Lohith hanumanthappa:
ಅಗಸ್ತ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ 29ನೇ ವಾರ್ಷಿಕ ಸರ್ವ ಸದಸ್ಯರ ಸಭೆಗೆ ಬಂದು ಸಹಿ ಮಾಡಿ ಹೋದರೆ ಸಾಲದು, ಜೊತೆಗೆ ಸೊಸೈಟಿಯ ವ್ಯವಹಾರ ನಡೆಸುವ ಮೂಲಕ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಅಗಸ್ತ್ಯ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಎಂ ಡಿ ಗೋಪಿನಾಥ್ ಹೇಳಿದರು
ನಗರದ ಶಾರದಾ ವಿಲಾಸ್ ಶತಮಾನೋತ್ಸವ ಭವನದಲ್ಲಿ ಅಗಸ್ತ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ 29ನೇ ವಾರ್ಷಿಕ ಸರ್ವ ಸದಸ್ಯರ ಸಭೆ ಆಯೋಜಿಸಿದ್ದು ಈ ಸಂದರ್ಭದಲ್ಲಿ ಹಿರಿಯ ಸದಸ್ಯರಿಗೆ ಸನ್ಮಾನಿಸಿ ಆನಂತರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿ ಮಾತನಾಡಿದ ಅವರು
ಸೊಸೈಟಿಯಿಂದ ಸಾಲ ಪಡೆದವರು ಸಕಾಲಕ್ಕೆ ಹಣ ಕಟ್ಟಿದರೆ ಸೊಸೈಟಿಯ ಅಭಿವೃದ್ಧಿಗೆ ಸಹಾಯವಾಗುತ್ತದೆ, ಸೊಸೈಟಿಯ ಸದಸ್ಯರು ನಿರಂತರವಾಗಿ ವ್ಯವಹರಿಸುವ ಮೂಲಕ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು, ಸೊಸೈಟಿಯ ನಿರ್ದೇಶಕರು ಸರ್ವ ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಸಹಕಾರದೊಂದಿಗೆ ಸಂಘವು ಉತ್ತಮವಾಗಿ ನಡೆಯುತ್ತಿದೆ ಎಂದು ಹೇಳಿದರು
ಅಗಸ್ತ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷರಾದ ಎಂ ಡಿ ಗೋಪಿನಾಥ್,
ಉಪಾಧ್ಯಕ್ಷರಾದ ಎಂ ಎನ್ ಸೌಮ್ಯ ಹಾಗೂ ಖಜಾಂಚಿ ಕೆ ನಾಗರಾಜ ನಿರ್ದೇಶಕ ಮಂಡಲಿ ಸದಸ್ಯರಾದ ಸಿ ವಿ ಪಾರ್ಥಸಾರಥಿ, ಪ್ರಶಾಂತ್ ತಾತಾಚಾರ್, ಹೆಚ್ ಎಸ್. ಬಾಲಕೃಷ್ಣ, ಎಂ ಆರ್. ಚೇತನ್, ಹೆಚ್ ಪಿ. ಪಣಿರಾಜ್ ಎನ್, ವಿಕ್ರಂ ಅಯ್ಯಂಗಾರ್,
ಮಹಿಮ ಪಿ, ನಾಗಶ್ರೀ ಎನ್, ಕೆ ಎನ್ ಅರುಣ್, ಶಿವರುದ್ರಪ್ಪ, ರಾಜಮ್ಮ ಎಸ್, ಶಾಶ್ವತಿ ನಾಯಕ ಎಂ ಪಿ ಹಾಗೂ ಪ್ರಭಾರ ಕಾರ್ಯದರ್ಶಿ ಎನ್ ವೀಣಾ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.