ಬರಿ ಸಿನಿಮಾ ಥಿಯೇಟರ್ ಅಲ್ಲ ಹೌಸ್ ಫುಲ್ ಬೋರ್ಡ್ ಹಾಕೋದು, ಸ್ಮಾಶಾನದಲ್ಲೂ ಹೌಸ್ ಫುಲ್ ಬೋರ್ಡ್ ಹಾಕ್ತಾರೆ..

ಬರಿ ಸಿನಿಮಾ ಥಿಯೇಟರ್ ಅಲ್ಲ ಹೌಸ್ ಫುಲ್ ಬೋರ್ಡ್ ಹಾಕೋದು, *ಸ್ಮಾಶಾನದಲ್ಲೂ  ಹೌಸ್ ಫುಲ್ ಬೋರ್ಡ್ ಹಾಕ್ತಾರೆ*

ನೋಡಿ ಎಂಥಾ ಕಾಲ ಬಂತು,
ಬೆಂಗಳೂರಿನ ಚಿತಾಗಾರದ ಮುಂದೆ ಹೌಸ್‌ಫುಲ್ ಬೋರ್ಡ್ ಹಾಕಲಾಗಿದೆ ಇನ್ನಾದರೂ ಬುದ್ದಿ ಕಲಿರಿ..

ಇದು ನಿಜಕ್ಕೂ ದುರಂತವೇ ಸರಿ  ಮರಣದ ನಂತರವೂ ಚಿತಾಗಾರದ ಮುಂದೆ ಕ್ಯೂ ನಿಲ್ಲುವ ದಯನೀಯ ಪರಿಸ್ಥಿತಿ ಬಂದೊದಗಿದೆ .

ಶವಗಳ ರಾಶಿಯೇ ಇದ್ದು ಸುಡುವುದಕ್ಕೆ ಕಾಯಬೇಕಿದೆ ಎಂಬುದನ್ನು ಈ ಬೋರ್ಡ್ ಸೂಚಿಸುತ್ತದೆ .

*ಚಿತಾಗಾರ ಮುಂದೆ ಬಿತ್ತು ಹೌಸ್ ಪುಲ್ ಬೋರ್ಡ್ !*

ಬೆಂಗಳೂರಿನ ಚಾಮರಾಜಪೇಟೆಯ ಟಿಆ‌ರ್ ಮಿಲ್ ಸಮೀಪದ ಸ್ಮಶಾನದಲ್ಲಿ ಶವಗಳು ಭರ್ತಿಯಾಗಿದ್ದು , ದಹಿಸಲು ಸಾಧ್ಯವಿಲ್ಲ ಎಂಬಂತಾಗಿದೆ .

ಹೀಗಾಗಿ ಇಲ್ಲಿನ ಸಿಬ್ಬಂದಿ ಹೌಸ್‌ಫುಲ್ ಬೋರ್ಡ್ ನೇತು ಹಾಕಿದ್ದಾರೆ  ಎನ್ನಲಾಗಿದೆ .

ಭಾನುವಾರ ಕೋವಿಡ್‌ನಿಂದ ಮೃತರಾದ 45 ಮೃತದೇಹಗಳ ಅಂತ್ಯಕ್ರಿಯೆ ನಡೆದಿದೆ . ಈಗಾಗಲೇ 19 ಮೃತದೇಹಗಳು ದಹನಕ್ಕೆ ಬುಕ್ಕಿಂಗ್ ಆಗಿವೆ . ದಿನಕ್ಕೆ 20 ಮೃತದೇಹಗಳ ಅಂತ್ಯಕ್ರಿಯೆಗೆ ಅಲ್ಲಿ ಅವಕಾಶವಿದೆಯಂತೆ .

ಈಗಾಗಲೇ ಮೃತದೇಹ ದಹನದ ಬುಕ್ಕಿಂಗ್ ಹೆಚ್ಚಾಗಿರುವುದರಿಂದ ಚಿತಾಗಾರದ ಮುಂದೆ ಸಿಬ್ಬಂದಿ ಈ ಫಲಕ ಹಾಕಬೇಕಾಗಿ ಬಂದಿದೆ ಎನ್ನಲಾಗಿದೆ .

ಹೀಗಾಗಿ , ಮೃತರ ಅಂತ್ಯಕ್ರಿಯೆ ನಡೆಸಲು ಕುಟುಂಬಸ್ಥರು ಸ್ಮಶಾನದಿಂದ ಸ್ಮಶಾನಕ್ಕೆ ಪರದಾಡಬೇಕಾದ ಪರಿಸ್ಥಿತಿ ಉದ್ಭವಿಸಿದೆ ..
ಇವಾಗ ಈ ರೀತಿಯ ಬೋರ್ಡ್ ಅನ್ನು ತೆಗೆದು ಹಾಕಲಾಗಿದೆ ಎನ್ನಲಾಗಿದೆ ಆದರೆ ಜನರು ಇದನ್ನೆಲ್ಲ ನೋಡಿ ಅರ್ಥ ಮಾಡಿಕೊಳ್ಳಬೇಕು ,
ಇಂತಹ ಪರಿಸ್ಥಿತಿ ನಿರ್ಮಾಣ ವಾಗಲೂ ನಮ್ಮೆಲ್ಲರ ಅಜಾಗರೂಕತೆಯೇ ಕಾರಣ ಇನ್ನಾದರೂ ಎಚ್ಚೆತ್ತುಕೊಂಡು  ಮುನ್ನೆಚ್ಚರಿಕೆ ಕ್ರಮಗಳನ್ನು ಚಾಚುತಪ್ಪದೆ ಪಾಲಿಸಬೇಕು …

Leave a Reply

Your email address will not be published. Required fields are marked *

You cannot copy content of this page