ಮೈಸೂರು: MIT ಮೈಸೂರ್, ಪ್ಯಾಲೇಸ್ ಸ್ಕೋಡಾ, ಸೆಂಟ್ , ಫಿಲೋಮಿನಾ ಕಾಲೇಜು, ಇನ್ನೂ ಹಲವಾರು ಸಂಸ್ಥೆಗಳ ಸಹವಾಗಿತ್ವದಲ್ಲಿ ಎಡಿನ್ ಕ್ರಿಕೆಟ್ ಪಂದ್ಯಾವಳಿ 2021 ರ ವಿಜೇತ ಸುತ್ತಿನ ಪಂದ್ಯಗಳು ಇಂದು ಮೈಸೂರಿನ ಸೆಂಟ್ , ಫಿಲೋಮಿನಾ ಕಾಲೇಜಿನ ಕ್ರೀಡಾಂಗಣದಲ್ಲಿ ಪ್ರಾರಂಭವಾದವು.
ವಿಜೇತ ಸುತ್ತಿನ ಪಂದ್ಯಗಳನ್ನು ಭಾರತದ ಶ್ರೇಷ್ಟ ಹಾಡುಗಾರರು ಹಾಗೂ ಸಂಗೀತ ನಿರ್ದೇಶಕರಾದ ವಿಜಯ್ ಪ್ರಕಾಶ್ ಅವರು ಉದ್ಘಾಟಿಸಿದರು . ..
ಇದೆ ಸಂಧರ್ಭದಲ್ಲಿ ಮಾತನಾಡಿದ ವಿಜಯ್ ಪ್ರಕಾಶ್ ಅವರು ಎಡಿನ್ ಸಾಮಾಜಿಕ ಕಾರ್ಯಗಳನ್ನು ಶ್ಲಾಘಿಸಿದರು,..
ಈ ಕ್ರೀಡಾಕೂಟದಲ್ಲಿ ಮೈಸೂರಿನ ಹಾಗೂ ನಂಜನಗೂಡಿನ ಪ್ರತಿಷ್ಠಿತ ಕಂಪನಿಗಳು ಪ್ರತಿಷ್ಠಿತ ಕಾಲೇಜು ವಿದ್ಯಾಸಂಸ್ಥೆಗಳು ಭಾಗವಹಿಸಿದ್ದು,
ಈ ಕ್ರೀಡಾಕೂಟದಲ್ಲಿ ಹಲವಾರು ಕಂಪೆನಿಯ ನೌಕರರು ಶಿಕ್ಷಣ ಸಂಸ್ಥೆಯ ಬೋಧನ ಮತ್ತು ಬೋಧಕೇತರ ಸಿಬ್ಬಂದಿ ಮತ್ತು ನೋಂದಾಯಿತ ವೃತ್ತಿಪರ ಸಂಘಗಳ ಸದಸ್ಯರು ಭಾಗವಹಿಸಿದ್ದರು…
ಈ ಕ್ರೀಡಾಕೂಟವನ್ನು ಸಾಮಾಜಿಕ ಕಾರಣಕ್ಕಾಗಿ ನಡೆಸಲಾಗುತ್ತಿದ್ದು , ಸಂಗ್ರಹವಾದ ಹಣವನ್ನು ‘ ಯೂತ್ ಫಾರ್ ಸೇವಾ ದ ವಿದ್ಯಾಚೇತನ ” ಕಾರ್ಯಕ್ರಮಕ್ಕೆ ದೇಣಿಗೆಯಾಗಿ ನೀಡಲಾಗುವುದು ,
ಈ ಪಂದ್ಯಾವಳಿಯನ್ನ ಕೋವಿಡ್ ಸುರಕ್ಷತಾ ಕ್ರಮಗಳೊಂದಿಗೆ ನಡೆಸಲಾಗಿದ್ದು,
- ಕ್ರೀಡಾಂಗಣದಲ್ಲಿ ಪ್ರೇಕ್ಷಕರು ಇರುವಂತಿಲ್ಲ,
- ಫೇಸ್ ಮಾಸ್ಕ್ ಮತ್ತು ಫೇಸ್ ಕವರ್ಸ್ ಬಳಕೆ,
- ಎಲ್ಲಾ ಆಟಗಾರರಿಗೆ ಥರ್ಮಲ್ ಸ್ಮಿನಿಂಗ್ ಮಾಡುವುದು,
- ಹ್ಯಾಂಡ್ ಸ್ಯಾನಿಟೈಜರ್ ಬಳಕೆಯನ್ನು ಕಡ್ಡಾಯ ಗೊಳಿಸಲಾಗಿದೆ,
- ಸಾಮಾಜಿಕ ಅಂತರ,
- ಆಟದ ಮೈದಾನದಲ್ಲಿ ಯಾವುದೇ ಸಂಬ್ರಮಾಚರಣೆಗೆ ಅವಕಾಶ ಇಲ್ಲ,
- 45 ವರ್ಷ ಮೇಲ್ಪಟ್ಟ ಯಾವುದೇ ವ್ಯಕ್ತಿಗೆ ಆಡುವ ಅವಕಾಶವಿಲ್ಲ…
ಈ ಉದ್ಘಾಟನಾ ಸಮಾರಂಭದಲ್ಲಿ ಆಕಾಶವಾಣಿಯ ಮುಖ್ಯಸ್ಥರಾದ ದಿವಾಕರ್ ಹೆಗ್ಡೆಯವರ ಎಂ ಐ ಟಿ ಮೈಸೂರು ಕಾಲೇಜಿನ ಪ್ರಾಂಶುಪಾಲರಾದ ಡಾ . ನರೇಶ್ ಕುಮಾರ್ ಬಿ ಜಿ ಸೆಂಟ್ , ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲರಾದ ಡಾ . ಋತು ಶಾಂತಕುಮಾರಿ , ಹಾಗೂ ಪ್ಯಾಲೇಸ್ ಸ್ಕೋಡಾದ ಮುಖ್ಯಸ್ಥರಾದ ಶ್ರೀಧರ್ ಪಿ ಕೆ, ಸೇರಿದಂತೆ ಹಲವರು ಉಪಸ್ಥಿತರಿದ್ದರು .