ಮೈಸೂರಿನಲ್ಲಿ ದೇಶದ ಮೊಟ್ಟ ಮೊದಲ ಪಿಸಿಬಿ ಮತ್ತು ಪೂರೈಕೆ ಸರಪಳಿ ಕ್ಲಸ್ಟರ್

ದೇಶದ ಮೊಟ್ಟ ಮೊದಲ ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್ (ಪಿಸಿಬಿ) ಹಾಗೂ ಪೂರೈಕೆ ಸರಪಳಿ ಕ್ಲಸ್ಟರ್ ನಗರದಲ್ಲಿ ಸ್ಥಾಪನೆಯಾಗುತ್ತಿದ್ದು, ಇದು ಸ್ಥಾಪನೆ ಬಳಿಕ, ಮೈಸೂರು ನಿಜವಾದ ಅರ್ಥದಲ್ಲಿ ದೇಶದ ಸಿಲಿಕಾನ್ ನಗರವಾಗಲಿದೆ ಎಂದು ಕರ್ನಾಟಕ ಸರ್ಕಾರದ ವಿದ್ಯುನ್ಮಾನ, ಐಟಿ/ಬಿಟಿ ಮತ್ತುಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಘೋಷಿಸಿದ್ದಾರೆ.
ಇನ್ಫೋಸಿಸ್ ನಲ್ಲಿ
ಇಂದು ದಿ ಮೈಸೂರು ಬಿಗ್ ಟೆಕ್ ಶೋ 2024 ನಡೆಯಿತು.

ಈ ಕಾರ್ಯಕ್ರಮದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಅನುಪಸ್ಥಿತಿಯಲ್ಲಿ ಅವರ ಭಾಷಣವನ್ನ ಓದಲಾಯಿತು.ನಾವು ಮೈಸೂರು ಭಾಗದಲ್ಲಿ ವಿಶೇಷ ಪಿಸಿಬಿ ಕ್ಲಸ್ಟರ್ ಅನ್ನು ಸ್ಥಾಪಿಸಲು ಎದುರು ನೋಡುತಿದ್ದೇವೆ. ಇದು ಇಎಸ್ಡಿಎಂ ಮೌಲ್ಯ ಸರಪಳಿಯನ್ನು ಹೆಚ್ಚಿಸುತ್ತದೆ ಮತ್ತು ಕರ್ನಾಟಕವನ್ನು ಈ ಕ್ಷೇತ್ರದಲ್ಲಿ ದಿಗ್ಗಜ ರಾಜ್ಯವಾಗಿ ರೂಪಿಸಲಿದೆ ಎಂದು ಸಚಿವರು ಭಾಷಣದಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page