ರಾಜ್ಯದ ಪ್ರತಿಯೊಂದು ಜಿಲ್ಲೆಯ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಆರೋಗ್ಯ ಸಹಾಯವಾಣಿ ಆರಂಭವಾಗಿದೆ: ಧೃವನಾರಾಯಣ್

ರಾಜ್ಯದ ಪ್ರತಿಯೊಂದು ಜಿಲ್ಲೆಯ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಆರೋಗ್ಯ ಸಹಾಯವಾಣಿ ಕಾರ್ಯ ಆರಂಭವಾಗಿದ್ದು, ಕೋವಿಡ್ ಸಂಬಂಧ ಜನರಿಗೆ ಸಹಾಯಮಾಡಲು ಸಹಾಯವಾಣಿಯಿಂದ ನೆರವು ನೀಡಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧೃವನಾರಾಯಣ್ ತಿಳಿಸಿದರು.

ಮೈಸೂರಿನಲ್ಲಿರುವ ಕಾಂಗ್ರೆಸ್ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮೊದಲೇ ಹಂತದಲ್ಲಿ 0.7 ರಷ್ಟು ಸಾವಿನ ಪ್ರಮಾಣ ಇತ್ತು . ಎರಡನೇ ಹಂತದಲ್ಲಿ 1.32 1.5 ಸಾವಿನ ಪ್ರಮಾಣ ಇದೆ.

ಇವತ್ತು ಕೇರಳ ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಇಲ್ಲ ಕೊರೊನಾ ನಿಯಂತ್ರಣದಲ್ಲಿ ಕೇರಳ ರಾಜ್ಯ ದೇಶದಲ್ಲಿ ಮುಂಚೂಣಿಯಲ್ಲಿದೆ . ಕೇಂದ್ರ ಹಾಗೂ ರಾಜ್ಯ ಸರ್ಕಾರ ಈ ರೀತಿ ಮುಂಜಾಗ್ರತೆ ತೆಗೆದುಕೊಂಡಿದ್ರೆ ಈ ಸ್ಥಿತಿ ಬರುತ್ತಿರಲಿಲ್ಲ. ವಿದೇಶಿ ಮಾಧ್ಯಮಗಳು ಭಾರತದ ಬಗ್ಗೆ ಮಾತನಾಡುವಂತಾಗಿದೆ . ಇದು ಟೀಕೆ ಮಾಡುವ ಸಮಯ ಅಲ್ಲ, ಸೋನಿಯಾ ಗಾಂಧಿ ಅವರು ಐದು ಅಂಶಗಳನ್ನು ಉಲ್ಲೇಖಿಸಿ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ.

ಆರೋಗ್ಯ ಕ್ಷೇತ್ರದ ಬಗ್ಗೆ ಹೆಚ್ಚಿನ ಆದ್ಯತೆ ನೀಡಬೇಕು . ಬೇರೆ ಇಲಾಖೆಯ ಅನುದಾನವನ್ನು ಕಡಿಮೆ ಮಾಡಬೇಕು ಅನ್ನೋದು ಸೋನಿಯಾ ಗಾಂಧಿ ಅವರ ಸಲಹೆಯಾಗಿದೆ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಕೊರೋನಾ ನಿಯಂತ್ರಣ ಸಂಬಂಧ ಕೇಂದ್ರಕ್ಕೆ ಪತ್ರ ಬರೆದಿದ್ದರು . ಆದರೆ ಪತ್ರಕ್ಕೆ ಆರೋಗ್ಯ ಸಚಿವ ಹರ್ಷವರ್ಧನ್ ವ್ಯಂಗ್ಯವಾಡಿದರು . ಮನಮೋಹನ್ ಸಿಂಗ್ ಪತ್ರಕ್ಕೆ ವ್ಯತಿರಿಕ್ತವಾಗಿ ಪತ್ರ ಬರೆದಿದ್ದರು . ಈಗಲಾದರೂ ತ್ವರಿತ ಗತಿಯಲ್ಲಿ ವ್ಯಾಕ್ಸಿನೇಷನ್ ಕೊಡಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ನಗರಾಧ್ಯಕ್ಷ ಆರ್.ಮೂರ್ತಿ , ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್ , ಮೈಲ್ಯಾಕ್ ಮಾಜಿ ಅಧ್ಯಕ್ಷ ಹೆಚ್.ಎ.ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You cannot copy content of this page