ಲೋಹಿತ್ ಹನುಮಂತಪ್ಪ
ದೀಪವನ್ನು ಸೂರ್ಯ ಮತ್ತು ಅಗ್ನಿಯ ಸಂಕೇತವೆಂದು ವ್ಯಾಖ್ಯಾನಿಸಲಾಗಿದ್ದು,ದೀಪವು ಮಂಗಳಕರವಾದುದು. ಮಾನವನು ಅನ್ವೇಷಿಸಿದ ಅನೇಕ ಅದ್ಭುತಗಳಲ್ಲಿ ಅಗ್ನಿಯೂ ಒಂದು.
ದೀಪವು ಬೆಳಕಿನ ಜತೆಗೆ ಜೀವಗಳಿಗೆ ರಕ್ಷಣೆಯನ್ನು ನೀಡಿದ ಮತ್ತು ನೀಡುತ್ತಿರುವುದರಿಂದ ದೀಪಕ್ಕೆ ಮನುಷ್ಯ ದೈವತ್ವದ ಸ್ಥಾನವನ್ನು ನೀಡಿದ್ದಾನೆ.
ಭಾರತೀಯ ಪರಂಪರೆಯಲ್ಲಿ ಅಗ್ನಿ ಅಥವಾ ಜ್ಯೋತಿಗೆ ವಿಶೇಷವಾದ ಸ್ಥಾನಮಾನವಿದೆ. ವೇದಗಳ ಪ್ರಕಾರ ಇಂದ್ರನು ಪ್ರಮುಖ ದೇವತೆಯಾದರೆ ಅನಂತರದ ಸ್ಥಾನ ಅಗ್ನಿಗೇ. ದೀಪದ ಕಲ್ಪನೆ ಬಂದಂದಿನಿಂದ ನಾಗರಿಕತೆಯು ಹೊಸತಾದ ಶಕ್ತಿಯನ್ನು ಪಡೆಯಿತು.
ದೀಪದ ಬೆಳಕೇ ಮನುಷ್ಯ ನಿಗೆ ಜ್ಞಾನದ ಮೂಲವಾಗಿದ್ದು, ಇದನ್ನು ಸಾಂಸ್ಕೃತಿಕ ಪರಂಪರೆಯಲ್ಲಿ ಪವಿತ್ರವಾ ದದ್ದೆಂದು ಭಾವಿಸಲಾಗಿದೆ.
ದೀಪದ ಮಹಿಮೆಯನ್ನು ಅರಿತ ಮಾನವ ಅದನ್ನು ವಿವಿಧ ರೂಪಗಳಲ್ಲಿ ಸುಂದರಗೊಳಿಸಲು ಪ್ರಯತ್ನಿಸಿದ ಎನ್ನಬಹುದು.
ದೀಪ ಎಂದರೆ ಶಾಂತಿ, ಸಮೃದ್ಧಿ, ಬೆಳಕು, ಆರೋಗ್ಯ, ಸಂಪತ್ತು, ಮತ್ತು ಪ್ರಖರತೆಯ ಪ್ರತಿರೂಪ. ದೀಪವು ನಮ್ಮ ಜೀವನದ ಒಂದು ಸಕಾರಾತ್ಮಕ ಬೆಳವಣಿಗೆಯ ಸಂಕೇತ. ಇಂತಹ ದೀಪವನ್ನು ಬೆಳಗಿಸುವುದರಿಂದ ನಮ್ಮ ಜೀವನಕ್ಕೆ ಸಂತೋಷ, ನೆಮ್ಮದಿ, ಶಾಂತಿ ಯನ್ನು ದೊರೆಯುತ್ತದೆ.
ನಮ್ಮ ಕಷ್ಟ ಮತ್ತು ದುಃಖವನ್ನು ಹೋಗಲಾಡಿಸಿ, ಸಂತೋಷವನ್ನು ತೆರೆದ ಬಾಹುಗಳಿಂದ ಬರಮಾಡಿಕೊಳ್ಳಲು ದೀಪವನ್ನು ಹಚ್ಚು ತ್ತೇವೆ. ನಮಗೆ ಜ್ಞಾನದ ಬೆಳಕನ್ನು ನೀಡಿ, ಅಜ್ಞಾನದ ಅಂಧಕಾರವನ್ನು ಹೋಗ ಲಾಡಿಸಲು ದೀಪಲಕ್ಷ್ಮಿಯನ್ನು ಬೆಳಗಿಸಿ, ಪ್ರಾರ್ಥಿಸುತ್ತೇವೆ.
ದೀಪವನ್ನು ಬೆಳಗುವುದೆಂದರೆ ನಮ್ಮನ್ನು ನಾವು, ನಮ್ಮ ಆತ್ಮವನ್ನು ಬೆಳಗಿಕೊಂಡಂತೆ. ದೀಪದಲ್ಲಿ ಎಣ್ಣೆಯನ್ನು ತುಂಬುವ ಸ್ಥಳವನ್ನು ಮನುಷ್ಯನ ಮನಸ್ಸಿಗೆ ಹೋಲಿಸಲಾಗಿದೆ.
ದೀಪವನ್ನು ಹಚ್ಚಿದಾಗ ನಮ್ಮ ಮನಸ್ಸಿನಲ್ಲಿ ನಮ್ಮ ಬದುಕಿನ ಪ್ರಾಮುಖ್ಯದ ಅರಿವುಂಟಾಗುತ್ತದೆ. ಇದು ನಮಗೆ ಬೌದ್ಧಿಕವಾದ ಜ್ಞಾನ ವನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ.
ಬಡವ-ಬಲ್ಲಿದ, ಜಾತಿ ಮತ್ತು ಪಕ್ಷಗಳ ಭೇದವಿಲ್ಲದೇ ದೀಪವು ಅರಮನೆ ಅಥವಾ ಗುಡಿಸಲೆಂಬ ಭೇದವಿಲ್ಲದೇ ಸಮಾನವಾಗಿಯೇ ಬೆಳಗುತ್ತದೆ. ಮನುಷ್ಯನೂ ಯಾವುದೇ ಭೇದಭಾವವಿಲ್ಲದೆ ಬದುಕಿ ಸಮಾಜವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಬೇಕು ಎಂಬ ಸಂದೇಶವನ್ನು ದೀಪವು ನೀಡುತ್ತದೆ.
ಜ್ಞಾನದ ಸಂಕೇತವಾದ ದೀಪವು, ಕತ್ತಲೆಯಂತಿರುವ ಅಜ್ಞಾನವನ್ನು ಹೋಗ ಲಾಡಿಸುವ ಬೆಳಕು. ದೀಪಗಳನ್ನು ಮನೆಗಳಲ್ಲಿ ಬೆಳಗುವದರಿಂದ ನಮ್ಮ ಮನಸ್ಸುಗಳಲ್ಲಿ ತುಂಬಿರುವ ಅಜ್ಞಾನ ವೆಂಬ ಕತ್ತಲೆ(ತಮ)ಯು ದೂರ ಸರಿ ಯುತ್ತದೆ. ದೀಪ ಜೀವನದ ಪ್ರತೀ ಕ್ಷಣದಲ್ಲೂ ಆವರಿಸಿಕೊಂಡಿದ್ದು, ನಿತ್ಯ ದೀಪಗಳನ್ನು ಬೆಳಗುವುದರಿಂದ ನಮ್ಮ ಜೀವನದಲ್ಲಿ ಸಂತೋಷ, ನೆಮ್ಮದಿ, ಶಾಂತಿಯನ್ನು ತರಬಲ್ಲುದು.
“ಅಸತೋಮಾ ಸದ್ಗಮಯ, ತಮಸೋಮಾ ಜ್ಯೋತಿರ್ಗಮಯ, ಮೃತ್ಯೋರ್ಮಾ ಅಮೃತಂಗಮಯ ಓಂ ಶಾಂತಿಃ ಶಾಂತಿಃ ಶಾಂತಿಃ..’ ಎಂಬ ಶ್ಲೋಕವೇ ಹೇಳುವಂತೆ ಮನದೊಳಗೆ ತುಂಬಿರುವ ಅಸತ್ಯದಿಂದ ಸತ್ಯದೆಡೆಗೆ, ಅಜ್ಞಾನವೆಂಬ ಕತ್ತಲಿನಿಂದ ಜ್ಞಾನ ಎಂಬ ಬೆಳಕಿನ ಕಡೆಗೆ, ಮೃತ್ಯುವಿನಿಂದ ಅಮೃತತ್ವದೆಡೆಗೆ ನಂದಾದೀಪವು ನಮ್ಮನ್ನು ನಡೆಸುತ್ತದೆ ಎಂಬ ನಂಬಿಕೆ ಯಿದೆ.
ಜೀವನವೆಂಬ ನೌಕೆಯಲ್ಲಿ ಪ್ರತಿಯೊಬ್ಬರೂ ಒಂದೊಂದು ಸಣ್ಣ ಸಣ್ಣ ಜ್ಯೋತಿಗಳು, ನಾವು ನಮ್ಮೊಳಗೆ ಇರುವ ಜ್ಞಾನವೆಂಬ ಜ್ಯೋತಿಗಳನ್ನು ಬೆಳಗುವುದರಿಂದ ಮನಸ್ಸಿನಲ್ಲಿರುವಂತಹ ಅಜ್ಞಾನ, ಕಷ್ಟ, ನೋವುಗಳು ದೂರವಾಗಿ ಜ್ಞಾನ ಮತ್ತು ನೆಮ್ಮದಿಯ ಬೆಳಕು ಎಲ್ಲೆಡೆ ಪಸರಿಸುವಂತಾಗುತ್ತದೆ.
ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ದೇವತಾ ಸ್ಥಾನವಿದೆ. ಸಾಮಾನ್ಯವಾಗಿ ಗೋವಿನ ಸರಣಿಯನ್ನು ಗೋಮೂತ್ರವನ್ನ ಶುಭ ಕಾರ್ಯಕ್ಕೆ ಬಳಸಲಾಗುತ್ತದೆ..
ಅದೆ ರೀತಿ ಮಣ್ಣಿನಿಂದ, ಪಿಂಗಾಣಿಯಿಂದ,ದೀಪಗಳನ್ನು ತಯಾರು ಮಾಡೋದನ್ನ ಕೇಳಿರ್ತೀರಾ.
ಆದರೇ ಇಲ್ಲೊಂದು ಸಂಸ್ಥೆಯು ಗೋವಿನ ಸಗಣಿ, ಮೂತ್ರ ಬಳಸಿ ಕಾಮದೇನು ಹಣತೆ ಎಂಬ ವಿಭಿನ್ನ ಹಣತೆಯನ್ನು ತಯಾರಿಸುವ ಮೂಲಕ ಗಮನ ಸೆಳೆದಿದ್ದಾರೆ.
ಈ ಪರಿಸರ ಸ್ನೇಹಿ ,ಕಾಮದೇನು ಹಣತೆ ಮಣ್ಣೀನ ಹಣತೆಗಿಂತ ವಿಶೇಷವಾಗಿದೆ ಎನ್ನಬಹುದು,
ಹೌದು ಶ್ರೀಯುತ ಡಾ. ಅಜಯ್ ಕುಮಾರ್ ಜೈನ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಪ್ರಗತಿ ಪ್ರತಿಷ್ಠಾನ ಸಂಸ್ಥೆಯು ಸಾಕಷ್ಟು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದು , ಈ ರೀತಿಯ ಸಾಂಸ್ಕೃತಿಕ , ಸಂಪ್ರದಾಯ , ಮತ್ತು ನಮ್ಮ ಸಂಸ್ಕೃತಿಯನ್ನು ಉಳಿಸುವಂತಹ ಅನೇಕ ಕಾರ್ಯಗಳನ್ನು ಮಾಡಲಾಗುತ್ತಿದೆ..
ಮೈಸೂರಿನ ವಿದ್ಯಾರಣ್ಯಪುರಂನಲ್ಲಿರುವ ಪ್ರಗತಿ ಪ್ರತಿಷ್ಠಾನ ಸಂಸ್ಥೆಯು ಗೋ ಮೂತ್ರ, ಸಗಣಿ , ಹಾಲು , ತುಪ್ಪ , ಮಣ್ಣು, ಹರಶಿಣ , ಕುಂಕುಮ ಬಳಸಿ ದೀಪ ತಯಾರಿ ಮಾಡಿದ್ದಾರೆ..
ಈ ಪ್ರಗತಿ ಪ್ರತಿಷ್ಠಾನವು 2013 ರಲ್ಲಿ ಆರಂಭಗೊಂಡು, ಸುಮಾರು 200 ಕ್ಕೂ ಹೆಚ್ಚು ಸಮಾನ ಮನಸ್ಕರು ಇದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ,
ಒಟ್ಟಾರೆ ಮನೆಯಲ್ಲಿ ಈ ಕಾಮದೇನು ದೀಪವನ್ನು ಹಚ್ಚುವು ದರಿಂದ ಆ ಪರಿಸರದಲ್ಲಿ ಶಾಂತಿ, ನೆಮ್ಮದಿ ಹಾಗೂ ಧನಾತ್ಮಕವಾದ ಚಿಂತನೆಗಳು ಹೆಚ್ಚುತ್ತದೆ ಎಂಬುದು ಪ್ರಗತಿ ಪ್ರತಿಷ್ಠಾನದ ಆಶಯ ..
“ದೀಪದಿಂದ ದೀಪವ ಹಚ್ಚಬೇಕು ಮಾನವ’ ಎಂಬ ಕವಿವಾಣಿಯಂತೆ ದೀಪಾವಳಿಯಲ್ಲಿ ನಮ್ಮಲ್ಲಿರುವ ಉತ್ತಮ ಜ್ಞಾನವನ್ನು ಇತರರಿಗೂ ಹಂಚಿ ಎಲ್ಲೆಡೆ ಜ್ಞಾನದ ಜ್ಯೋತಿಯು ಪ್ರಜ್ವಲಿಸುವಂತೆ ಮಾಡೋಣ..
ವಿಶೇಷ ವರದಿ ಲೋಹಿತ್ ಹನುಮಂತಪ್ಪ ಮೈಸೂರು.