ಲಾಕ್ ಡೌನ್ ವೇಳೆಯಲ್ಲಿ ಅನಗತ್ಯ ವಾಗಿ ರಸ್ತೆಗೆ ಇಳಿದ ಜನರಿಗೆ ಹೂವಿನ ಹಾರ ಹಾಕಿ ಸನ್ಮಾನ…..

ಹೌದು ಬಾಗಲಕೋಟ ಜಿಲ್ಲೆಯ ಜಮಖಂಡಿ ನಗರದಲ್ಲಿ ಅನಗತ್ಯ ಓಡಾಟಡ ಜನರಿಗೆ ಹೂ ಮಾಲೆ ಹಾಕಿ ಸನ್ಮಾನ ಮಾಡಲಾಯಿತು

ಕೊರೊನ ವಾರಿಯರ್ಸ್ ಗಳಾದ ಪೊಲೀಸರು ವೈದ್ಯರು ಪುರಸಭೆ ಪತ್ರಿಕರ್ತರಿಗೆ ಮುಂತಾದವರಿಗೆ ಅನಿವಾರ್ಯ ಕಾರಣದಿಂದ ಹೊರಗಡೆ ಬರಲೇಬೇಕು ಆದರೆ ಏನು ಕೆಲಸವಿಲ್ಲದೆ ಓಡಾಡುವವರ ಸಂಖ್ಯೆನೆ ಹೆಚ್ಚಾಗಿದೆ ..

ಮಹಾಮಾರಿ ಕೊರೊನ ರೋಗದ ಎರಡನೇ ಹಿನ್ನಲೆ ಸಂಪೂರ್ಣ ಲಾಕ ಡೌನ ಇದ್ದು 10 ಗಂಟೆವರೆಗೆ ಮಾತ್ರ ಅಗತ್ಯ ವಸ್ತುಗಳಿಗೆ ಅವಕಾಶ ಕೊಟ್ಟಿದ್ದು ಅದನ್ನು ಮೀರಿ ನೆಪ ಹೇಳಿ ಸುಮ್ಮನೆ ಕೆಲಸ ಕಾರ್ಯ ಇಲ್ಲದೆ ಬೀದಿಗಿಳಿಯುವ ಜನರಿಗೆ ಹೂವಿನ ಮಾಲೆ ಹಾಕಿ ಸನ್ಮಾನ ಮಾಡಿ ಅನಗತ್ಯವಾಗಿ ಓಡಾಡುವಂತೆ ಹೇಳಿದರು

ಜಮಖಂಡಿ ನಗರದ ಎ ಜಿ ದೇಸಾಯಿ ವೃತ್ತದಲ್ಲಿ ಲಾಕಡೌನ ನಿಯಮ ಉಲ್ಲಂಘಿಸಿದ ಜನರಿಗೆ ಗೆಳೆಯರ ಬಳಗ ಜಮಖಂಡಿ ಸದಸ್ಯರು ಹೂವಿನ ಮಾಲೆ ಹಾಕಿ ಸನ್ಮಾನಿಸಿದರು.

Leave a Reply

Your email address will not be published. Required fields are marked *

You cannot copy content of this page