ಇದೇ ಮೊದಲ ಬಾರಿಗೆ ‘ಸಾಂಸ್ಕೃತಿಕ ನಗರಿ ಮೈಸೂರಿನ ಪ್ರತಿಷ್ಠಿತ ಭಾರತ್ ಆಸ್ಪತ್ರೆ ಮತ್ತು ಇನ್‌ಸ್ಟಿಟ್ಯೂಟ್ ಆಫ್ ಆಂಕೊಲಾಜಿ ಸಂಸ್ಥೆಯಲ್ಲಿ ಅತ್ಯಾಧುನಿಕ ಡಾವಿನ್ಸಿ ‘ರೊಬೊಟಿಕ್ ಸರ್ಜಿಕಲ್ ಸಿಸ್ಟಂ’ ಅನ್ನು ಪರಿಚಯಿಸಲಾಗುತ್ತಿದೆ. ಮೈಸೂರಿಗೆ ರೊಬೊಟಿಕ್ ಸರ್ಜರಿ ಅನ್ನು ಅನಾವರಣಗೊಳಿಸುತ್ತಿರುವ ಮೊದಲ ಆರೋಗ್ಯ ಸೌಲಭ್ಯ ಇದಾಗಿದೆ. ಅಲ್ಲದೆ, ಶಸ್ತ್ರಚಿಕಿತ್ಸೆಯಲ್ಲಿ ಕ್ರಾಂತಿಕಾರಿ ಹೆಜ್ಜೆಯಾಗಿದೆ. ಸಂಕೀರ್ಣ ಕಾರ್ಯವಿಧಾನಗಳ ಅಗತ್ಯವಿರುವ ರೋಗಿಗಳಿಗೆ ಶಸ್ತ್ರಚಿಕಿತ್ಸಾ ಫಲಿತಾಂಶಗಳನ್ನು ಗಣನೀಯವಾಗಿ ಹೆಚ್ಚಿಸಲು ಈ ತಂತ್ರಜ್ಞಾನವು ಸಹಕಾರಿಯಾಗುತ್ತದೆ,
ವಿಕಿರಣ ಮತ್ತು ವೈದ್ಯಕೀಯ ಆಂಕೊಲಾಜಿಸ್ಟಸ್, ಎಚ್‌ಸಿಜಿಯ ಕಾರ್ಯನಿರ್ವಾಹಕ ಅಧ್ಯಕ್ಷ ಮತ್ತು ಬಿಎಚ್‌ಐಒ ಅಧ್ಯಕ್ಷ ಡಾ.ಬಿ.ಎಸ್.ಅಜಯ್ ಕುಮಾರ್ ಅವರು ಶನಿವಾರ ಹೊಸ ಸೌಲಭ್ಯಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು.
ನಂತರ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಡಾವಿನ್ಸಿ ವ್ಯವಸ್ಥೆಯನ್ನು ಮೊದಲ ಮೈಸೂರಿಗೆ ತಂದ ಸಂತಸವನ್ನು ಹಂಚಿಕೊಂಡರು, ಇದು ರೋಬೋಟಿಕ್ ಸರ್ಜರಿ ಕ್ಷೇತ್ರದಲ್ಲಿ “ಗೇಮ್ ಚೇಂಜರ್’. ಎಂದು ಬಣ್ಣಿಸಿದರು. “ಇದು ನಮ್ಮ ರೋಗಿಗಳಿಗೆ ಕ್ಲಿನಿಕಲ್ ಫಲಿತಾಂಶಗಳನ್ನು ಒದಗಿಸುತ್ತದೆ. ಶಸ್ತ್ರಚಿಕಿತ್ಸಾ ಫಲಿತಾಂಶಗಳನ್ನು ಮಾತ್ರವಲ್ಲದೆ ಅವರ ಒಟ್ಟಾರೆ ಜೀವನದ ಗುಣಮಟ್ಟವನ್ನೂ ಸುಧಾರಿಸುತ್ತದೆ’ ಎಂದು ಅವರು ಹೇಳಿದರು, “ಈ ಸುಧಾರಿತ ರೊಬೊಟಿಕ್ ಸರ್ಜರಿ ನಮ್ಮ ರೋಗಿಗಳಿಗೆ ಅತ್ಯಾಧುನಿಕ ಆರೋಗ್ಯ ತಂತ್ರಜ್ಞಾನಗಳನ್ನು ಒದಗಿಸುವ ನಮ್ಮ ನಿರಂತರ ಬದ್ಧತೆಯ ಭಾಗವಾಗಿದೆ,’ ಎಂದು ವ್ಯಾಖ್ಯಾನಿಸಿದರು.
ಡಾವಿನ್ಸಿ ವ್ಯವಸ್ಥೆಯಿಂದ ರೋಗಿಗೆ ಕಡಿಮೆ ನೋವು, ಕಡಿಮೆ ರಕ್ತದ ನಷ್ಟ ಹಾಗೂ ಆಸ್ಪತ್ರೆಯಲ್ಲಿ ಹೆಚ್ಚು ದಿನ ಉಳಿಯದಿರುವುದು ಸೇರಿದಂತೆ ಹಲವಾರು ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಶಸ್ತ್ರಚಿಕಿತ್ಸೆಯನ್ನು ನಿಖರವಾಗಿ ನಡೆಸಿ ರೋಗಿಯ ಚೇತರಿಕೆಯ ಪ್ರಕ್ರಿಯೆಯನ್ನು ಈ ತಂತ್ರಜ್ಞಾನ ಹೆಚ್ಚಿಸುತ್ತದೆ. ಬಹುಮುಖ್ಯವಾಗಿ ರೋಗಿಗಳು ತಮ್ಮ ದೈನಂದಿನ ಜೀವನಕ್ಕೆ ಹೆಚ್ಚು ವೇಗವಾಗಿ ಮರಳಲು ಅನುವು ಮಾಡಿಕೊಡುತ್ತದೆ. ರೊಬೊಟಿಕ್ ಶಸ್ತ್ರಚಿಕಿತ್ಸಕರಾದ ಡಾ. ವಿಜಯ್ ಕುಮಾರ್ ಮತ್ತು ಡಾ. ರಕ್ಷತ್ ಶೃಂಗೇರಿ ಸೇರಿದಂತೆ ತಜ್ಞ ಶಸ್ತ್ರಚಿಕಿತ್ಸಕರ ಮಾರ್ಗದರ್ಶನದಲ್ಲಿ ಭಾರತ್ ಆಸ್ಪತ್ರೆ ಮತ್ತು ಅಂಕೊಲಾಜಿ ಸಂಸ್ಥೆಯು ರೊಬೊಟಿಕ್ ಸರ್ಜರಿ ಮೂಲಕ ಮೈಸೂರು ಪ್ರದೇಶದ ಎಲ್ಲಾ ರೋಗಿಗಳಿಗೆ ಸುಧಾರಿತ ಶಸ್ತ್ರಚಿಕಿತ್ಸಾ ಆರೈಕೆಯನ್ನು ನೀಡುವ ಗುರಿಯನ್ನು ಹೊಂದಿದೆ ಎಂದು ಹೇಳಿದರು.
ಇದೆ ಸಂಧರ್ಭದಲ್ಲಿ ನಿರ್ದೇಶಕಿ ಅಂಜಲಿ ಮತ್ತು ಸೀನಿಯರ್ ರೇಡಿಯೇಶನ್ ಅಂಕೊಲಜಿಸ್ಟ್ ಮತ್ತು ವೈದ್ಯಕೀಯ ಅಧೀಕ್ಷಕಿ ಡಾ.ವೈ.ಎಸ್. ಮಾಧವಿ, ಸಿಒಒ ಗೌತಮ್ ಧರ್ಮೇಲಾ ಉಪಸ್ಥಿತರಿದ್ದರು.