಗೊಳಿಸುತ್ತಿರುವ ಬಗ್ಗೆ ಸುದ್ದಿ ಹೊರ ಬಿದ್ದಿದೆ,
ಬಿಗ್ ಬಾಸ್ ಮನೆಯೊಳಗಡೆ ಇರುವ ಮಂದಿಗೆ ಸದ್ಯ ಕೋವಿಡ್ ವಿಷಯದಲ್ಲಿ ಹೊರಗೆ ನಡೆಯುತ್ತಿರುವ ಸಂಕಷ್ಟ, ಸಂಕಟಗಳು ತಿಳಿಯುತ್ತಿಲ್ಲ.
ಹೊರಗಿನ ಪರಿಸ್ಥಿತಿಯನ್ನು ನೋಡುತ್ತಿದ್ದರೆ ನಿಜಕ್ಕೂ ಮನಸ್ಸಿಗೆ ತುಂಬಾ ಬೇಜಾರ್ ಆಗುತ್ತದೆ. ಸ್ಪರ್ಧಿಗಳೀಗ ಐಸೋಲೇಷನ್ ನಲ್ಲಿ ಇರುವುದರಿಂದ ಸುರಕ್ಷಿತವಾಗಿದ್ದಾರೆ.
ಅವರನ್ನು ನಾಳೆ ಮನೆಯ ಹೊರಗೆ ಕರೆದು ಸುರಕ್ಷಿತವಾಗಿ ಅವರವರ ಮನೆಗೆ ಕಳುಹಿಸಿ ಕೊಡುತ್ತೇವೆ ಎಂದು ಕಾರ್ಯಕ್ರಮ ಪ್ರಸಾರವಾಗುತ್ತಿರುವ ವಾಹಿನಿಯ ಬ್ಯುಸಿ ನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಹೇಳಿದ್ದಾರೆ ಎನ್ನಲಾಗಿದೆ,
ಕೋವಿಡ್ ಕಾರಣದಿಂದ ಚಿತ್ರೀಕರಣವನ್ನು ಮಾಡುವಂತ್ತಿಲ್ಲ, ಮೇ 10 ರಿಂದ 24 ರವರೆಗೆ ಯಾವುದೇ ಶೂಟಿಂಗ್ ಮಾಡುತ್ತಿಲ್ಲ,
ಇದೇ ಹಿನ್ನೆಲೆಯಲ್ಲಿ ಬಿಗ್ ಬಾಸ್ ವಾರಂತ್ಯ ಕಾರ್ಯಕ್ರಮ ಕೂಡ ನಿಲ್ಲಲಿದ್ದು ಈ ಬಗ್ಗೆ ಕಲರ್ಸ್ ಕನ್ನಡ ಟ್ವೀಟ್ ಮಾಡಿದ್ದು, ಸದ್ಯ ಇರುವ ಸಂಕಷ್ಟದ ಸನ್ನಿವೇಶದಲ್ಲಿ ಕಿಚ್ಚ ಸುದೀಪ್ ಅವರ ಜೊತೆಯಲ್ಲಿ ನಡೆಯಬೇಕಿದ್ದ ವಾರಾಂತ್ಯದ ಪಂಚಾಯ್ತಿ ಚಿತ್ರೀಕರಣ ನಡೆಯುತ್ತಿಲ್ಲ, ಹೀಗಾಗಿ ಈ ವಾರವೂ ಬಿಗ್ ಬಾಸ್ ವಾರಾಂತ್ಯದ ಸಂಚಿಕೆಗಳಲ್ಲಿ ಕಿಚ್ಚ ಸುದೀಪ್ ಅವರ ಉಪಸ್ಥಿತಿ ಇರುವುದಿಲ್ಲ ..
ಒಟ್ಟಾರೆ ಕೊರೊನಾ ಹಾವಳಿಯಲ್ಲಿ ಬಿಗ್ ಬಾಸ್ ಕಥೆಯೂ ಮುಗಿದಿದೆ ಎನ್ನುವುದೇ ಬೇಸರದ ಸಂಗತಿ.