ಒಂದೇ ಮುಹೂರ್ತದಲ್ಲಿ ಅಕ್ಕ – ತಂಗಿಯರನ್ನು ವರಿಸಿದ ಭೂಪ…. ಲಗ್ನ ಪತ್ರಿಕೆ ಮದುವೆ ಫೋಟೋ ವೈರಲ್.

ಅಕ್ಕ – ತಂಗಿಯರನ್ನು ಒಂದೇ ಮುಹೂರ್ತದಲ್ಲಿ ಒಬ್ಬ ಮದುವೆ ಆಗುವ ದೃಶ್ಯಗಳನ್ನ ನಾವು ಸಿನಿಮಾದಲ್ಲಿ ಸಿರೀಯಲ್ ಗಳಲ್ಲಿ ನೋಡಿದ್ದೇವೆ.

ಆದರೆ ಇಲ್ಲಿ ಎಲ್ಲವೂ ಶಾಸ್ತ್ರ ಬಧ್ದವಾಗಿ ಮದುವೆಯೊಂದು ನಡೆದಿದೆ.
ಈ ಮದುವೆ ನಡೆದಿರುವುದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ವೇಗಮಡುಗು ಗ್ರಾಮದಲ್ಲಿ . ಸುಪ್ರಿಯಾ ಹಾಗೂ ಲಲಿತ ಎಂಬ ಇಬ್ಬರು ಅಕ್ಕ ತಂಗಿಯರನ್ನು ಉಮಾಪತಿ ಎಂಬುವವರು ಒಂದೇ ಮುಹೂರ್ತದಲ್ಲಿ ಮದುವೆ ಯಾಗಿದ್ದಾರೆ .

ಅಕ್ಕ ಸುಪ್ರಿಯಾಗೆ ಮಾತು ಬರುವುದಿಲ್ಲ . ಅವರಿಗೆ ಮದುವೆಯಾಗದೆ ತಂಗಿ ಲಲಿತಾಗೆ ಮದುವೆಯಾಗೋದಿಲ್ಲ . ಅಕ್ಕನಿಗೆ ಎಲ್ಲಿ ಮದುವೆಯಾಗುವುದಿಲ್ಲವೋ ಎಂದು ಯೋಚಿಸಿದ ತಂಗಿ ಲಲಿತಾ ನನ್ನನ್ನು ಮದುಯಾಗಬೇಕೆಂದರೆ ತನ್ನ ಅಕ್ಕನನ್ನೂ ಮದುವೆ ಮಾಡಿಕೊಳ್ಳಬೇಕು ಎಂಬ ಷರತ್ತನ್ನು ವರ ಉಮಾಪತಿಗೆ ವಿಧಿಸಿದ್ದರು .
ಅದಕ್ಕೆ ಒಪ್ಪಿದ ಅವರು ಗ್ರಾಮದಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ಸಹೋದರಿಯರನ್ನು ಮದುವೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ .
ಸದ್ಯ , ಮದುವೆಯಾದ ಫೋಟೋ ಹಾಗೂ ಮದುವೆ ಆಮಂತ್ರಣ ಪತ್ರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ .

ಈ ಮದುವೆ ನೋಡಿದ ಬಗ್ಗೆ ಸಾಕಷ್ಟು ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ . ವಂಶ ಪಾರಂಪರ್ಯವಾಗಿ ಮುಂದುವರೆದ ಎರಡು ಮದುವೆ ಸುಪ್ರಿಯಾ ಹಾಗೂ ಲಲಿತಾ ಕುಟುಂಬದಲ್ಲಿ ಈ ರೀತಿ ಮದುವೆ ನಡೆದಿದ್ದು ಇದೇ ಮೊದಲಲ್ಲ . ಇವರ ತಂದೆ ಕೂಡಾ ಇದೆ ರೀತಿಯಲ್ಲಿ ಅಕ್ಕ ತಂಗಿಯರನ್ನು ಮದುವೆ ಮಾಡಿಕೊಂಡಿದ್ದರು . ಅಲ್ಲೂ ಒಬ್ಬರಿಗೆ ಮಾತು ಬರುತ್ತಿರಲಿಲ್ಲ ಅನ್ನೋದು ವಿಶೇಷ .

ರಾಣೆಮ್ಮ ಹಾಗೂ ಸುಬ್ಬಮ್ಮ ಎಂಬುವರನ್ನು ಇವರ ಸೋದರ ಸಂಬಂಧಿ ನಾಗರಾಜಪ್ಪ ಎಂಬುವರು ಮದುವೆಯಾಗಿದ್ದರು
ಈಗ ಅದೇ ರೀತಿಯಲ್ಲಿ ಮತ್ತೊಂದು ಮದುವೆ ಆಗಿದೆ.

Leave a Reply

Your email address will not be published. Required fields are marked *

You cannot copy content of this page