ನಗರದ ಕೋಟೆ ಆಂಜನೇಯ ಸ್ವಾಮಿದೇವಸ್ಥಾನದ ಆವರಣದಲ್ಲಿಂದು ಪ್ರಾಣಿ ಪಕ್ಷಿಗಳ ಪ್ರಿಯರು ಮತ್ತು ಬನ್ನೂರಿನ ಸಮಾಜಸೇವಕರು ಹಾಗೂ ಬನ್ನೂರು ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷರಾದ MPHF ಡಾ.ಕೆ.ಮಹೇಂದ್ರ ಸಿಂಗ್ ಕಾಳಪ್ಪ ನವರು
ಪ್ರಾಣಿ,ಪಕ್ಷಿಗಳಿಗೆ ಆಹಾರ ಧಾನ್ಯ ವಿತರಣೆ ಮಾಡಿದರು.
ಹಲವಾರು ವರ್ಷಗಳಿಂದ ಸಮಾಜಮುಖಿ ಸೇವಾ ಕಾರ್ಯದಲ್ಲಿ ತೊಡಗಿಕೊಂಡ ಮಹೇಂದ್ರ ಸಿಂಗ್ ಕಾಳಪ್ಪ ನವರು ಮೈಸೂರಿನ ಮೃಗಾಲಯದಲ್ಲಿ ಪ್ರಾಣಿಗಳನ್ನು ದತ್ತುಪಡೆದು,ಮೈಸೂರಿನ ಪಿಂಜರಪೋಲ್ ನಲ್ಲಿ ಹಸುಗಳನ್ನು ದತ್ತು ತೆಗೆದುಕೊಂಡಿದ್ದಾರೆ.
ಅಂತೆಯೇ ಮೈಸೂರಿನ N R ಮೋಹಲ್ಲದ ನಂಜಮ್ಮರವರ ನೇತೃತ್ವದಲ್ಲಿ ನಡೆಯುತ್ತಿರುವ ಆಶ್ರಯ ಚಾರಿಟೇಬಲ್ ಟ್ರಸ್ಟ್ ನ ರವೀಶ್ ರವರನ್ನು ಡಾ.ಕೆ.ಮಹೇಂದ್ರ ಸಿಂಗ್ ಕಾಳಪ್ಪ ನವರು ಗುರುತಿಸಿ ಕೃತಕ ಕಾಲು ಜೋಡಣೆಗೆ ಆರ್ಥಿಕ ಧನ ಸಹಾಯ ಮತ್ತು ನೆರವನ್ನು ಕಾಳಪ್ಪ ರವರು ನೀಡಿದರು.
ರವೀಶ್ ರವರು ಕಳೆದ 4ವರ್ಷ ಗಳ ಹಿಂದೆ P K ಟ್ರ್ಯಾವಲ್ ನಲ್ಲಿ ಬಸ್ ಚಾಲಕನಾಗಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದು.ಕೇರಳದ ಮಾನಂದವಾಡಿಯಲ್ಲಿ ಆಕ್ಸಿಡೆಂಟ್ ಆಗಿ ಕಾಲನ್ನು ಕಳೆದು ಕೊಂಡರು ಆಗ ಇವರನ್ನು ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದರು.ಈ ತೊಂದರೆಗೆ ಸಿಲುಕಿದ ರವೀಶ್ ರವರನ್ನು ಹೆಂಡತಿ ಮಕ್ಕಳು ಬಿಟ್ಟು ಇವರನ್ನು
ಅನಾಥರನ್ನಾಗಿ ಮಾಡಿದ್ದರು ಆಗ ಇವರಿಗೆ ಜೀವನಕ್ಕೆ ಮಹೇಂದ್ರ ಸಿಂಗ್ ಕಾಳಪ್ಪ ನವರು ಆರ್ಥಿಕವಾಗಿ ನಿಂತ್ತರು.ಕೃತಕ ಕಾಲು ಜೋಡನೆಯಿಂದ ಹಿಡಿದ್ದು ಜೀವನ ಪರ್ಯಂತ ನಿಮಗೆ ನೆರವಾಗಿ ನಿಲುವುದಾಗಿ ಕಾಳಪ್ಪ ನವರು ತಿಳಿಸಿದರು
ಇನ್ನು ಇದೆ ಸಂದರ್ಭದಲ್ಲಿ ಅನೂಪ್,ರವೀಶ್,ಕೆ.ಆರ್.ನಗರದ ಪ್ರಕಾಶ್,ಜನಕ್ ಸಿಂಗ್,ಶಿವು ಕುಮಾರ್ ರವರು ಸೇರಿದಂತೆ ಪ್ರಮುಖರು ಹಾಜರಿದ್ದರು.
ಇನ್ನು ಈ ಕುರಿತು ಆರ್ಥಿಕ ನೆರವು ಪಡೆದ ರವೀಶ್ ಮತ್ತು ಆಶ್ರಯ ಚಾರಿಟೇಬಲ್ ಟ್ರಸ್ಟ್ ನ ಅನೂಪ್ ರವರು ಮಾತನಾಡಿದರು,