*ಸುಭುದೇಂದ್ರ ತೀರ್ಥರ ಸಮಕ್ಷಮದಲ್ಲಿ ನಡೆದ ಆ ಪವಾಡ ಏನನ್ನು ಸೂಚಿಸಿತ್ತು?*
*ಕಳೆದ ಬಾರಿ ಮಂತ್ರಾಲಯಕ್ಕೆ ಭೇಟಿ ನೀಡಿದ್ದ ಪುನೀತ್ ರಾಜ್‍ಕುಮಾರ್*
*ಮುಂದಿನ ಆರಾಧನೆಗೆ ಬರ್ತೆನೆ ಎಂದು ಪುನೀತ್ ರಾಜ್‍ಕುಮಾರ್ ಮಾತಾಡ್ತಿದ್ದಂತೆ ಕೆಟ್ಟ ಸುದ್ದಿಯ ಸೂಚನೆ ಸಿಕ್ಕಿತ್ತಾ?*
ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನದ ನಂತರ ದೊಡ್ಡದೊಂದು ಶೂನ್ಯ ಆವರಿಸಿದೆ.
ಸ್ಯಾಂಡಲ್ ವುಡ್ ಪವರ್ ಸ್ಟಾರ್ ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾರೆ ಆದರೆ
ಪುನೀತ್ ರಾಜ್‍ಕುಮಾರ್ ನಿಧನಕ್ಕೆ ಮುಂಚೆಯೇ ಸಿಕ್ಕಿತ್ತಾ ಸೂಚನೆ? ಎನ್ನುವ ಪ್ರಶ್ನೆ ಈ ವಿಡಿಯೋ ನೋಡಿದಾಗ ಕಾಡುತ್ತದೆ. ರಾಯರ ಸನ್ನಿಧಾನದಲ್ಲಿ ನಡೆದ ಪವಾಡ ಈಗ ವೈರಲ್ ಆಗುತ್ತಿದೆ.
ಸುಭುದೇಂದ್ರ ತೀರ್ಥರ ಸಮಕ್ಷಮದಲ್ಲಿ ನಡೆದ ಘಟನೆ ಇದು. ಕಳೆದ ಬಾರಿ ಮಂತ್ರಾಲಯಕ್ಕೆ (Mantralaya) ಭೇಟಿ ನೀಡಿದ್ದ ಪುನೀತ್ ರಾಜ್‍ಕುಮಾರ್ ಮಾತನಾಡಿದ್ದರು. ಕಳೆದ ತಿಂಗಳಷ್ಟೇ ಮಂತ್ರಾಲಯದ ರಾಯರ ಸನ್ನಿಧಾನಕ್ಕೆ ಭೇಟಿ ನೀಡಿದ್ದ ಪುನೀತ್ ರಾಜ್‍ಕುಮಾರ್ ಭಾಗ್ಯವಂತ ಸಿನಿಮಾ ಬಗ್ಗೆ ವಿವರವಾಗಿ ಮಾತನಾಡಿದ್ದರು.
ಮುಂದಿನ ಬಾರಿ ರಾಯರ ಆರಾಧನೆ ಬರುತ್ತೇನೆ ಎಂದು ಪುನೀತ್ ಹೇಳುತ್ತಿದ್ದಾಗಲೆ ರಾಯರ ಮುಖವಾಡ ಅಲುಗಾಡಿತ್ತು. ವೀಣೆ ಸಹ ಕೆಳಕ್ಕೆ ಬಿಳುವ ಸಾಧ್ಯತೆ ಇದ್ದು ಸರಿ ಮಾಡಲಾಗಿತ್ತು.
ಇದೊಂದು ಕೆಟ್ಟ ಸೂಚನೆ ಸಿಕ್ಕಿತ್ತಾ ಎನ್ನುವ ಮಾತನ್ನು ಅಭಿಮಾನಿಗಳು ಮಾತಾಡಿಕೊಳ್ಳುತ್ತಿದ್ದಾರೆ…
ರಾಜ್ ಕುಮಾರ್ ಕುಟುಂಬಕ್ಕೂ ಮಂತ್ರಾಲಯಕ್ಕೂ ಮುಂಚಿನಿಂದಲೂ ಅವಿನಾಭಾವ ಸಂಬಂಧವಿದೆ , ಕುಟುಂಬದವರೆಲ್ಲರೂ ರಾಘವೇಂದ್ರ ಸ್ವಾಮಿಗಳ ಆರಾಧಕರು ಅದರಂತೆ ಪುನಿತ್ ಕೂಡಾ ರಾಘವೇಂದ್ರ ಸ್ವಾಮಿಗಳು ಪರಮ ಭಕ್ತರಾಗಿದ್ದರು , ಎಲ್ಲೂ ಒಂದು ರಾಘವೇಂದ್ರ ಶ್ರೀ ಗಳು ಅವತ್ತೇ ಒಂದು ಸೂಚನೆ ನೀಡಿದ್ದರಾ ಎಂಬುದು ಈ ವಿಡಿಯೋ ನೋಡಿದರೆ ಗೊತ್ತಾಗುತ್ತದೆ..
ನಿಜಕ್ಕೂ ಇದು ಒಂಥರಾ ಪವಾಡವೇ ಅನಿಸುತ್ತದೆ..