ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದ ‘ಶುಕವನ’ದಗಿಳಿಯೊಂದನ್ನು, ಚಿತ್ರನಟ ದರ್ಶನ್ ಕೊಡುಗೆಯಾಗಿ ಪಡೆದಿದ್ದಾರೆ…
ಆಶ್ರಮಕ್ಕೆ ಭೇಟಿ ನೀಡಿದ್ದ ದರ್ಶನ್, ಸ್ವಾಮೀಜಿಯ ದರ್ಶನ ಪಡೆದು, ಕೆಲ ಹೊತ್ತು ಮಾತುಕತೆ ನಡೆಸಿದರು. ನಂತರ ಶುಕವನವನ್ನೂ ವೀಕ್ಷಿಸಿದ್ದಾರೆ,
ಈ ಸಂದರ್ಭದಲ್ಲಿ ದರ್ಶನ್ ಗೆ ರೆಡ್ ಹೆಡೆಡ್ ಅಮೆಜಾನ್ ಗಿಳಿಯೊಂದನ್ನು ಶ್ರೀಗಳು ಕೊಡುಗೆಯಾಗಿ ನೀಡಿದ್ದಾರೆ.
ಮೊದಲೇ ಪ್ರಾಣಿ, ಪಕ್ಷಿ ಪ್ರಿಯ ನಟ ದರ್ಶನ್ ಶ್ರೀಗಳು ಆಶೀರ್ವದಿಸಿ ತಮ್ಮ ಕೈಗಳಿಂದ ಕೊಟ್ಟ ಗಿಳಿಯನ್ನು ಮನಸಾರೆ ಪ್ರಸಾದದಂತೆ ಸ್ವೀಕರಿಸಿದ್ದಾರೆ ,
ದರ್ಶನ್ ಜೊತೆ ಡಿಂಗ್ರಿ ನಾಗರಾಜ್ ಪುತ್ರ ರಾಜ ವರ್ಧನ್ ಕೂಡಾ ಸಾತ್ ನೀಡಿದ್ದಾರೆ.