ಮೈಸೂರಿನ ಕಂಡು ಬಂದಿರುವ ನಕಲಿ ತುಪ್ಪ ತಯಾರಿಕೆಯಲ್ಲಿ ಯಾರೇ ಬಾಗಿಯಾಗಿದ್ರೂ ಕ್ರಮ ಕೈಗೊಳ್ಳುತ್ತೇವೆ ಎಂದು ಮೈಮುಲ್ ಅಧ್ಯಕ್ಷ ಪ್ರಸನ್ನ ಪ್ರತಿಕ್ರಿಯೆ ನೀಡಿದ್ದಾರೆ.

ಮೈಸೂರಿನಲ್ಲಿ ನಕಲಿ ತುಪ್ಪ ತಯಾರಿಕಾ ಘಟಕ ಪತ್ತೆ ಪ್ರಕರಣದ ಕುರಿತು ಮಾಹಿತಿ ನೀಡಿದ ಮೈಮೂಲ್ ಅಧ್ಯಕ್ಷರು.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಕಲಿ ನಂದಿನಿ ತುಪ್ಪ ತಯಾರಿಕಾ ಘಟಕ ಪತ್ತೆಯಾದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಮೈಮುಲ್ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ .

ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮೈಮುಲ್ ಅಧ್ಯಕ್ಷ ಪ್ರಸನ್ನ , ” ಈ ಬಗ್ಗೆ ಮುರುಗೇಶ್ , ಅಶ್ವಿನಿ , ಸಂತೋಷ್ , ಕುಮಾರ್ ಎಂಬವರ ವಿರುದ್ಧ ನೇರವಾಗಿ ಎಸ್ಪಿಗೆ ದೂರು ನೀಡಿದ್ದು , ಈ ಸಂಬಂಧ ಎಫ್‌ಐಆರ್ ಕೂಡ ದಾಖಲಾಗಿದೆ ಎಂದು ಅಧ್ಯಕ್ಷರಾದ ಪ್ರಸನ್ನ ತಿಳಿಸಿದರು .

ನಾನು ಕೂಡಾ ಸ್ಥಳ ಪರಿಶೀಲನೆ ಮಾಡಿ ಬಂದಿದ್ದು , ತಯಾರಿಕೆಯಲ್ಲಿ ನಕಲಿ ತುಪ್ಪ ಯಾರೇ ಭಾಗಿಯಾದ್ದರೂ ಕ್ರಮ ಕೈಗೊಳ್ಳಲಾಗುತ್ತದೆ . ಮೈಮುಲ್ ಸಿಬ್ಬಂದಿ ಭಾಗಿಯಾಗಿದ್ದರೆ ಅವರ ವಿರುದ್ಧವೂ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು . ನಮ್ಮ ಸಿಬ್ಬಂದಿ ಈ ಪ್ರಕರಣದಲ್ಲಿ ಭಾಗಿಯಾಗಿದ್ದರೆ ಸೇವೆಯಿಂದಲೇ ವಜಾ ಮಾಡುತ್ತೇವೆ , ಜೈಲಿಗೂ ಕಳುಹಿಸುತ್ತೇವೆ . ಅನೇಕ ದಿನಗಳಿಂದ ಮೈಸೂರಿನ ಹೊರವಲಯದ ಹೊಸಹುಂಡಿಯಲ್ಲಿ ನಕಲಿ ತುಪ್ಪ ತಯಾರಿಕೆ ಮಾಡಲಾಗುತ್ತಿತ್ತು ಎಂಬುದು ತಿಳಿದು ಬಂದಿದ್ದು , ಅಲ್ಲಿಗೂ ನಾವು ಭೇಟಿ ನೀಡಿ , ನಕಲಿ ತುಪ್ಪ ತಯಾರಿಕೆ ಘಟಕವನ್ನು ಸೀಜ್ ಮಾಡಿಸಿದ್ದೇವೆ . ಇದೇ ಮೊದಲು ಇಂತಹ ಕಲಬೆರಕೆ ಜಾಲ ಕಂಡು ಬಂದಿದೆ . ಸರ್ಕಾರದ ಮಟ್ಟದಲ್ಲಿ ತನಿಖೆಗೆ ಮನವಿ ಮಾಡಿದ್ದೇವೆ .

ಗೋದಾಮಿನಲ್ಲಿ ಸಿಕ್ಕಂತಹ ಎಲ್ಲಾ ನಕಲಿ ವಸ್ತುಗಳನ್ನು ಸೀಜ್ ಮಾಡುವಂತಹ ಕೆಲಸವಾಗಿದೆ . ಫುಡ್ ಡಿಪಾರ್ಟ್‌ಮೆಂರ್ಟ್‌ಗೆ ಮಾದರಿ ಕಲುಹಿಸಲಾಗಿದೆ . ಮೇಲ್ನೋಟಕ್ಕೆ ಡಾಲ್ಟಾ , ಪಾಮ್ ಆಯಿಲ್ ನಂತಹ ಪ್ರಾಡಕ್ಟ್ ಬಳಸಿದ್ದಾರೆ . ಎಲ್ಲೆಲ್ಲಿ ಸಪ್ಪೆ ಆಗುತ್ತಿತ್ತು , ಯಾರೆಲ್ಲಾ ಭಾಗಿಯಾಗಿದ್ದಾರೆ ಅನ್ನುವುದರ ತನಿಖೆಯಾಗುತ್ತದೆ . ಯಾರೇ ಪ್ರಭಾವಿಗಳಿದ್ದರೂ ಬಿಡಲ್ಲ , ಜೈಲಿಗೆ ಕಳುಹಿಸುತ್ತೇವೆ . ಇಂತಹ ಅಕ್ರಮಗಳನ್ನು ತಡೆಯಲು ವಿಜುಲಿಯನ್ಸ್ ಟೀಂ ಚುರುಕುಗೊಳಿಸುತ್ತೇವೆ . ಪ್ರತಿ ವಾರಕ್ಕೊಮ್ಮೆ ಎಲ್ಲಾ ಪಾರ್ಲ‌್ರಗಳಿಗೆ ಭೇಟಿ ಕೊಟ್ಟು ಪರಿಶೀಲಿಸಬೇಕು ಎಂದರು . ಗುಣಮಟ್ಟ ಕಾಯ್ದುಕೊಳ್ಳುವ ಬಗ್ಗೆ ಪ್ರತಿ ವಾರ ಉತ್ಪನ್ನಗಳನ್ನು ಲ್ಯಾಬ್ ಗೆ ತಂದು ಪರಿಶೀಲಿಸುತ್ತೇವೆ

ಕೂಲಂಕುಷವಾಗಿ ತನಿಖೆ ನಡೆಸಿ ಸತ್ಯಾಸತ್ಯತೆ ಹೊರ ತರುವಂತೆ ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ . ರೈತರು , ಗ್ರಾಹಕರು ಮೈಮುಲ್‌ಗೆ ಎರಡು ಕಣ್ಣುಗಳಿದ್ದಂತೆ . ಇಬ್ಬರ ವಿಶ್ವಾಸವನ್ನು ಮೈಮುಲ್ ಕಾಪಾಡಿಕೊಳ್ಳಲಿದೆ ಎಂದು ತಿಳಿಸಿದರು..

Leave a Reply

Your email address will not be published. Required fields are marked *

You cannot copy content of this page