ಮೈಸೂರು ಹೇರ್ ಅಂಡ್ ಬ್ಯೂಟಿ ಅಸೋಸಿಯೇಷನ್
ಹೈಬಾ ಅಂಗ ಸಂಸ್ಥೆಯ ವತಿಯಿಂದ ಕ್ಯಾನ್ಸರ್ ಪೀಡಿತರಿಗೆ ಹೇರ್ ಡೊನೇಟ್ ಮಾಡುವ ಉದ್ದೇಶದಿಂದ ಕರ್ನಾಟಕ ರತ್ನ ಪುನೀತ್‌ರಾಜ್ ಕುಮಾರ್ ರವರ ಸ್ಮರಣಾರ್ಥವಾಗಿ ಇಂದು ಸಾಮೂಹಿಕವಾಗಿ ಹೇರ್ ಕಟ್ ಮಾಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು..
ಮೈಸೂರಿನ, ಶಾರದದೇವಿ ನಗರದ , ನಿವೇದಿತ ನಗರ ಪಾರ್ಕ್‌ನಲ್ಲಿ ಸಂಸ್ಥೆಯ ಸದಸ್ಯರೆಲ್ಲರನ್ನೊಳಗೊಂಡತೆ ಉಮಾ ಜಾದವ್ ಅವರ ನೇತೃತ್ವದಲ್ಲಿ ಸಾಮೂಹಿಕ ಹೇರ್ ಕಟ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು..
ಕಾರ್ಯಕ್ರಮದ ಉದ್ಘಾಟನೆಯನ್ನು ಟಗರು ಸಿಬಿಮಾದ ಸರೋಜಾ ಖ್ಯಾತಿಯ ಋಷಿಕಾ ರಾಜ್ ಅವರು ಜ್ಯೋತಿ ಬೆಳಗಿಸುವುದರ ಮೂಲಕ ಮತ್ತು ಪುನಿತ್ ರಾಜ್ ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ನೆರವೇರಿಸಿದರು..
ನಂತರ ಋಷಿಕಾ ರಾಜ್ ಅವರು ಕೂಡಾ ಹೇರ್ ಡೊನೇಟ್ ಮಾಡಿದರು.
ನಂತರ ಸಾಮೂಹಿಕವಾಗಿ ಸ್ವಯಂ ಪ್ರೇರಣೆಯಿಂದ ಬಂದಂತಹ ಹಲವಾರು ಮಹಿಳೆಯರ ಹೇರ್ ಕಟ್ ಮಾಡಲಾಯಿತು, ಇದರೊಂದಿಗೆ ಕೆಲ ಯುವಕರು ಕೂಡಾ ಕೂದಲನ್ನು ಕ್ಯಾನ್ಸರ್ ಪೀಡಿತರಿಗೆ ನೀಡಿದ್ದು ವಿಶೇಷವಾಗಿತ್ತು..
ಇದೆ ಸಂಧರ್ಭದಲ್ಲಿ ಹೇರ್ ಡೋನೆಟ್ ಮಾಡಿದಂತಹ ಮಹಿಳಾಮಣಿಗಳನ್ನ ಸನ್ಮಾನಿಸಿ ಗೌರವಿಸಲಾಯಿತು..
ನಗರ ಪಾಲಿಕೆ ಸದಸ್ಯರಾದ ನಿರ್ಮಲಾ ಹರೀಶ್ ,
ವೀಣಾ ಗೌಡ , ಕೃಪಾ ಆನಂದ್ ಸೇರಿದಂತೆ ಹಲವರು ಈ ವಿಶೇಷ ಕಾರ್ಯಕ್ರಮಕ್ಕೆ ಸಾಕ್ಷಿಯಾದರು,
ಒಟ್ಟಾರೆ ಕ್ಯಾನ್ಸರ್ ಪೀಡಿತರಿಗೆ ಈ ರೀತಿಯಾಗಿ ಧೈರ್ಯ ತುಂಬುವ , ನೆರವು ನೀಡುವ ಕಾರ್ಯಕ್ರಮ ನೆಡೆದಿರುವುದು ನಿಜಕ್ಕೂ ಶ್ಲಾಘನೀಯ..
ಲೋಹಿತ್ ಹನುಮಂತಪ್ಪ ಮೈಸೂರು.