ಅಡಿಪಾಯವೇ ಇಲ್ಲದೆ ಮನೆಯೊಂದು ಮೈಸೂರಿನಲ್ಲಿ ನಿರ್ಮಾಣ ವಾಗಿದ್ದು, ಕರ್ನಾಟಕದಲ್ಲಿ ಒಂದು ಹೊಸಪ್ರಯತ್ನಕ್ಕೆ ಚಾಲನೆ

Lohith hanumanthappa
ಸಾಮಾನ್ಯವಾಗಿ ಎಲ್ಲರೂ ಅಡಿಪಾಯ ಹಾಕಿಸಿ ಅದರ ಮೇಲೆ ಮನೆ ಕಟ್ಟುತ್ತಾರೆ. ಆದರೆ, ಮೈಸೂರಿನಲ್ಲಿ ಅಡಿಪಾಯ ಇಲ್ಲದೆಯೇ ಸದೃಢ  ಮನೆಯೊಂದು ತಲೆ ಎತ್ತಿದೆ!

ಅರೆ ಇದೇನಪ್ಪ ಫೌಂಡೇಶನ್ ಇಲ್ಲದೆ ಮನೆ ಹೆಂಗಪ್ಪ ನಿರ್ಮಾಣ ಮಾಡೋದು ಅಂತಿರಾ ಈ ಸ್ಟೋರಿ ನೋಡಿ..

ಹೌದು! ಮನೆ ಎಂದರೆ ಕೇವಲ ಇಟ್ಟಿಗೆ, ಗೋಡೆ, ಕಬ್ಬಿಣ, ಕಿಟಕಿ, ಬಾಗಿಲುಗಳು ಇರುವುದಷ್ಟೇ ಅಲ್ಲ. ಮನೆ ಗಟ್ಟಿಯಾಗಿ ನಿಲ್ಲಲು ಅಡಿಪಾಯ ತುಂಬಾ ಮುಖ್ಯ. ಆದರೆ, ಈ ಹಳೆ ಪದ್ಧತಿಯನ್ನು ಮುರಿದು ಫೌಂಡೇಶನ್ ಹಾಕದೆಯೇ ಗಟ್ಟಿಮುಟ್ಟಾದ ಮನೆ ಕಟ್ಟಲು ಸಾಧ್ಯ ಎಂಬುದನ್ನು ನಗರದ ಆರ್ಕಿಟೆಕ್ಟ್ ಶರತ್ ಕುಮಾರ್ ಎಂ.ಪಿ. ತೋರಿಸಿಕೊಟ್ಟಿದ್ದಾರೆ.

ಆ ಮೂಲಕ ಅಡಿಪಾಯಕ್ಕೆ ತಗುಲಬಹುದಾದ ಶೇ.20ರಿಂದ 30ರಷ್ಟು ಹಣ ಉಳಿತಾಯ ಮಾಡಿಕೊಟ್ಟಿದ್ದಾರೆ.

ಅಲ್ಲದೆ, ಈ ಹೊಸ ವಿಧಾನಕ್ಕೆ ‘ಅಡ್ವಾನ್ಸ್ ರ‍್ಯಾಪಿಡ್ ಕನ್‌ಸ್ಟ್ರಕ್ಷನ್‌’ ಎಂಬ ಹೆಸರು ಕೊಟ್ಟಿದ್ದಾರೆ. ಹಾಗೇ ನೋಡಿದರೆ ಫೌಂಡೇಶನ್ ಇಲ್ಲದೆ ಕರ್ನಾಟಕದಲ್ಲಿ ತಲೆ ಎತ್ತಿದ ಮೊದಲ ಮನೆ ಇದಾಗಿದೆ,

*​ಅಡಿಪಾಯ ಇಲ್ಲದೇ ಕಟ್ಟುವುದು ಹೇಗೆ?*

ಸಾಮಾನ್ಯವಾಗಿ ಅಡಿಪಾಯ ಇಲ್ಲದೆ ಮನೆ ಕಟ್ಟುವ ಮೊದಲು ಒಂದೇ ಮಟ್ಟ ಇರಲಿ ಎಂಬ ಉದ್ದೇಶಕ್ಕೆ ಸೈಟ್ ಅನ್ನು ಶುಚಿಗೊಳಿಸಬೇಕಾಗುತ್ತದೆ. ನಂತರ ಪೈಲ್ ಫೌಂಡೇಶನ್ ಮಾಡಲಾಗುತ್ತದೆ.

ಇಲ್ಲಿ ಭೂಮಿಯನ್ನು 7 ಅಡಿ ಡ್ರಿಲ್ ಮಾಡಲಾಗುತ್ತದೆ. ಅಲ್ಲಿ ಕಬ್ಬಿಣದ ರಾಡುಗಳನ್ನು ಜೋಡಿಸಿ ನಂತರ ಕಾಲಂಸ್‌ಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ರಾತ್ರಿ ವೇಳೆ ಲೇಸರ್ ಲೆವೆಲ್ ಗುರುತು ಮಾಡಲಾಗುತ್ತದೆ. ಅಡಿಪಾಯ ಹಾಕಿ ಮನೆ ಕಟ್ಟಲು ಹೆಚ್ಚಿನ ಕೆಲಸಗಾರರ ಬೇಕಾದರೆ ಇಲ್ಲಿ ಅಷ್ಟೊಂದು ಜನ ಬೇಕಾಗುವುದಿಲ್ಲ.

ಪ್ಲಿಂಟ್ ಕಂಟ್ರಕ್ಷನ್ ನಂತರ ಗೋಡೆಗಳನ್ನು ಎತ್ತಿಸಿ ಮನೆ ಕಟ್ಟಲಾಗುತ್ತದೆ. ಜಿ ಪ್ಲಸ್ ಟು ವರೆಗೆ ಅಡಿಪಾಯ ಇಲ್ಲದೆ ಮನೆಯನ್ನು ಕಟ್ಟಬಹುದು.

‘‘ಸಾಮಾನ್ಯವಾಗಿ ಶೇ.20-30ರಷ್ಟು ಹಣ ಫೌಂಡೇಶನ್‌ಗೆ ಬೇಕಾಗುತ್ತದೆ. ಅಲ್ಲದೆ, ಮನೆಕಟ್ಟಲು 6ರಿಂದ 7 ತಿಂಗಳು ಬೇಕು. ಆದರೆ, ಅಡಿಪಾಯ ಇಲ್ಲದೆ ಮನೆ ಕಟ್ಟಲು 3 ತಿಂಗಳು ಸಾಕು. ಎರಡು ವರ್ಷ ನಾವು ಒಂದು ವಿದೇಶಿ ಕಂಪನಿ ಜೊತೆ ಕೆಲಸ ಮಾಡಿದೆವು. ಅಲ್ಲಿ ಪೈಲ್ ಫೌಂಡೇಶನ್‌ಗೆ ಹೆಚ್ಚಿನ ಆದ್ಯತೆ ನೀಡಿದರು. ಅದನ್ನೇ ಸ್ಫೂರ್ತಿಯಾಗಿ ತೆಗೆದುಕೊಂಡು ಎಚ್.ಡಿ.ಕೋಟೆ ಹ್ಯಾಂಡ್‌ಪೋಸ್ಟ್ ಬಳಿ ಒಂದು ಡೈರಿಯನ್ನು ಅಡಿಪಾಯ ಇಲ್ಲದೆ ನಿರ್ಮಾಣ ಮಾಡಿದೆವು. ಅದು ಸಕ್ಸಸ್ ಆಯಿತು. ಆ ನಂತರ ಇದೀಗ ಬಂಡಿಪಾಳ್ಯದ ಬಳಿ ಮತ್ತೊಂದು ಮನೆಯನ್ನು ಕಟ್ಟಿದ್ದೇವೆ ಎಂದು ಹೇಳುತ್ತಾರೆ ಶರತ್ ಕುಮಾರ್

*​ಮೂರು ಹಂತಗಳಲ್ಲಿ ಮನೆ ನಿರ್ಮಾಣ*

ಈ ನಿರ್ಮಾಣ ಕಾರ್ಯಕ್ರಮದಲ್ಲಿ ಮೂರು ವಿಧಾನವನ್ನು ಅನುಸರಿಸಲಾಗಿದೆ. ಮೊದಲನೆಯದು ಪೈಲ್ ಫೌಂಡೇಶನ್. ಮತ್ತೊಂದು ಪ್ಲಿಂಥ್‌ ಬೀಮ್‌ ಮೆಥೆಡ್. ಕೊನೆಯದು ಸ್ಲಾಬ್ ಆನ್ ಗ್ರೇಡ್. ಈ ಮೂರು ವಿಧಾನಗಳನ್ನು ಬಳಸಿಕೊಂಡು ಯಶಸ್ವಿಯಾಗಿ ಮನೆ ಕಟ್ಟಲಾಗಿದೆ.
ಸಾಮಾನ್ಯವಾಗಿ ಮನೆ ಕಟ್ಟುವಾಗ ಮೆಟೀರಿಯಲ್ ಹೆಚ್ಚು ಬೇಕು. ಆದರೆ, ಇಲ್ಲಿ ಬೇಕಾಗುವುದಿಲ್ಲ. ಕಾಂಕ್ರೀಟ್ ಹೆಚ್ಚು ಬಳಸುವುದರಿಂದ ಕಟ್ಟಡವು 75 ರಿಂದ 100 ವರ್ಷದವರೆಗೂ ಗಟ್ಟಿಮುಟ್ಟಾಗಿರುತ್ತದೆ.

ಅಡಿಪಾಯ ಇಲ್ಲದೇ ಮನೆ ಕಟ್ಟುವಾಗ ಸೈಟಿನ ಅಕ್ಕಪಕ್ಕ ಜಾಗ ಇರಬೇಕು. ಕಾರಣ ಯಂತ್ರಗಳ ಮೂಲಕ ಡ್ರಿಲ್ ಮಾಡಬೇಕಾದ ಕಾರಣ ಅದನ್ನು ಬಳಸಲು ಅಕ್ಕಪಕ್ಕ ಜಾಗವಿದ್ದರೆ ಅನುಕೂಲ.
30×40 ಸೈಟಿಗೆ ಇದು ಅಗತ್ಯ. ಅಲ್ಲದೇ, ಸೈಟು ಹಾಗೂ ರಸ್ತೆ ಲೆವೆಲ್ ಸಮನಾಗಿರಬೇಕು,

*​ಇದರ ಪ್ರಯೋಜನಗಳೇನು?*

1. ಶೇ.20ರಿಂದ 30ರಷ್ಟು ಹಣ ಉಳಿತಾಯ

2. ಜಿ ಪ್ಲಸ್ ಟುವರೆಗೆ ಮನೆ ತಲೆ ಎತ್ತಬಹುದು

3. ಮನೆ ಕಟ್ಟಲು ಹೆಚ್ಚಿನ ಮೆಟೀರಿಯಲ್ ಬೇಕಾಗದು

4. ಕಟ್ಟಡ ಕಾರ್ಮಿಕರು ಹೆಚ್ಚು ಬೇಕಾಗಿಲ್ಲ

5. ಫ್ಲೋರಿಂಗ್ ಗೆ ಪ್ಲಾಸ್ಟರಿಂಗ್ ಅಗತ್ಯವಿಲ್ಲ

6. ಮೂರು ತಿಂಗಳಲ್ಲಿ ಮನೆ ರೆಡಿ

7.ಕಾಂಕ್ರೀಟ್ ನೆಲಹಾಸು ರೆಡಿ

ಭಾರತದಲ್ಲಿ ಮನೆಗಳನ್ನು ಕಟ್ಟುವಾಗ ಕೆಲವೊಂದು ವಿಷಯಕ್ಕೆ ಹೆಚ್ಚು ಪ್ರಾಧಾನ್ಯತೆ ಕೊಡಲಾಗುತ್ತದೆ. ಇದರಿಂದಾಗಿ ಖರ್ಚು, ವೆಚ್ಚಗಳೂ ಹೆಚ್ಚಾಗುತ್ತದೆ.

ವಿದೇಶಗಳಲ್ಲಿ ಹೊಸ ತಂತ್ರಜ್ಞಾನ, ವಿನ್ಯಾಸ ಬಳಸಿ ಕಡಿಮೆ ಖರ್ಚಿನಲ್ಲಿ ಉತ್ತಮ ಮನೆ ಕಟ್ಟಿಕೊಂಡಿದ್ದಾರೆ.

‘ಅಪ್ಪ ಹಾಕಿದ ಆಲದ ಮರ’ ಎಂದು ಜೋತು ಬೀಳದೆ ಹೊಸ ಪ್ರಯೋಗಕ್ಕೆ ನಮ್ಮನ್ನು ತೊಡಗಿಸಿಕೊಂಡರೆ ಖರ್ಚು ಕಡಿಮೆ ಮಾಡಬಹುದು ಎನ್ನುವುದು ವಾಸ್ತುಶಿಲ್ಪಿ ಶರತ್ ಕುಮಾರ್ ಅವರ ಮಾತಾಗಿದೆ,

ಕಡಿಮೆ ಖರ್ಚಿನಲ್ಲಿ ಮನೆ ಕಟ್ಟಿರುವ ಮಾಲಿಕರು ಹರ್ಷ ವ್ಯಕ್ತಪಡಿಸಿದ್ದಾರೆ,

ಒಟ್ಟಾರೆ ಎಲ್ಲಾ ವರ್ಗದ ಜನರು ಅಡಿಪಾಯವಿಲ್ಲದ ಈ ಹೊಸ ಆವಿಷ್ಕಾರದ ಮನೆ ನಿರ್ಮಾಣ ಮಾಡಬಹುದು ಎನ್ನುವುದು ಎಂಜಿನಿಯರ್ ಗಳ ಮಾತಾಗಿದೆ,

Leave a Reply

Your email address will not be published. Required fields are marked *

You cannot copy content of this page