ರಿಯಲ್ ಸ್ಟಾರ್ ಉಪೇಂದ್ರ ನೂರುಕಾಲ ಚೆನ್ನಾಗಿರಲಿ ಎಂದು ಆಶೀರ್ವದಿಸಿ ಕಣ್ಣೀರಿಟ್ಟ ಮೈಸೂರು ಹಿರಿಯಕಲಾವಿದೆ

ವರದಿ : ಲೋಹಿತ್ ಹನುಮಂತಪ್ಪ ಮೈಸೂರು.

ಕೊರೊನಾ ಮಹಾಮಾರಿ ಇಂದ ನಿಜಕ್ಕೂ ‌ಸಮಸ್ಯೆ ಎದುರಿಸುತ್ತಿರುವುದು ದಿನಗೂಲಿ ನೌಕರರು,
ಹಾಗೇಯೇ ಸಿನಿ ಕಾರ್ಮಿಕರು ,

ಸಿನಿಮಾ ವನ್ನೇ ನಂಬಿ ಬದುಕುತ್ತಿರುವ ಅದೆಷ್ಟೋ ಕಾರ್ಮಿಕರು ಇಂದು ಅಕ್ಷರಶಃ ಪರದಾಡುತ್ತಿದ್ದಾರೆ..

ಲಾಕ್ ಡೌನ್ ಮುಗಿಯುವವರೆಗೂ ಅವರಿಗೆ ಈ ತೊಂದರೆ ತಪ್ಪಿದ್ದಲ್ಲ ..

ಇಂದು ಮೈಸೂರಿನ ಸಿನಿಮಾ ಜೂನಿಯರ್ ಕಲಾವಿದರಿಗೆ ಉಪೇಂದ್ರ ಮತ್ತು ದಾನಿಗಳು ಆಹಾರ ಕಿಟ್ ಜೊತೆಗೆ ತರಕಾರಿಗಳನ್ನು ವಿತರಿಸಲಾಯಿತು,

ನಗರದ ಗನ್ ಹೌಸ್ ಶಂಕರ ಮಠದ ಪಕ್ಕದ ಕಲ್ಯಾಣ ಮಂಟಪದಲ್ಲಿ ಜೂನಿಯರ್ ಕಲಾವಿದರ ಸಂಘದ ಮೈಸೂರು ಶಿವು ಅವರ ನೇತೃತ್ವದಲ್ಲಿ ಆಹಾರ ಕಿಟ್ ವಿತರಿಸಲಾಯಿತು,

ಇದೆ ಸಂಧರ್ಭದಲ್ಲಿ ಮಾತಾನಾಡಿದ ಎಲ್ಲಾ ಕಲಾವಿದರು ಈ ಕೊರೊನಾ ಸಂಧರ್ಭದಲ್ಲಿ ನಾವು ಜೀವನ ನಡೆಸುವುದೇ ಕಷ್ಟಕರವಾಗಿದೆ , ಇಂತಹ ಪರಿಸ್ಥಿತಿಯಲ್ಲಿ ಉಪೇಂದ್ರ ಅವರು ನಮ್ಮ ನೆರವಿಗೆ ಧಾವೀಸಿದ್ದಾರೆ, ಅವರು ನೂರಾರು ಕಾಲ ಚೆನ್ನಾಗಿರಲಿ ಎಂದು ಕಣ್ಣೀರಿಟ್ಟರು….

ಚಿತ್ರರಂಗದಲ್ಲಿ ಕೋಟಿ ಕೊಟಿ ಸಂಭಾವನೆ ಪಡೆಯುತ್ತಿರುವ ಇನ್ನಷ್ಟು ಕಲಾವಿದರು ಈ ಬಡ ಕಲಾವಿದರಿಗೆ ನೆರವಿನ ಹಸ್ತ ಚಾಚಿದರೆ ಅವರನ್ನು ಕಷ್ಟ ಕಾಲದಲ್ಲಿ ಕೈ ಹಿಡಿದಂತಾಗುತ್ತಾದೆ,..

ಇಂತಹ ಸಂಧರ್ಭದಲ್ಲಿ ತೀವ್ರ ಸಂಕಷ್ಟದಲ್ಲಿರುವವರಿಗೆ ಉಳ್ಳವರು ನೆರವಿನ ಹಸ್ತ ಚಾಚಬೇಕು ….

ಉಪೇಂದ್ರ ಅವರ ಈ ಕಾರ್ಯ ನಿಜಕ್ಕೂ ಶ್ಲಾಘನೀಯ , ಅವರು ನಿಜಕ್ಕೂ ರಿಯಲ್ ಸ್ಟಾರ್..

Leave a Reply

Your email address will not be published. Required fields are marked *

You cannot copy content of this page