ಶಾಂತಲಾ ವಿದ್ಯಾಪೀಠದಲ್ಲಿ ನಡೆದ ಅದ್ದೂರಿ ಕನ್ನಡ ಹಬ್ಬ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ
ನಗರದ ಸಿದ್ಧಾರ್ಥ ಬಡಾವಣೆಯಲ್ಲಿರುವ ಶಾಂತಲ ವಿದ್ಯಾಪೀಠ ಶಾಲೆಯಲ್ಲಿ ಅದ್ದೂರಿಯಾಗಿ ನೆರವೇರಿದ 69 ನೇ ಕನ್ನಡ ರಾಜ್ಯೋತ್ಸವ
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಹಿರಿಯ ಪತ್ರಕರ್ತರು ವಿಜಯವಾಣಿ ದಿನಪತ್ರಿಕೆಯ ಎಂಆರ್ ಸತ್ಯ ನಾರಾಯಣ ಅವರು ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು
ಶಾಂತಲ ವಿದ್ಯಾಪೀಠ ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ ಕಲಿಸುವಲ್ಲಿ ಹೆಚ್ಚು ಮುತುವರ್ಜಿ ವಹಿಸಿದೆ. ವಿದ್ಯೆಗಿಂತಲೂ ಸಂಸ್ಕಾರ ಮುಖ್ಯವಾಗಿದೆ. ಎಷ್ಟೇ ವಿದ್ಯೆ ಕಲಿತರೂ ಸಂಸ್ಕಾರ ಇಲ್ಲದಿದ್ದರೆ ಕಲಿತ ವಿದ್ಯೆ ವ್ಯರ್ಥ , ಈ ಬಾರಿಯ ಕನ್ನಡ ರಾಜ್ಯೋತ್ಸವದಲ್ಲಿ ಶಾಂತಲಾ ವಿದ್ಯಪೀಠದ ಮಕ್ಕಳಿಂದ ನಮ್ಮ ಸಂಸ್ಕೃತಿಯ ಅನಾವರಣಗೊಳಿಸಲಾಯಿತು,
ಇದೇ ಸಂದರ್ಭದಲ್ಲಿ ಮಾಧ್ಯಮದಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯ ಛಾಯಾಗ್ರಾಹಕ ವಿ.ಜಿ. ಶ್ರೀಧರ್, ಆರ್ .ಜೆ. ರಶ್ಮಿ ಅವರಿಗೆ ಶಾಂತಲಾ ಮಾದ್ಯಮ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು,
ನಂತರ ಶಾಲಾ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು,
ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಸಮಿತಿ ಕಾರ್ಯದರ್ಶಿ ಎಂ.ಎಸ್.ಸಂತೋಷ್ ಕುಮಾರ್, ಪ್ರಾಂಶುಪಾಲರಾದ ಡಿಂಬಲ್ ಸಬಾಸ್ಟಿಯನ್ ಹಾಗೂ ಶಿಕ್ಷಕವೃಂದ ಉಪಸ್ಥಿತರಿದ್ದರು