ಯುವ ಮನಸುಗಳ ಯುವ ಬ್ರಿಗೇಡ್ ನ ಸದಸ್ಯರು ಮೈಸೂರಿನಲ್ಲಿ ಕಾಲಿಡದಂತಾಗಿದ್ದ ಖಾಸಗಿ ಬಸ್ ನಿಲ್ದಾಣವನ್ನು ಸ್ವಚ್ಚಮಾಡಿ ಜನರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ

ಯುವ ಬ್ರಿಗೇಡ್ ನ ವತಿಯಿಂದ ಸ್ವಚ್ಛತೆಯ ಆರೋಗ್ಯ ಶೀರ್ಷಿಕೆಯಡಿ , ಸ್ವಚ್ಚತಾ ಕಾರ್ಯ ನಡೆಸಲಾಯಿತು..

ಮೈಸೂರಿನ ನ್ಯೂ ಸಯ್ಯಾಜಿರಾವ್ ರಸ್ತೆ, ಆರ್‌ಎಂಸಿ ಬಳಿ ಇರುವ ಖಾಸಗಿ ಬಸ್ ನಿಲ್ದಾಣವನ್ನು ಯುವ ಬ್ರಿಗೇಡ್ ನ ಎಲ್ಲಾ ಸದಸ್ಯರು ಕಸಕಡ್ಡಿ ತೆಗೆದು ಸ್ವಚ್ಚ ಮಾಡಿ , ಗೋಡೆಗಳಿಗೆ ಬಣ್ಣ ಬಳಿದು ಯಾಥಾಸ್ಥಿತಿಗೆ ತಂದಿದ್ದಾರೆ..

ಯುವ ಬ್ರಿಗೇಡ್ ನ
ಸುಮಾರು 80 ಕ್ಕೂ ಹೆಚ್ಚು ಯುವಕ ಯುವತಿಯರು ಸ್ವಚ್ಚತಾ ಕಾರ್ಯದಲ್ಲಿ ಪಾಲ್ಗೊಂಡು ಕಾಲಿಡದಂತಾಗಿದ್ದ ಖಾಸಗಿ ಬಸ್ ನಿಲ್ದಾಣವನ್ನು ಸ್ವಚ್ಚ ಮಾಡಿ ಜನರಿಗೆ ಅನುಕೂಲ ವಾಗುವಂತೆ ಮಾಡಿದ್ದಾರೆ ,

ಈ ರೀತಿಯ ಸಾಕಷ್ಟು ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡಿರುವ ಯುವಬ್ರಿಗೇಡ್ ನ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *

You cannot copy content of this page