ವರದಿ : ಲೋಹಿತ್ ಹನುಮಂತಪ್ಪ ಮೈಸೂರು
ಭಾನುವಾರ ರಾತ್ರಿ ಟೋಕಿಯೊ ಒಲಿಂಪಿಕ್ಸ್ ಜ್ಯೋತಿ ಆರುತ್ತಿ ದ್ದಂತೆಯೇ ಟೋಕಿಯೊ ಇನ್ನೊಂದು ಜಾಗತಿಕ ಕ್ರೀಡಾಕೂಟಕ್ಕೆ ಅಣಿಯಾಗತೊಡಗಿದೆ,
ಅದುವೇ ಪ್ಯಾರಾಲಿಂಪಿಕ್ಸ್ ಗೇಮ್ಸ್…
ಈ ಪ್ಯಾರಾಲಿಂಪಿಕ್ಸ್
ಆಗಸ್ಟ್. 24 ರಿಂದ ಸೆಪ್ಟೆಂಬರ್ 5ರ ತನಕ ನಡೆಯಲಿದೆ.
ಈ ಕೂಟದ ಇತಿಹಾಸದಲ್ಲೇ ಭಾರತ 54 ಕ್ರೀಡಾಪಟುಗಳ ಅತೀ ದೊಡ್ಡ ತಂಡವನ್ನು ರವಾನಿಸಲಿದೆ.
ಇಲ್ಲಿನ 21 ಕೇಂದ್ರಗಳಲ್ಲಿ 22 ಕ್ರೀಡೆಗಳ 593 ವಿಭಾಗಗಳ ಸ್ಪರ್ಧೆ ನಡೆಯಲಿದೆ. ಇದರಲ್ಲಿ ಭಾರತ 9 ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲಿದೆ…
ಈ ಬಾರಿಯ ಪ್ಯಾರಾಲಿಂಪಿಕ್ಸ್ ಗೇಮ್ಸ್ ನಲ್ಲಿ ಎಲ್ಲರ ಕಣ್ಣು ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಎರಡು ಚಿನ್ನದ ಪದಕ ತಂದುಕೊಟ್ಟಿದ್ದ ದೇವೇಂದ್ರ ಜಝಾರಿಯಾ ಮೇಲೆ…
ಅರೆ ಯಾರು ದೇವೇಂದ್ರ ಜಝಾರಿಯಾ ಅಂತೀರಾ ??!
ಅವರದ್ದೆ ಒಂದು ರೋಚಕ ಕಹಾನಿ….
ದೇವೇಂದ್ರ ಜಝಾರಿಯಾ
ಒಬ್ಬ ಭಾರತೀಯ ಪ್ಯಾರಾಲಿಂಪಿಕ್ ಜಾವೆಲಿನ್ ಎಸೆತಗಾರ ..
ಪ್ಯಾರಾಲಿಂಪಿಕ್ಸ್ನಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದ ಮೊದಲ ಭಾರತೀಯ..
ಅವರ ಮೊದಲ ಚಿನ್ನ ಅಥೆನ್ಸ್ನಲ್ಲಿ 2004 ಬೇಸಿಗೆ ಪ್ಯಾರಾಲಿಂಪಿಕ್ಸ್ನಲ್ಲಿ ಜಾವೆಲಿನ್ ಥ್ರೋ ದಲ್ಲಿ ಬಂತು…
ಪ್ಯಾರಾಲಿಂಪಿಕ್ಸ್ನಲ್ಲಿ ಎರಡನೇ ಚಿನ್ನದ ಪದಕ ಪಡೆದ ನಮ್ಮ ದೇಶದ ಕ್ರೀಡಾಪಟು.
ರಿಯೊ ಡಿ ಜನೈರೊ 2016 ಬೇಸಿಗೆ ಪ್ಯಾರಾಲಿಂಪಿಕ್ಸ್ನಲ್ಲಿ, ಅವರು ಇದೇ ಕ್ರೀಡೆಯಲ್ಲಿ ಎರಡನೇ ಚಿನ್ನದ ಪದಕ ಪಡೆದು,, ತನ್ನ ಹಿಂದಿನ ದಾಖಲೆಯನ್ನು ಉತ್ತಮ ಗೊಳಿಸಿದರು..
ಮೊನ್ನೆಯಷ್ಟೆ ನಡೆದ ಟೋಕಿಯೋ ಒಲಿಂಪಿಕ್ ನಲ್ಲಿ ಜಾವೆಲಿನ್ ಎಸೆತದಲ್ಲಿ ನಿರಜ್ ಚೋಪ್ರಾ ಅವರು ದಾಖಲೆ ನಿರ್ಮಿಸಿ ಐತಿಹಾಸಿಕ ಚಿನ್ನದ ಪದಕವನ್ನು ಭಾರತಕ್ಕೆ ತಂದು ಕೊಟ್ಟರು, ಅದೇ ರೀತಿ ಪ್ಯಾರಾಲಿಂಪಿಕ್ ನಲ್ಲಿ ಭಾರತಕ್ಕೆ ಎರಡು ಚಿನ್ನದ ಪದಕ ತಂದು ಕೊಟ್ಟಿರುವುದು ದೇವೇಂದ್ರ ಜಝಾರಿಯಾ ಪ್ಯಾರಾಲಿಂಪಿಕ್ಸ್ನಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ಅವರದ್ದು..
ಅವರು ರಾಜಸ್ಥಾನದ ಚೂರೂ ಜಿಲ್ಲೆಯಲ್ಲಿ 1981 ರಲ್ಲಿ ಜನಿಸಿದರು.
ಎಂಟನೇ ವಯಸ್ಸಿನಲ್ಲಿ, ಒಂದು ಮರ ಹತ್ತಲು ಹೋದಾಗ ಅಲ್ಲಿ ಸಜೀವ ವಿದ್ಯುತ್ ಕೇಬಲ್ ಮುಟ್ಟಿದರು.
ಅವರಿಗೆ ವೈದ್ಯಕೀಯ ಚಿಕಿತ್ಸೆ ಕೊಟ್ಟರು ಆದರೆ ವೈದ್ಯರು ಬದುಕಿ ಉಳಿಯಲು ಅವರ ಎಡಗೈ ಕತ್ತರಿಸಿ ತೆಗೆಯಲು ಒತ್ತಾಯಿಸಿದರು.
1997 ರಲ್ಲಿ ಅವರು ಶಾಲೆಯ ಕ್ರೀಡಾ ದಿನಾಚರಣೆಯ ಸ್ಪರ್ಧೆಯಲ್ಲಿ ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಕೋಚ್ ಆರ್.ಡಿ. ಸಿಂಗ್ ಅವರು ಒಂದು ಕೈ ಇಲ್ಲದ ದೇವೇಂದ್ರ ಜಝಾರಿಯಾ ಅವರ ಪ್ರತಭೆಯನ್ನು ಗುರುತಿಸಿದರು. ಆ ಹಂತದಿಂದ ಅವರು ಸಿಂಗ್ ರಿಂದ ತರಬೇತಿ ಪಡೆದರು…
ಅವರು 2004 ಪ್ಯಾರಾಲಿಂಪಿಕ್ ಚಿನ್ನದ ಪದಕ ಪಡೆದ ಕೀರ್ತಿಯನ್ನು ತಮ್ಮ ವೈಯಕ್ತಿಕ ತರಬೇತುದಾರ ಆರ್.ಡಿ. ಸಿಂಗ್ ಗೆ ನೀಡಿದರು,
2002 ರಲ್ಲಿ ದೇವೇಂದ್ರ ಕೊರಿಯಾದ 8 ನೇ ಇಫ್.ಇಎಸ್.ಪಿಐಸಿ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. 2004 ರಲ್ಲಿ ದೇವೇಂದ್ರ ಅಥೆನ್ಸ್ ಬೇಸಿಗೆಯ ಪ್ಯಾರಾಲಿಂಪಿಕ್ಸ್ನಗೇಮ್ಸ್ ಗೆ ಭಾರತದಿಂದ ಅವರ ಮೊಟ್ಟಮೊದಲ ಅರ್ಹತೆ ಸಿಕ್ಕಿತು. ಅವರು ಹಳೆಯ 59.77 ಮೀ.ಎಸೆತದ ದಾಖಲೆ ಮೀರಿ 62.15m ದೂರದ ಹೊಸ ವಿಶ್ವದಾಖಲೆಯನ್ನು ಮಾಡಿದರು.
ಈ ಎಸೆತ ಅವರಿಗೆ ಚಿನ್ನದ ಪದಕ ನೀಡಿತು. ಅವರು ತಮ್ಮ ದೇಶದಲ್ಲಿ ಪ್ಯಾರಾಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಪಡೆದ ಎರಡನೇ ಆಟಗಾರರಾದರು,
ಆಗಸ್ಟ್. 24 ರಿಂದ ನಡೆಯಲಿರುವ ಪ್ಯಾರಾಲಿಂಪಿಕ್ ನ ಉದ್ಘಾಟನಾ ಸಮಾರಂಭದಲ್ಲಿ
2016ರ ರಿಯೋ ಪ್ಯಾರಾಲಿಂಪಿಕ್ಸ್ ಗೇಮ್ಸ್‌ನ ಚಿನ್ನದ ಪದಕ ವಿಜೇತ ಹೈಜಂಪರ್ ಮರಿಯಪ್ಪನ್ ತಂಗವೇಲು ಭಾರತದ ತ್ರಿವರ್ಣ ಧ್ವಜಧಾರಿಯಾಗಲಿದ್ದಾರೆ.
*ಟೋಕಿಯೊ ಗೇಮ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಪ್ರಮುಖ ಕ್ರೀಡಾಪಟುಗಳು*
*ಪುರುಷರು*: ದೇವೇಂದ್ರ ಜಜಾರಿಯಾ, ಅಜಿತ್ ಸಿಂಗ್, ಸುಂದರ್ ಸಿಂಗ್ ಗುರ್ಜಾರ್ (ಜಾವೆಲಿನ್ ಎಫ್-46); ಸಂದೀಪ್ ಚೌಧರಿ, ಸುಮಿತ್ (ಜಾವೆಲಿನ್ ಎಫ್-64); ಮರಿಯಪ್ಪನ್ ತಂಗವೇಲು, ಶರದ್ ಕುಮಾರ್, ವರುಣ್ ಸಿಂಗ್ ಭಟ್ಟಿ (ಹೈಜಂಪ್ 1ಇ-63); ಅಮಿತ್ ಕುಮಾರ್, ಧರಮ್‌ಬೀರ್ (ಕ್ಲಬ್ ತ್ರೋ ಎಫ್-51); ನಿಶಾದ್ ಕುಮಾರ್, ರಾಮ್ ಪಾಲ್ (ಹೈಜಂಪ್ ಟಿ-47); ಸೋನಮ್ ರಾಣಾ (ಶಾಟ್‌ಪುಟ್ ಎಫ್-57); ನವದೀಪ್ (ಜಾವೆಲಿನ್ ಎಫ್-41); ಪ್ರವೀಣ್ ಕುಮಾರ್ (ಹೈಜಂಪ್ ಟಿ-64); ಯೋಗೇಶ್ ಕಾಥುನಿಯಾ (ಡಿಸ್ಕಸ್ ತ್ರೋ ಎಫ್-56); ವಿನೋದ್ ಕುಮಾರ್ (ಡಿಸ್ಕಸ್ ತ್ರೋ ಎಫ್-56); ರಂಜಿತ್ ಭಟ್ಟಿ (ಜಾವೆಲಿನ್ ಎಫ್-57); ಅರವಿಂದ್ (ಶಾಟ್‌ಪುಟ್ ಎಫ್-35); ಟೇಕ್ ಚಂದ್ (ಜಾವೆಲಿನ್).
*ವನಿತೆಯರು*: ಏಕ್ತಾ ಭ್ಯಾನ್, ಕಾಶಿಷ್ ಲಾಕ್ರಾ (ಕ್ಲಬ್ ತ್ರೋ ಎಫ್-51); ಭಾಗ್ಯಶ್ರೀ ಜಾಧವ್ (ಶಾಟ್‌ಪುಟ್ ಎಫ್-34); ಸಿಮ್ರಾನ್ (100 ಮೀ. ಟಿ-13).
ಒಟ್ಟಾರೆ ಈ ಬಾರಿಯ ಪ್ಯಾರಾಲಂಪಿಕ್ ನಲ್ಲಿ ಭಾರತದ ಆಟಗಾರರು ಎಷ್ಟು ಪದಕಗಳ ಸಾಧನೆ ಮಾಡುವರೋ ಎಂದು ಕಾದು ನೋಡಬೇಕಿದೆ….