ಮೈಸೂರು ನಗರ (ಜಿಲ್ಲಾ) ಪ್ರಚಾರ ಸಮಿತಿವತಿಯಿಂದ
ಡಿ.ಕೆ. ಶಿವಕುಮಾರ್ ಹುಟ್ಟುಹಬ್ಬ ಪ್ರಯುಕ್ತ ಅರ್ಥಪೂರ್ಣವಾಗಿ ಸಮಾಜಮುಖಿ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ರವರ 59 ನೇ ಹುಟ್ಟು ಹಬ್ಬದ ಪ್ರಯುಕ್ತ ದಿನಾಂಕ 15- 5 -2021ರ ಶನಿವಾರದಂದು
ಮೈಸೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ , ಮಾಜಿ ನಗರ ಪಾಲಿಕೆ ಸದಸ್ಯ ಡಾ. ಎಂಕೆ ಅಶೋಕ್ ಅವರ ನೇತೃತ್ವದಲ್ಲಿ ವಿವಿಧ ಸೇವಾ ಕಾರ್ಯ ಗಳನ್ನು ಆಯೋಜಿಸಲಾಗಿತ್ತು..
ನಗರದ ಕಾಡಾ ಕಚೇರಿಯ ಮುಂಭಾಗ ಸೇರಿದಂತೆ ನಾನಾ ಕಡೆ ಇರುವ ನಿರಾಶ್ರಿತರಿಗೆ ಮತ್ತು ನಂಜರಾಜ ಬಹದ್ದೂರ್ ಛತ್ರದ ನಿರಾಶ್ರಿತರ ಕೇಂದ್ರದಲ್ಲಿರುವ ನಿರಾಶ್ರಿತರಿಗೆ ಮತ್ತು ನಿರ್ಗತಿಕರಿಗೆ ಮದ್ಯಾನದ ಊಟದ ಜೊತೆಗೆ ಮೊಟ್ಟೆ , ಬಾಳೆಹಣ್ಣು, ಸಿಹಿ ವಿತರಿಸಲಾಯಿತು, ಇದೇ ಸಂದರ್ಭದಲ್ಲಿ ಕೊರೋನಾ ವಾರಿಯರ್ಸ್ ಗೆ ಗೌರವಿಸಿ ಸಿಹಿ ಹಂಚಲಾಯಿತು.
ಹಾಗೇಯೇ ಬಲ್ಲಾಳ್ ವೃತ್ತದಲ್ಲಿರುವ ಅಲೆಮಾರಿಗಳಿಗೆ ಚಪಾತಿ ಇಟ್ಟು ಅಡುಗೆ ಎಣ್ಣೆಯನ್ನು ಮತ್ತು ಮಾಸ್ಕ್ ಸಹ ನೀಡಲಾಯಿತು,
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರ ತಮ್ಮ ಹುಟ್ಟು ಹಬ್ಬವನ್ನು ಕೊರೊನಾ ಇರುವುದರಿಂದ ಅದರ ತಕ್ಕಂತೆ ಅವಶ್ಯಕತೆ ಇರುವವರಿಗೆ ಅಗತ್ಯ ವಸ್ತುಗಳನ್ನು ವಿತರಿಸುವ ಮೂಲಕ ಸರಳವಾಗಿ ಆಚರಿಸಲಾಯಿತು , ಇದೆ ಸಂಧರ್ಭದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೋಲಿಸ್ ಸಿಬ್ಬಂದಿಗಳಿಗೂ ಆಟೋ ಚಾಲಕರಿಗೆ, ಬೀದಿ ವ್ಯಾಪಾರಿಗಳಿಗೆ, ಪೌರಕಾರ್ಮಿಕರಿಗೆ, ಆಹಾರ, ಸಿಹಿ, ನೀರಿನ ಬಾಟಲ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಚಾರ ಸಭೆ ಅಧ್ಯಕ್ಷರಾದ ಡಾ .ಎಂ. ಕೆ. ಅಶೋಕ, ಡಿಸಿಸಿ ಪ್ರಧಾನ ಕಾರ್ಯದರ್ಶಿಲೋಕನಾಥ್ ಗೌಡ, ಸೇವಾದಳದ ಅಧ್ಯಕ್ಷರಾದ ಆರ್ ಗಿರೀಶ್ , ಯುವ ಕಾಂಗ್ರೆಸ್ ಮುಖಂಡರಾದ ನೇವಲ್ ಅಶೋಕ್, ಮನು ಸೇರಿದಂತೆ ಹಲವಾರು ಉಪಸ್ಥಿತರಿದ್ದರು..